
ಬಂಟ್ವಾಳ: ತಾಲೂಕಿನ ಒಟ್ಟು 58 ಗ್ರಾ.ಪಂ.ಗಳ ಪೈಕಿ 14 ಗ್ರಾ.ಪಂ.ಗಳಲ್ಲಿ ನಿರ್ಮಾಣವಾಗಿದ್ದರೆ, 13ರಲ್ಲಿ ಪ್ರಗತಿಯಲ್ಲಿದೆ. 15 ಗ್ರಾ.ಪಂ.ಗಳಲ್ಲಿನಿವೇಶನ ಅಂತಿಮಗೊಳ್ಳುವ ಪ್ರಕ್ರಿಯೆಯಲ್ಲಿದ್ದರೆ, 16 ಗ್ರಾಪಂಗಳಲ್ಲಿ ಎಲ್ಲಿ ಸ್ಮಶಾನ ಮಾಡುವುದು ಎಂಬುದು ಇನ್ನೂ ಇತ್ಯರ್ಥವಾಗಿಲ್ಲ. ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಎರಡೂ ಸ್ಮಶಾನಗಳು ಉಪಯೋಗದಲ್ಲಿವೆ. ಬಡಬೆಳ್ಳೂರು ಗ್ರಾ.ಪಂ.ನಲ್ಲಿ ಒಂದು ಪೂರ್ಣಗೊಂಡಿದ್ದು, ತೆಂಕಬೆಳ್ಳೂರಿನಲ್ಲಿ ಸಮತಟ್ಟು ಮಾಡಲಾಗಿದೆ. ಬಾಳೆಪುಣಿ, ಗೋಳ್ತಮಜಲು, ಇಡ್ಕಿದು, ಕಡೇಶ್ವಾಲ್ಯ, ಕನ್ಯಾನ(ಭಾಗಶಃ ಪೂರ್ಣ), ಕರಿಯಂಗಳ, ಕಾವಳಮೂಡೂರು, ಕೇಪು, ಕುರ್ನಾಡು, ನರಿಕೊಂಬು, ಸಜೀಪನಡು, ಅಮ್ಮುಂಜೆ, ಸಜೀಪಪಡು ಗ್ರಾ.ಪಂ.ಗಳಲ್ಲಿ ಈಗಾಗಲೇ ಸ್ಮಶಾನಗಳು ನಿರ್ಮಾಣಗೊಂಡಿವೆ. ಅಳಿಕೆ ಗ್ರಾ.ಪಂ.ನಲ್ಲಿ ಮೂರು ನಿವೇಶನಗಳನ್ನು ಗುರುತಿಸಲಾಗಿದ್ದು, ಭೀಮಾವರದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಬಡಗಕಜೆಕಾರು, ಇರಾ, ಕಾವಳಮೂಡೂರು, ಕೆದಿಲ(2 ಕಡೆ ಕಾಮಗಾರಿ ಪ್ರಗತಿ), ಕುಕ್ಕಿಪಾಡಿ, ಪಿಲಾತಬೆಟ್ಟು, ಉಳಿ, ಮಣಿನಾಲ್ಕೂರು, ಬೋಳಂತೂರು, ಅರಳ, ಸಾಲೆತ್ತೂರು, ಪೆರಾಜೆ ಗ್ರಾ.ಪಂ.ಗಳಲ್ಲಿ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದೆ. ಕರೋಪಾಡಿಯಲ್ಲಿ ನಿವೇಶನ ಅಂತಿಮಗೊಂಡಿದೆ. ಕಾವಳಪಡೂರಿನಲ್ಲಿ ಮೂರು ಕಡೆ ಸ್ಥಳ ಮಂಜೂರಾಗಿದೆ. ವೀರಕಂಭ, ಮಂಚಿಯಲ್ಲಿ 2 ಕಡೆ ಗಡಿಗುರುತು ಆಗಿ ಹಸ್ತಾಂತರ ಆಗಿದೆ. ಮಾಣಿಯಲ್ಲಿ ಮಂಜೂರಾಗಿರುತ್ತದೆ. ಪುದು, ಸಂಗಬೆಟ್ಟು, ನರಿಂಗಾನ ನಿವೇಶನ ಗ್ರಾ.ಪಂ. ಸ್ವಾಧೀನದಲ್ಲಿದೆ. ನೆಟ್ಲಮುಡ್ನೂರು, ಮಾಣಿಲ, ನಾವೂರಿನಲ್ಲಿ ಗಡಿಗುರುತು ಬಾಕಿದೆ. ಸರಪಾಡಿ, ಫಜೀರು, ಪೆರುವಾಯಿಯಲ್ಲಿ ಪಹಣಿಯಲ್ಲಿ ದಾಖಲಾಗಿದೆ. ಬಹುತೇಕ ಗ್ರಾ.ಪಂ.ಗಳಲ್ಲಿ ಸ್ಮಶಾನ ಅಂತಿಮಗೊಳ್ಳುವುದು ಬಾಕಿ ಇದೆ. ಅನಂತಾಡಿ, ಬಾಳ್ತಿಲ, ಚೆನ್ನೈತ್ತೋಡಿ, ಕೊಳ್ನಾಡು, ಮೇರಮಜಲು, ಪಂಜಿಕಲ್ಲು, ಪೆರ್ನೆ, ಪುಣಚ, ರಾಯಿ, ಸಜೀಪಮೂಡ, ಸಜೀಪಮುನ್ನೂರು, ತುಂಬೆ, ವಿಟ್ಲಪಡ್ನೂರು, ವಿಟ್ಲಮುಡ್ನೂರು, ಬರಿಮಾರು, ಕಳ್ಳಿಗೆ ಗ್ರಾ.ಪಂ.ಗಳಲ್ಲಿ ನಿವೇಶನ ಅಂತಿಮಗೊಂಡಿಲ್ಲ. ಪ್ರತಿ ಗ್ರಾಪಂಗಳಲ್ಲಿ ಸ್ಮಶಾನ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಕೆಲವೊಂದು ಗ್ರಾಪಂಗಳಲ್ಲಿ ಈಗಾಗಲೇ ಸ್ಮಶಾನ ನಿರ್ಮಾಣ ಪೂರ್ಣಗೊಂಡಿದ್ದು, ಇನ್ನು ಕೆಲವೆಡೆ ಕಾಮಗಾರಿ ಪ್ರಗತಿಯಲ್ಲಿದೆ. ರಾಜಣ್ಣ, ಕಾರ್ಯನಿರ್ವಹಣಾಧಿಕಾರಿ, ತಾ.ಪಂ
from India & World News in Kannada | VK Polls https://ift.tt/37qYn7h