ದೇಶಾದ್ಯಂತ 174 ಜಿಲ್ಲೆಗಳಿಗೆ ಹರಡಿದ 'ಡೆಲ್ಟಾ ಪ್ಲಸ್‌' ರೂಪಾಂತರಿ ವೈರಸ್‌

ಹೊಸದಿಲ್ಲಿ: ದೇಶಾದ್ಯಂತ ಕರೊನಾ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್‌ನ 48 ಬಗೆಯ ತಳಿಗಳು ಪತ್ತೆಯಾಗಿವೆ. ಈ ಮಾದರಿಗಳು ಒಟ್ಟು 10 ರಾಜ್ಯಗಳಿಂದ ವರದಿಯಾಗಿದ್ದು, ಮಹಾರಾಷ್ಟ್ರದಿಂದಲೇ 22 ಪ್ರಕರಣಗಳು ವರದಿಯಾಗಿವೆ. ಕಳೆದ ಮಾರ್ಚ್‌ನಲ್ಲಿ ಕೇವಲ 50 ಜಿಲ್ಲೆಗಳಲ್ಲಿದ್ದ ಡೆಲ್ಟಾ ಪ್ಲಸ್‌ ರೂಪಾಂತರಿ ವೈರಸ್‌, ಇದುವರೆಗೆ ದೇಶಾದ್ಯಂತ 174ಕ್ಕೂ ಹೆಚ್ಚು ಜಿಲ್ಲೆಗಳಿಗೆ ಹರಡಿದೆ ಎಂದು ಸರಕಾರಿ ವರದಿಗಳು ತಿಳಿಸಿವೆ. ತಮಿಳುನಾಡಿನಲ್ಲಿ ಡೆಲ್ಟಾ ಪ್ಲಸ್‌ನ 9 ಪ್ರಕರಣಗಳು ದಾಖಲಾಗಿವೆ. ಮಧ್ಯಪ್ರದೇಶದಲ್ಲಿ 7, ಕೇರಳದಲ್ಲಿ 3, ಪಂಜಾಬ್ ಮತ್ತು ಗುಜರಾತ್‌ನಲ್ಲಿ ತಲಾ 2, ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಕರ್ನಾಟಕದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ. ಎನ್‌ಸಿಡಿಸಿ NCDC ಸೇರಿದಂತೆ ಹತ್ತು ಸಂಶೋಧನಾ ಸಂಸ್ಥೆಗಳು ದೇಶದಲ್ಲಿ ಕರೊನಾ ವೈರಸ್‌ನ ಜಿನೋಮ್ ಸೀಕ್ವೆನ್ಸಿಂಗ್ ಅಧ್ಯಯನದಲ್ಲಿ ತೊಡಗಿವೆ. ಎನ್‌ಸಿಡಿಸಿ ನಿರ್ದೇಶಕ ಸುಜಿತ್ ಸಿಂಗ್ ಹೇಳುವ ಪ್ರಕಾರ, “ಈ ಡೆಲ್ಟಾ ಪ್ಲಸ್‌ನ ಪ್ರಕರಣಗಳು ಬಹಳ ಸೀಮಿತವಾಗಿವೆ. 12 ಜಿಲ್ಲೆಗಳಲ್ಲಿ ಸುಮಾರು 50 ಪ್ರಕರಣಗಳು ವರದಿಯಾಗಿವೆ ಮತ್ತು ಇದು ಕಳೆದ ಮೂರು ತಿಂಗಳಲ್ಲಿ ಸಂಭವಿಸಿದೆ. ಯಾವುದೇ ಜಿಲ್ಲೆ ಅಥವಾ ರಾಜ್ಯಗಳಲ್ಲಿ ಇದು ಶೀಘ್ರವಾಗಿ ಹರಡುತ್ತದೆ ಎಂದು ಹೇಳಲಾಗುವುದಿಲ್ಲ" ಎಂದಿದ್ದಾರೆ. 8 ರಾಜ್ಯಗಳಿಗೆ ವಿಶೇಷ ನಿರ್ದೇಶನ ನೀಡಿದ ಸರ್ಕಾರ ಜನಸಂದಣಿ ನಿಯಂತ್ರಣ, ವ್ಯಾಪಕ ಪರೀಕ್ಷೆಯಂತಹ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ, ಡೆಲ್ಟಾ ಪ್ಲಸ್ ರೂಪಾಂತರಗಳು ಪತ್ತೆಯಾದ ಜಿಲ್ಲೆಗಳಲ್ಲಿ ಆದ್ಯತೆ ಮೇರೆಗೆ ಲಸಿಕೆ ಹೆಚ್ಚಿಸಲು ಎಂಟು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಒತ್ತಾಯಿಸಿದೆ. ತಮಿಳುನಾಡು, ರಾಜಸ್ಥಾನ, ಕರ್ನಾಟಕ, ಪಂಜಾಬ್, ಆಂಧ್ರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್ ಮತ್ತು ಹರಿಯಾಣಗಳಿಗೆ ಈ ಕುರಿತು ಪತ್ರ ಬರೆದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ (Rajesh Bhushan) ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. SARS-CoV-2ನ ಡೆಲ್ಟಾ ಪ್ಲಸ್ ರೂಪಾಂತರಿ ಆಂಧ್ರ ಪ್ರದೇಶದ ತಿರುಪತಿ ಜಿಲ್ಲೆ, ಗುಜರಾತ್ ನ ಸೂರತ್, ಹರಿಯಾಣಾದ ಫಾರಿದಾಬಾದ್, ಜಮ್ಮು ಮತ್ತು ಕಾಶ್ಮೀರದ ಕಟರಾ, ರಾಜಸ್ಥಾನದ ಬಿಕಾನೆರ್, ಪಂಜಾಬ್ ನ ಪಟಿಯಾಲಾ, ಕರ್ನಾಟಕದ ಮೈಸೂರು ಹಾಗೂ ತಮಿಳುನಾಡಿನ ಚೆನ್ನೈ, ಮಧುರೈ ಹಾಗೂ ಕಾಂಚೀಪುರಂನಲ್ಲಿ ಪತ್ತೆಯಾಗಿವೆ ಎಂದು ಭೂಷಣ್ ಮಾಹಿತಿ ನೀಡಿದ್ದಾರೆ.


from India & World News in Kannada | VK Polls https://ift.tt/3vXuPsb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...