ಕಾಂಗ್ರೆಸ್‌ ಇಲ್ಲದೆ ಪರ್ಯಾಯ ರಾಜಕೀಯ ರಂಗ ರಚನೆ ಅಸಾಧ್ಯವೆಂದ ಪವಾರ್‌

ಹೊಸದಿಲ್ಲಿ: ಬಿಜೆಪಿಗೆ ಪರ್ಯಾಯವಾಗಿ ದೇಶದಲ್ಲಿ ಯಾವುದೇ ರಾಜಕೀಯ ರಂಗ ರಚನೆಯಾದರೂ ಅನ್ನು ಆ ಮೈತ್ರಿಕೂಟದಿಂದ ಹೊರಗಿಡುವ ಮಾತೇ ಇಲ್ಲ ಎಂದು ರಾಷ್ಟ್ರವಾದಿ ಕಾಂಗ್ರೆಸ್‌ ಪಾರ್ಟಿ (ಎನ್‌ಸಿಪಿ) ವರಿಷ್ಠ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಪವಾರ್‌ ಮತ್ತು ಟಿಎಂಸಿ ನಾಯಕ ಯಶವಂತ್‌ ಸಿನ್ಹಾ ಇತ್ತೀಚೆಗೆ ನಡೆಸಿದ ಪ್ರತಿಪಕ್ಷ ನಾಯಕರ ಸಭೆ ಕುರಿತಂತೆ ಕಾಂಗ್ರೆಸ್‌ ಅಸಮಾಧಾನ ಹೊಂದಿದೆ ಎಂಬ ವರದಿ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. "ರಾಷ್ಟ್ರಮಂಚ್‌ ಮೂಲಕ ಯೋಜಿಸಲಾಗಿದ್ದ ಪ್ರತಿಪಕ್ಷಗಳ ಸಭೆಯಲ್ಲಿ ರಾಜಕೀಯದ ಕುರಿತು ಚರ್ಚೆಯೇ ನಡೆಯಲಿಲ್ಲ. ಒಂದೊಮ್ಮೆ ಬಿಜೆಪಿಗೆ ಪರ್ಯಾಯವಾಗಿ ತೃತೀಯ ರಂಗವೋ, ಮತ್ತೊಂದು ರಂಗವೋ ರಚನೆ ಆಗುವುದಿದ್ದರೆ ಕಾಂಗ್ರೆಸ್‌ ಅನ್ನು ಹೊರಗಿಟ್ಟು ರಾಜಕೀಯ ರಂಗ ರಚಿಸಲು ಸಾಧ್ಯವೇ ಇಲ್ಲ. ಹಾಗೆಯೇ ಅಂತಹ ಯಾವುದೇ ರಂಗ ರಚನೆಯಾದರೆ ಅಲ್ಲಿ ಸಾಮೂಹಿಕ ನಾಯಕತ್ವ ಮುಖ್ಯವಾಗುತ್ತದೆ," ಎಂದೂ ಪವಾರ್‌ ಹೇಳಿದ್ದಾರೆ. ''ಮಹಾರಾಷ್ಟ್ರದಲ್ಲಿನ ಮಹಾವಿಕಾಸ ಅಘಾಡಿ ಮೈತ್ರಿಕೂಟಕ್ಕೆ ಯಾವುದೇ ಸಮಸ್ಯೆ ಇಲ್ಲ. ಅದರಲ್ಲಿಯೂ ಕಾಂಗ್ರೆಸ್‌ ಮತ್ತು ಎನ್‌ಸಿಪಿ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಉಭಯ ಪಕ್ಷಗಳ ಮೈತ್ರಿ ಮಹಾರಾಷ್ಟ್ರದಲ್ಲಿಯೂ ಮುಂದುವರಿಯಲಿದೆ. ಮೈತ್ರಿಕೂಟದಲ್ಲಿ ಬಿರುಕು ಮೂಡಿದೆ ಎಂಬುದೆಲ್ಲ ವದಂತಿಗಳಷ್ಟೇ,'' ಎಂದೂ ಪವಾರ್‌ ತಿಳಿಸಿದ್ದಾರೆ.


from India & World News in Kannada | VK Polls https://ift.tt/3jftlHc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...