IND vs AUS: ಭಾರತದ ಪರ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಯಾರ್ಕರ್‌ ಕಿಂಗ್‌!

ಕ್ಯಾನ್ಬೆರಾ: ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ಎಡಗೈ ವೇಗಿ ಟಿ. ನಟರಾಜನ್‌ ಬುಧವಾರ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಭಾರತದ ಪರ ಏಕದಿನ ಕ್ರಿಕೆಟ್‌ ಆಡಿದ 232ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾದ ಟಿ, ನಟರಾಜನ್‌ಗೆ ನಾಯಕ ವಿರಾಟ್‌ ಕೊಹ್ಲಿ ಟೀಮ್‌ ಇಂಡಿಯಾ ಕ್ಯಾಪ್ ನೀಡಿ ಗೌರವಿಸಿದರು. ಪ್ರಸಕ್ತ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದ ಮೊಹಮ್ಮದ್‌ ಶಮಿ ಅವರ ಸ್ಥಾನಕ್ಕೆ ನಟರಾಜನ್‌ ಅವಕಾಶ ಪಡೆದುಕೊಂಡರು. ಒಟ್ಟಾರೆ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯಕ್ಕೆ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಯಿತು. ಮಯಾಂಕ್‌ ಅಗರ್ವಾಲ್‌ ಸ್ಥಾನಕ್ಕೆ ಶುಭಮನ್‌ ಗಿಲ್‌, ನವದೀಪ್‌ ಸೈನಿ ಸ್ಥಾನಕ್ಕೆ ಶಾರ್ದೂಲ್‌ ಠಾಕೂರ್‌ ಹಾಗೂ ಯುಜ್ವೇಂದ್ರ ಚಹಲ್‌ ಅವರ ಸ್ಥಾನಕ್ಕೆ ಕುಲ್ದೀಪ್‌ ಯಾದವ್‌ ಅವಕಾಶ ಪಡೆದುಕೊಂಡರು. ಟಾಸ್‌ ಗೆದ್ದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ," ವಿಕೆಟ್‌ ಬ್ಯಾಟಿಂಗ್‌ಗೆ ತುಂಬಾ ಚೆನ್ನಾಗಿ ಇರುವುದರಿಂದ ಮೊದಲು ಬ್ಯಾಟ್‌ ಮಾಡುತ್ತೇವೆ. ಕೊನೆಯ ಬಾರಿ ಇಲ್ಲಿ ಆಡಿದಾಗ ಇಲ್ಲಿನ ವಿಕೆಟ್ ಅತ್ಯುತ್ತಮವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿ‌ ಹೆಚ್ಚಿನ ರನ್‌ಗಳನ್ನು ಕಲೆ ಹಾಕಿ, ಎದುರಾಳಿ ತಂಡಕ್ಕೆ ಒತ್ತಡವನ್ನು ಹೇರುತ್ತೇವೆ," ಎಂದರು. "ಮೈದಾನದಲ್ಲಿ ಬಾಡಿ ಲಾಂಗ್ವೇಜ್‌ ಹಾಗೂ ಬೌಲಿಂಗ್‌ ಅನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ. ಕಳೆದ ಎರಡು ಪಂದ್ಯಗಳಲ್ಲಿ ಇದು ನಮ್ಮ ಪಾಲಿಗೆ ಸ್ಥಿರ ಫಲಿತಾಂಶ ನೀಡಿಲ್ಲ. ಕಳೆದ ರಾತ್ರಿ ಅಂದುಕೊಂಡಿದ್ದ ಕೆಲ ಸಂಗತಿಗಳನ್ನು ನಾವು ಪಂದ್ಯದಲ್ಲಿ ಪ್ರಯತ್ನಿಸುತ್ತೇವೆ ಹಾಗೂ ನೋಡೋಣ ಇದು ಹೇಗೆ ನಮ್ಮ ಪಾಲಿಗೆ ನೆರವಾಗಲಿದೆ," ಎಂದು ಕೊಹ್ಲಿ ತಿಳಿಸಿದರು. ಹೊಸ ಮುಖ ಕ್ಯಾಮೆರಾನ್ ಗ್ರೀನ್ ಅವರನ್ನು ಆಸ್ಟ್ರೇಲಿಯಾ ಪರ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪರಿಚಯಿಸಲಾಯಿತು. ಟೆಸ್ಟ್‌ ಸರಣಿ ನಿಮಿತ್ತಾ ವಿಶ್ರಾಂತಿ ಪಡೆಯುತ್ತಿರುವ ಪ್ಯಾಟ್‌ ಕಮಿನ್ಸ್ ಹಾಗೂ ಮಿಚೆಲ್‌ ಸ್ಟಾರ್ಕ್‌ ಅವರ ಜಾಗದಲ್ಲಿ ಆಷ್ಟನ್‌ ಅಗರ್‌, ಶಾನ್ ಅಬಾಟ್‌ ಅಂತಿಮ 11ರಲ್ಲಿ ಸ್ಥಾನ ಪಡೆಯಲಿದ್ದಾರೆ. "ನಾವು ಮೂರು ಬದಲಾವಣೆಗಳನ್ನು ಮಾಡಿದ್ದೇವೆ. ಮಿಚೆಲ್‌ ಸ್ಟಾರ್ಕ್‌ಗೆ ವಿಶ್ರಾಂತಿ ನೀಡಿದ್ದೇವೆ. ಡೇವಿಡ್‌ ವಾರ್ನರ್‌ ಹಾಗೂ ಪ್ಯಾಟ್‌ ಕಮಿನ್ಸ್ ಈ ಪಂದ್ಯ ಪಂದ್ಯ ಸೇರಿದಂತೆ ಟಿ20 ಸರಣಿಯಿಂದ ಹೊರಗುಳಿಯಲಿದ್ದಾರೆ. ಗ್ರೀನ್‌ ಆಸ್ಟ್ರೇಲಿಯಾ ಪರ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವಾಡಲಿದ್ದಾರೆ. ಶಾನ್‌ ಅಬಾಟ್‌ ಹಾಗೂ ಆಷ್ಟನ್‌ ಅಗರ್‌ ಅಂತಿಮ 11ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾರ್ನಸ್‌ ಲಾಬುಶೇನ್‌ ನಮ್ಮ ಪರ ಇನಿಂಗ್ಸ್ ಆರಂಭಿಸಲಿದ್ದಾರೆ ," ಎಂದು ಆರೋನ್‌ ಫಿಂಚ್‌ ಟಾಸ್‌ ವೇಳೆ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fYMKbu

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...