ರಾಜ್ಯದಲ್ಲಿ ಸೋಂಕಿನ ಸರಾಸರಿಗಿಂತಾ ಸಾವಿನ ಸರಾಸರಿಯೇ ಹೆಚ್ಚು..! ಭಯ ಬೇಡ ಅಂತಾರೆ ತಜ್ಞರು..

ಮಹಾಬಲೇಶ್ವರ ಕಲ್ಕಣಿ : ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸೋಂಕಿನ ಸರಾಸರಿಗಿಂತ, ಸಾವಿನ ಸರಾಸರಿ ಹೆಚ್ಚಾಗಿದೆ. ಇಳಿಕೆಯಾದ ಹಾಗೆ ಸಾವಿನ ಪ್ರಮಾಣ ಕೂಡ ಇಳಿಕೆಯಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದು ಉಲ್ಟಾ ಆಗಿದೆ. ಜೂನ್ 20ರಂದು ಸೋಂಕಿನ ಪ್ರಮಾಣ ಶೇ. 2.58ರಷ್ಟಿದ್ದು, ಸಾವಿನ ಪ್ರಮಾಣ ಶೇ. 2.65ರಷ್ಟಿತ್ತು. ಜೂನ್ 21 ಹೊರತುಪಡಿಸಿ ಎಲ್ಲಾ ದಿನಗಳಲ್ಲೂ ಸೋಂಕಿನ ಸರಾಸರಿಗಿಂತ, ಸಾವಿನ ಸರಾಸರಿ ಹೆಚ್ಚಾಗಿದೆ. ಜೂನ್ 22ರ ವೇಳೆಗೆ ಸೋಂಕು ಶೇ. 2.09ಕ್ಕೆ ಇಳಿಕೆಯಾದರೆ, ಶೇ. 3.44ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಸೋಂಕಿನ ಸಂಖ್ಯೆಯನ್ನು ಸರಾಸರಿಯಲ್ಲಿ ನೋಡುವುದಾದರೆ ಸೋಂಕು ಸಾಕಷ್ಟು ತಗ್ಗಿದಂತೆ ಕಾಣುತ್ತದೆ. ಆದರೆ ಸಾವಿನ ಸರಾಸರಿಯಲ್ಲಿ ಏರಿಕೆಯಾಗುತ್ತಿದೆ. ಆದರೆ ಈ ಅಂಕಿ ಅಂಶದಿಂದ ಭಯಪಡುವ ಅಗತ್ಯವಿಲ್ಲ ಎನ್ನುವುದು ತಾಂತ್ರಿಕ ಸಮಿತಿಯ ಸದಸ್ಯರ ಅಭಿಪ್ರಾಯ. 'ಸಾವು ಮತ್ತು ಸೋಂಕಿನ ಸಂಖ್ಯೆಯನ್ನು ತಾಳೆ ಹಾಕಿ ನೋಡಿದಾಗ ಸಾವಿನ ಸಂಖ್ಯೆ ಹೆಚ್ಚಾದಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ. ಸೋಂಕಿನ ಸಂಖ್ಯೆ ಕಡಿಮೆಯಿದ್ದಾಗ, ಸಾವಿನ ಸಂಖ್ಯೆ ಕಡಿಮೆ ಇದ್ದರೂ ಅಂಕಿ ಅಂಶದಲ್ಲಿ ಹೆಚ್ಚಾಗಿ ಕಾಣಿಸುತ್ತದೆ. ಮೊದಲು ಸೋಂಕಿನ ಸಂಖ್ಯೆ 30 ರಿಂದ 40 ಸಾವಿರ ಇರುತ್ತಿತ್ತು. ಸಾವಿನ ಸಂಖ್ಯೆ ಹೆಚ್ಚಿದ್ದರೂ ಸ್ವಾಭಾವಿಕವಾಗಿ ಕಡಿಮೆ ಕಾಣುತ್ತಿತ್ತು. ಅಂಕಿಅಂಶ ಹೊರತುಪಡಿಸಿ ನೋಡುವುದಾದರೆ ಸಾವಿನ ಸಂಖ್ಯೆ ಕಡಿಮೆಯಾಗಿದೆ' ಎನ್ನುತ್ತಾರೆ ಕೋವಿಡ್‌ ತಾಂತ್ರಿಕ ಸಮಿತಿ ಸದಸ್ಯ ಹಾಗೂ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಸಿ.ಎನ್‌. ಮಂಜುನಾಥ್‌. 'ಈಗಾಗಲೇ ತಿಂಗಳುಗಟ್ಟಲೆ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವವರು ಈಗ ಮೃತರಾಗಿಬಹುದು. ಇದರಿಂದ ವ್ಯತ್ಯಾಸ ಕಂಡುಬರುತ್ತಿರಬಹುದು ಎನ್ನುತ್ತಾರೆ ಮಂಜುನಾಥ್. ಅಲೆಗಳ ವಿಂಗಡನೆ ಕಷ್ಟ: ಸೋಂಕು ಸಂಪೂರ್ಣ ಕಡಿಮೆಯಾದ ನಂತರ ಇನ್ನೊಂದು ಅಲೆ ಬರುತ್ತದೆ ಎನ್ನುವ ಹಾಗಿಲ್ಲ. ಸೋಂಕು ಒಂದೇ ಹಂತದಲ್ಲಿ ಬಹಳಷ್ಟು ದಿನವಿದ್ದು, ಆನಂತರ ಹೆಚ್ಚುತ್ತಾ ಹೋಗುವ ಸಾಧ್ಯತೆ ಕೂಡ ಇದೆ. ಅದನ್ನೇ ಇನ್ನೊಂದು ಅಲೆ ಎಂದು ಕರೆಯಬಹುದು ಎನ್ನುವುದು ತಜ್ಞರ ಅಭಿಪ್ರಾಯ.


from India & World News in Kannada | VK Polls https://ift.tt/3w3YGz8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...