
ಆದರ್ಶ ಕೋಡಿ, ದೊಡ್ಡಬಳ್ಳಾಪುರ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ಜತೆಗೆ ಕೃಷಿ ಯಂತ್ರೋಪಕರಣಗಳಿಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದೆ. ರೈತರಿಗೆ ಗಗನ ಕುಸುಮವಾಗಿರುವ ಯಂತ್ರಗಳಾದ ಹೊಲ ಉಳುವ ಟ್ರ್ಯಾಕ್ಟರ್‌ಗಳಿಗೆ ಅದರಲ್ಲೂ ಸರಕಾರದ ಕೃಷಿ ಯಂತ್ರಧಾರೆ ಯೋಜನೆಯಡಿ ಆಧಾರದಲ್ಲಿ ನೀಡಲಾಗುವ ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳಿಗೆ ಸಾಕಷ್ಟು ಬೇಡಿಕೆ ಸೃಷ್ಟಿಯಾಗಿದೆ. ಬೇಡಿಕೆಗೆ ಅನುಗುಣವಾಗಿ ಕೃಷಿ ಯಂತ್ರೋಪಕರಣಗಳ ಪೂರೈಕೆ ಮಾಡಲು ಇಲಾಖೆ ಪ್ರಯತ್ನಿಸುತ್ತಿದ್ದರೂ ರೈತರಲ್ಲಿ ಯೋಜನೆ ಕುರಿತಾದ ಮಾಹಿತಿ ಕೊರತೆಯಿದ್ದು, ಜೂನ್ ತಿಂಗಳ ಆರಂಭದಲ್ಲಿ ಜಿಲ್ಲೆಯ ಪ್ರತಿ ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳಲ್ಲಿ ಉಳುಮೆ ಟ್ರ್ಯಾಕ್ಟರ್, ನಾಟಿ ಮಾಡುವ ಯಂತ್ರ, ಡಿಗ್ಗರ್ ಔಷಧ ಸಿಂಪಡಣೆ ಮಾಡುವ ಯಂತ್ರ ಸೇರಿದಂತೆ 17 ವಿವಿಧ ರೀತಿಯ ಯಂತ್ರಗಳನ್ನು ಬಾಡಿಗೆಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಶುರುವಾಗುತ್ತಿದ್ದಂತೆಯೇ ಕೃಷಿ ಯಂತ್ರಗಳ ಬೇಡಿಕೆ ಹೆಚ್ಚಿದೆ. ಇನ್ನಷ್ಟು ರೈತರಿಗೆ ಮಾಹಿತಿ ಹಾಗೂ ಯಂತ್ರಗಳನ್ನು ಒದಗಿಸುವುದು ಅಗತ್ಯವಾಗಿದೆ. ಬಾಡಿಗೆಗೆ ಪಡೆಯುವುದು ಹೇಗೆ?ಯಂತ್ರಗಳನ್ನು ಬಾಡಿಗೆ ಪಡೆಯಲು ರೈತರು ತಮ್ಮ ಹೋಬಳಿಯ ಬಾಡಿಗೆ ಕೇಂದ್ರಕ್ಕೆ ಹೋಗಿ ಮುಂಗಡ ಹಣ ಪಾವತಿಸಿ ಬೇಕಾದ ಯಂತ್ರವನ್ನು ಕಾಯ್ದಿರಿಸಬಹುದು. ಕೆಲವೊಮ್ಮೆ, ಏಕಕಾಲದಲ್ಲಿ ಎಲ್ಲ ರೈತರಿಗೆ ಒಂದೇ ಬಗೆಯ ಯಂತ್ರಗಳು ಬೇಕಾಗುವುದು ಸಾಮಾನ್ಯ. ಅಂಥ ಸಂದರ್ಭದಲ್ಲಿ ಯಂತ್ರಗಳ ಲಭ್ಯತೆ ನೋಡಿಕೊಂಡು, ಬೇಕಾದ ದಿನಕ್ಕಿಂತ ಒಂದು ವಾರ ಮುಂಚಿತವಾಗಿ ಕಾದಿರಿಸಬಹುದಾಗಿದೆ. ಯಂತ್ರೋಪಕರಣಗಳ ಬಾಡಿಗೆಯ ವಿವರ ಮತ್ತು ಅಲ್ಲಿ ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲ ಯಂತ್ರೋಪಕರಣಗಳ ಬಾಡಿಗೆ ಕೇಂದ್ರದಲ್ಲಿ ದೊರೆಯುತ್ತದೆ. ನೋಂದಣಿ ಮಾಡಿಸಿರೈತರಿಗೆ ಗುಣಮಟ್ಟದ ಸೇವೆ ನೀಡಲು ಹಾಗೂ ಸುಲಭವಾಗಿ ಗುರುತಿಸಲು ಅವರಿಗಿರುವ ಭೂಮಿ, ಬೆಳೆಯುವ ಬೆಳೆಗಳು, ಗ್ರಾಮ, ಫೋನ್ ನಂಬರ್, ಪಂಚಾಯಿತಿ, ಬೇರೆ ಬೇರೆ ಕಾಲದಲ್ಲಿ ಬೆಳೆಯುವ ಬೆಳೆಗಳ ವಿವರ, ಪಹಣಿ ಪತ್ರದ ಜೆರಾಕ್ಸ್- ಹೀಗೆ ಎಲ್ಲವನ್ನು ಕೊಟ್ಟು ನೋಂದಣಿ ಮಾಡಿಸಿ. ವಿವರಗಳನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿಟ್ಟು ಅವರಿಗೆ ಪ್ರತ್ಯೇಕ ಗುರುತು ಸಂಖ್ಯೆ ನೀಡುತ್ತಾರೆ. ಇದುವರೆಗೂ 30 ಸಾವಿರಕ್ಕೂ ಹೆಚ್ಚು ಸೇವೆಯನ್ನು ಯಂತ್ರಗಳು ನೀಡಿದ್ದರೂ ಗ್ರಾಮೀಣ ಭಾಗಗಳಿಗೆ ಮಾಹಿತಿ ತಲುಪಿಸುವ ಅಗತ್ಯವಿದೆ. ಪ್ರಮುಖಾಂಶಗಳು
- ಜಿಲ್ಲೆಯ ರೈತರಲ್ಲಿಲ್ಲ ಯಂತ್ರಧಾರೆ ಮಾಹಿತಿ
- ಜಿಲ್ಲೆಯ 17 ಹೋಬಳಿ ಕೇಂದ್ರದಲ್ಲಿ ಬಾಡಿಗೆ ಕೇಂದ್ರಗಳು
- ಗಂಟೆಗೆ 200-400 ರೂ. ಬಾಡಿಗೆ ಉಳಿತಾಯ
- ಬಿತ್ತನೆಯಿಂದ ಕಟಾವಿನವರೆಗಿನ ಎಲ್ಲ ಯಂತ್ರಗಳು ಲಭ್ಯ
from India & World News in Kannada | VK Polls https://ift.tt/3h84K4j