ಮೂರನೇ ಮದುವೆಯಾಗಲು ಬಯಸಿದ್ದ ಮೌಲ್ವಿಯ ಗುಪ್ತಾಂಗ ಕತ್ತರಿಸಿದ ಎರಡನೇ ಪತ್ನಿ

ಮುಜಫ್ಫರನಗರ: ಮೂರನೇ ಮದುವೆಯಾಗಲು ಬಯಸಿದ್ದ 57 ವರ್ಷದ ಮೌಲ್ವಿಯ ಗುಪ್ತಾಂಗವನ್ನು ಆತನ ಎರಡನೆಯ ಪತ್ನಿಯೇ ಕತ್ತರಿಸಿದ ಪರಿಣಾಮ ಆತ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮುಜಫ್ಫರನಗರದಲ್ಲಿ ನಡೆದಿದೆ. ಪತ್ನಿಯ ಛೇದಿಸಿ ಆತನ ಸಾವಿಗೆ ಕಾರಣಳಾದ ಪತ್ನಿಯನ್ನು ಬಂಧಿಸಲಾಗಿದೆ. ಪತಿ ಮಲಗಿದ್ದ ಸಮಯದಲ್ಲಿ ಅಡುಗೆ ಕೋಣೆಯಿಂದ ಹತ್ತಿರವಾದ ಚಾಕು ತೆಗೆದುಕೊಂಡು ಆತನ ಮೇಲೆ ಆಕ್ರಮಣ ಮಾಡಿದ್ದಾಗಿ ಆಕೆ ತಿಳಿಸಿದ್ದಾಳೆ. ಗಂಡ ಮೂರನೇ ಮದುವೆಯಾಗಲು ಬಯಸಿದ್ದು ಪತ್ನಿಯನ್ನು ರೊಚ್ಚಿಗೆಬ್ಬಿಸಿತ್ತು. ಇದರಿಂದ ಕೋಪಗೊಂಡಿದ್ದ ಆಕೆ ಗಂಡ ಗುಪ್ತಾಂಗವನ್ನು ಕತ್ತರಿಸಿದ್ದಾಳೆ. ಆತ ರಕ್ತದ ಮಡುವಿನಲ್ಲಿ ನರಳಾಡಿ ಮೃತಪಟ್ಟಿದ್ದಾನೆ. ಸ್ಥಳೀಯ ವಕೀಲ್ ಅಹ್ಮದ್ ಎಂಬಾತನ ಎರಡನೆಯ ಪತ್ನಿ ಹಜ್ರಾ ಈ ಕೃತ್ಯ ಎಸಗಿದ್ದಾಳೆ. ಮೂರನೇ ಆಗದಂತೆ ಆಕೆ ಪತಿಯನ್ನು ಹಲವು ಬಾರಿ ಬೇಡಿಕೊಂಡಿದ್ದಳು. ಆದರೆ ಆತ ಅದಕ್ಕೆ ಕಿವಿಗೊಟ್ಟಿರಲಿಲ್ಲ. ಶಿಕಾರ್ಪುರ ಎಂಬ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಆ ಸಮಯದಲ್ಲಿ ಆತನ ಮೊದಲ ಪತ್ನಿ ಮನೆಯಲ್ಲಿ ಇರಲಿಲ್ಲ. 'ಮಹಿಳೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಮತ್ತೊಂದು ಮದುವೆಯಾಗಲು ಪತಿ ಬಯಸಿದ್ದ. ಆಕೆ ಅದನ್ನು ತಡೆಯಲು ಪ್ರಯತ್ನಿಸಿದ್ದಳು. ಅವರ ವಾದ ದೊಡ್ಡ ಕಲಹಕ್ಕೆ ತಿರುಗಿತ್ತು' ಎಂದು ಫುಗಣದ ಉಪ ಪೊಲೀಸ್ ವರಿಷ್ಠಾಧಿಕಾರಿ ಶರದ್ ಚಾದ್ ಶರ್ಮಾ ತಿಳಿಸಿದ್ದಾರೆ.


from India & World News in Kannada | VK Polls https://ift.tt/3xQ2LYU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...