100 ವರ್ಷದ ನನ್ನ ತಾಯಿ ಎರಡೂ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ: ಲಸಿಕೆ ಹಿಂಜರಿಕೆ ಕುರಿತು ಜನರಲ್ಲಿ ಧೈರ್ಯ ತುಂಬಿದ ಮೋದಿ

ಹೊಸದಿಲ್ಲಿ: ಶತಾಯುಷಿಯಾಗಿರುವ ತಮ್ಮ ತಾಯಿಯೇ ಕೋವಿಡ್ 19 ಪಡೆದುಕೊಂಡಿದ್ದಾರೆ. ಹೀಗಿರುವಾಗ ಜನರು ಲಸಿಕೆ ಕುರಿತು ಹೆಸರುವ ಅಗತ್ಯವಿಲ್ಲ. ಲಸಿಕೆ ಕುರಿತಾದ ಗಾಳಿಸುದ್ದಿಗಳಿಗೆ ಕಿವಿಗೊಡದೆ ಲಸಿಕೆ ಪಡೆದುಕೊಳ್ಳಬೇಕು ಎಂದು ಪ್ರಧಾನಿ ಜನರಲ್ಲಿ ಮನವಿ ಮಾಡಿದ್ದಾರೆ. ತಮ್ಮ ತಿಂಗಳ ರೇಡಿಯೋ ಭಾಷಣ 78ನೇ '' ಆವೃತ್ತಿಯಲ್ಲಿ ಭಾನುವಾರ ಮಾತನಾಡಿದ ಪ್ರಧಾನಿ, 'ನಿಮ್ಮೆಲ್ಲರಿಗೂ ಮನವಿ ಮಾಡುತ್ತೇನೆ- ವಿಜ್ಞಾನವನ್ನು ನಂಬಿ. ನಮ್ಮ ವಿಜ್ಞಾನಿಗಳನ್ನು ನಂಬಿ. ಅನೇಕ ಜನರು ಲಸಿಕೆ ಪಡೆದುಕೊಂಡಿದ್ದಾರೆ. ನಾನು ಎರಡೂ ಡೋಸ್‌ಗಳನ್ನು ಪಡೆದುಕೊಂಡಿದ್ದೇನೆ. ನನ್ನ ತಾಯಿ ಹೆಚ್ಚೂಕಡಿಮೆ ನೂರು ವರ್ಷ ವಯಸ್ಸಿನವರು. ಅವರು ಕೂಡ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ. ಲಸಿಕೆಗೆ ಸಂಬಂಧಿಸಿದ ಯಾವುದೇ ವದಂತಿಗಳನ್ನು ನಂಬಬೇಡಿ. ಲಸಿಕೆ ಕುರಿತಾದ ಗಾಳಿಸುದ್ದಿಗಳನ್ನು ನಂಬದಿರೋಣ' ಎಂದು ಹೇಳಿದ್ದಾರೆ. ಲಸಿಕೆ ಪಡೆಯುವುದರಿಂದ ಮಾತ್ರವೇ ಮಾರಕ ಕಾಯಿಲೆಯ ವಿರುದ್ಧ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು. 'ಲಸಿಕೆ ಕುರಿತಾದ ವದಂತಿಗಳನ್ನು ಹರಡಿಸುತ್ತಿರುವವರು ಅದನ್ನು ಮಾಡಿಕೊಂಡಿರಲಿ. ನಾವೆಲ್ಲರೂ ನಮ್ಮ ಕೆಲಸ ಮಾಡುತ್ತೇವೆ ಮತ್ತು ನಮ್ಮ ಸುತ್ತಲಿನ ಜನರು ಲಸಿಕೆ ತೆಗೆದುಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುತ್ತೇವೆ. ಬೆದರಿಕೆ ಇನ್ನೂ ಇದೆ. ನಾವು ಲಸಿಕೆ ಮತ್ತು ಕೋವಿಡ್ 19 ಶಿಷ್ಟಾಚಾರಗಳನ್ನು ಪಾಲಿಸುವುದರ ಮೇಲೆ ಗಮನ ಹರಿಸಬೇಕು' ಎಂದು ಅವರು ಮನವಿ ಮಾಡಿದ್ದಾರೆ. ವೈದ್ಯರಿಗೆ ಶ್ಲಾಘನೆಇದೇ ವೇಳೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ವದ ಕಾಣಿಕೆ ನೀಡುತ್ತಿರುವ ವೈದ್ಯರನ್ನು ಪ್ರಧಾನಿ ಶ್ಲಾಘಿಸಿದರು. 'ಇನ್ನು ಕೆಲವು ದಿನಗಳಲ್ಲಿ, ಜುಲೈ 1ರಂದು ನಾವು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಿದ್ದೇವೆ. ಮಹಾನ್ ಮತ್ತು ದೇಶದ ಮುತ್ಸದ್ದಿ ಡಾ. ಬಿ.ಸಿ ರಾಯ್ ಅವರ ಜನ್ಮದಿನೋತ್ಸವವನ್ನು ಈ ದಿನ ಸಮರ್ಪಿಸುತ್ತಿದ್ದೇವೆ. ಕೊರೊನಾ ಅವಧಿಯಲ್ಲಿ ವೈದ್ಯರ ಕೊಡುಗೆಗೆ ನಾವೆಲ್ಲರೂ ಕೃತಜ್ಞರಾಗಿದ್ದೇವೆ. ನಮ್ಮ ವೈದ್ಯರು ತಮ್ಮ ಪ್ರಾಣ ಲೆಕ್ಕಿಸದೆ ನಮಗೆ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಈ ಬಾರಿಯ ವೈದ್ಯರ ದಿನಾಚರಣೆ ಬಹಳ ವಿಶೇಷವಾಗಿದೆ' ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3jmjG1k

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...