ನ್ಯೂಜಿಲೆಂಡ್‌ ಬಳಿ ಕ್ಷಮೆಯಾಚಿಸಿದ ಟಿಮ್‌ ಪೈನ್! ಕಾರಣವೇನು ಗೊತ್ತೆ?

ಹೊಸದಿಲ್ಲಿ: ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಣಾಹಣಿಯಲ್ಲಿ ಭಾರತ ತಂಡ ಆರಾಮದಾಯಕವಾಗಿ ಜಯಿಸಲಿದೆ ಎಂದು ಭವಿಷ್ಯ ನುಡಿದಿದ್ದ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಇದೀಗ ಬಳಿ ಕ್ಷಮೆಯಾಚಿಸಿದ್ದಾರೆ. ಭಾರತ ತಂಡದಲ್ಲಿರುವ ಆಟಗಾರರು ವಿಶ್ವದ ಎಲ್ಲಾ ಕಡೆ ಉತ್ತಮ ಪ್ರದರ್ಶನ ತೋರುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಡಬ್ಲ್ಯುಟಿಸಿ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಭಾರತ ಸುಲಭವಾಗಿ ಗೆಲುವು ಪಡೆಯಲಿದೆ ಎಂದು ಮಹತ್ವದ ಪಂದ್ಯಕ್ಕೂ ಮುನ್ನ ಟಿಮ್‌ ಪೈನ್‌ ಭವಿಷ್ಯ ನುಡಿದಿದ್ದರು. ಆದರೆ, ನ್ಯೂಜಿಲೆಂಡ್‌ ಚಾಂಪಿಯನ್‌ ಆಗುತ್ತಿದ್ದಂತೆ ಟಿಮ್‌ ಪೈನ್‌ ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ. "ತಾನು ನುಡಿದಿದ್ದ ಭವಿಷ್ಯ ತಪ್ಪಾಗಿದೆ. ಹಾಗಾಗಿ, ನ್ಯೂಜಿಲೆಂಡ್ ಅಭಿಮಾನಿಗಳಿಂದ ಸ್ವಲ್ಪ ದೂರ ಇರುತ್ತೇನೆ. ಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ ಔಟ್‌ ಸ್ಟ್ಯಾಂಡಿಂಗ್‌ ಪ್ರದರ್ಶನ ತೋರಿದೆ ಎಂದು ನಾನು ಭಾವಿಸುತ್ತೇನೆ. ಕಿವೀಸ್‌ ಆಟಗಾರರ ಪ್ರದರ್ಶನದ ಹಾದಿಯನ್ನು ನೋಡಲು ತುಂಬಾ ಖುಷಿಯಾಗುತ್ತಿತ್ತು," ಎಂದು ಪೈನ್‌ ನ್ಯೂಸ್‌ ಟಾಕ್‌ ಝಡ್‌ಗೆ ಹೇಳಿದರು. "ಇದು ಅತ್ಯಂತ ಕಿರಿಯ ರಾಷ್ಟ್ರ- ನಾನು ಕೂಡ ತಸ್ಮೇನಿಯಾ ಎಂಬ ಪುಟ್ಟ ರಾಜ್ಯದವನು. ಆದರೆ, ನಮ್ಮದು ಚಿಕ್ಕ ಸಂಪನ್ಮೂಲ ರಾಜ್ಯವಾದರೂ, ಇದಕ್ಕಿಂತ ಹೆಚ್ಚಿನದಾಗಿಯೇ ನಾವು ಸಾಧಿಸಿದ್ದೇವೆ. ಹಾಗಾಗಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ ಮಾಡುತ್ತಿರುವ ಸಾಧನೆಯನ್ನು ನಾನು ಗೌರವಿಸುತ್ತೇನೆ," ಎಂದರು. ಕಳೆದ ಬುಧವಾರ ಮುಕ್ತಾಯವಾಗಿದ್ದ ಹಣಾಹಣಿಯಲ್ಲಿ ಭಾರತ ತಂಡ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿತ್ತು. ಮಳೆಯ ನಡುವೆಯೂ ನಡೆದಿದ್ದ ಪಂದ್ಯದಲ್ಲಿ ನ್ಯೂಜಿಲೆಂಡ್‌ ಆರನೇ(ಹೆಚ್ಚುವರಿ ದಿನ) ದಿನ 8 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಆ ಮೂಲಕ ಟೆಸ್ಟ್ ಚಾಂಪಿಯನ್‌ಷಿಪ್‌ ಪಟ್ಟವನ್ನು ಅಲಂಕರಿಸಿತ್ತು. ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಒಂದು ಲೆಕ್ಕದಲ್ಲಿ ಬೌಲಿಂಗ್‌ ಪ್ರದರ್ಶನ ಚೆನ್ನಾಗಿಯೇ ಇತ್ತು. ಆದರೆ, ಬ್ಯಾಟಿಂಗ್‌ ವಿಭಾಗದಲ್ಲಿ ಎಲ್ಲಾ ಆಟಗಾರರು ವೈಫಲ್ಯ ಅನುಭವಿಸಿದ್ದರು. ಪ್ರಥಮ ಇನಿಂಗ್ಸ್‌ನಲ್ಲಿ ಕೈಲ್‌ ಜೇಮಿಸನ್‌(31ಕ್ಕೆ 5) ದಾಳಿಗೆ ಸಿಲುಕಿ ಭಾರತ 217 ರನ್‌ಗಳಿಗೆ ಆಲೌಟ್‌ ಆಗಿತ್ತು. ನಂತರ, ದ್ವಿತೀಯ ಇನಿಂಗ್ಸ್‌ನಲ್ಲಿ ಜೇಮಿಸನ್‌, ಟ್ವೆಂಟ್‌ ಬೌಲ್ಟ್ ಹಾಗೂ ಟಿಮ್‌ ಸೌಥಿ ಮಾರಕ ದಾಳಿಯನ್ನು ಎದುರಿಸಲಾಗದೆ ಭಾರತ ಕೇವಲ 170 ರನ್‌ಗಳಿಗೆ ಆಲೌಟ್‌ ಆಗಿತ್ತು. 139 ರನ್‌ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್‌ ತಂಡ, ನಾಯಕ ಕೇನ್‌ ವಿಲಿಯಮ್ಸನ್‌ (52*) ಹಾಗೂ ರಾಸ್‌ ಟೇಲರ್‌ (47*) ಅವರ 96 ರನ್‌ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ಆ ಮೂಲಕ 2000ರ ವರ್ಷದ ಬಳಿಕ ಕಿವೀಸ್‌ ಮೊದಲ ಬಾರಿ ಐಸಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3wUi56S

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...