7ನೇ ವೇತನ ಆಯೋಗ: ಕೇಂದ್ರ ಸರಕಾರಿ ನೌಕರರಿಗೆ ಸಿಹಿ ಸುದ್ದಿ? ಡಿಎ, ಡಿಆರ್ ಹೆಚ್ಚಳದ ನಿರ್ಧಾರ ಸಾಧ್ಯತೆ

ಹೊಸದಿಲ್ಲಿ: ತಮ್ಮ ವೇತನದಲ್ಲಿ ಹೆಚ್ಚಳಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಕೇಂದ್ರ ಸರಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಶನಿವಾರ ಸಿಹಿ ಸುದ್ದಿ ದೊರಕುವ ನಿರೀಕ್ಷೆಯಿದೆ. ಬಾಕಿ ಉಳಿದಿರುವ (ಡಿಎ) ಹೆಚ್ಚಳದ ಕುರಿತಾದ ಕೇಂದ್ರ , ರಾಷ್ಟ್ರೀಯ ಜಂಟಿ ಸಲಹಾ ಯಾಂತ್ರಿಕ ಮಂಡಳಿ (ಜೆಸಿಎಂ) ಮತ್ತು ಸಿಬ್ಬಂದಿ ಹಾಗೂ ತರಬೇತಿ ಇಲಾಖೆಗಳು ಶನಿವಾರ ನಡೆಸಲಿರುವ ಸಭೆಯಲ್ಲಿ 7ನೇ ವೇತನ ಆಯೋಗದ ಶಿಫಾರಸುಗಳ ಅನ್ವಯ ಡಿಎ ಅರಿಯರ್ಸ್ ಏರಿಕೆ ಕುರಿತಾದ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ. ಹಾಗೂ ಪಿಂಚಣಿದಾರರ ತಡೆಹಡಿಯಲಾಗಿದ್ದ ಡಿಎ ಮತ್ತು ತುಟ್ಟಿ ಭತ್ಯೆ ಪರಿಹಾರಗಳನ್ನು (ಡಿಆರ್) 2021ರ ಜುಲೈ 1ರಿಂದ ಮರು ಆರಂಭಿಸುವುದಾಗಿ ಸಂಸತ್‌ಗೆ ಕೇಂದ್ರ ತಿಳಿಸಿತ್ತು. ಕೇಂದ್ರ ಸರಕಾರಿ ನೌಕರರ ಡಿಎ ಹಾಗೂ ಮತ್ತು ಪಿಂಚಣಿದಾರರ ಡಿಆರ್‌ನ ಮೂರು ಕಂತುಗಳು 2020ರ ಜನವರಿ 1, 2020ರ ಜುಲೈ 1 ಮತ್ತು 2021ರ ಜನವರಿ 1ರಂದು ಬಾಕಿ ಉಳಿದಿವೆ. ಕೋವಿಡ್ 19 ಸಾಂಕ್ರಾಮಿಕದ ಕಾರಣದಿಂದ ಅವುಗಳನ್ನು ತಡೆಹಿಡಿಯಲಾಗಿತ್ತು. ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು 2020ರ ಜನವರಿಯಲ್ಲಿ ಶೇ 4ರಷ್ಟು ಹೆಚ್ಚಿಸಲಾಗಿತ್ತು. 2020ರ ಜೂನ್‌ನಲ್ಲಿ ಶೇ 3 ಹಾಗೂ ಈ ವರ್ಷದ ಜನವರಿಯಲ್ಲಿ ಶೇ 4ರಷ್ಟು ಏರಿಸಲಾಗಿತ್ತು. 2021ರ ಜುಲೈನಿಂದ ಡಿಎ ಮರಳಿ ತರುತ್ತಿರುವುದು ಸುಮಾರು 55 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳು ಹಾಗೂ 65 ಲಕ್ಷಕ್ಕೂ ಅಧಿಕ ಪಿಂಚಣಿದಾರರಿಗೆ ನೆರವಾಗಲಿದೆ. ಜುಲೈ 1ರಿಂದ ಡಿಎ ಹೆಚ್ಚಳವು, ಆ ದಿನದಿಂದಲೇ ಜಾರಿಯಾದರೂ ಹಿಂದಿನ ಅವಧಿಯ ಪರಿಷ್ಕೃತವಾಗದ ಡಿಎ ಮೇಲೆ ಉದ್ಯೋಗಿಗಳು ಯಾವುದೇ ಅರಿಯರ್ಸ್ ಪಡೆದುಕೊಳ್ಳುವುದಿಲ್ಲ. ಪ್ರಸ್ತುತ ಇರುವ ಶೇ 17ರ ಡಿಎ ಪ್ರಮಾಣವು ಶೇ 11ರಷ್ಟು ಹೆಚ್ಚುವ ನಿರೀಕ್ಷೆಯಿದೆ. ಇದರಿಂದ ಒಟ್ಟಾರೆ ಡಿಎ ಶೇ 28ಕ್ಕೆ ಏರಿಕೆಯಾಗಲಿದೆ. ವೇತನ ನಿಯಮದ ಪ್ರಕಾರ ಕೇಂದ್ರ ಸರಕಾರಿ ನೌಕರರ ಕನಿಷ್ಠ ವೇತನ 18,000 ರೂ ಇದ್ದು, ಇದಕ್ಕೆ ಶೇ 15ರಷ್ಟು ತುಟ್ಟಿಭತ್ಯೆ ಸೇರ್ಪಡೆ ಮಾಡುವ ನಿರೀಕ್ಷೆಯಿದೆ.


from India & World News in Kannada | VK Polls https://ift.tt/35QFQ3S

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...