
ಕ್ಯಾನ್ಬೆರಾ: ಬುಧವಾರ ಇಲ್ಲಿನ ಮನುಕಾ ಓವಲ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ನಡುವಿನ ಮೂರನೇ ಹಾಗೂ ಅಂತಿಮ ಓಡಿಐ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಟಾಸ್ ಸೋತಿದ್ದ ಭಾರತ, ಈ ಹಣಾಹಣಿಯಲ್ಲಿ ಟಾಸ್ ತಮ್ಮ ಪಾಲಿಗೆ ಒಲಿದಿರುವುದರಿಂದ ತಮಗೆ ಸೂಕ್ತ ರೀತಿಯಲ್ಲಿ ರಣತಂತ್ರವನ್ನು ರೂಪಿಸಲಿದೆ. ಇನ್ನು ಈಗಾಗಲೇ ಎರಡು ಪಂದ್ಯಗಳಲ್ಲಿ ಗೆದ್ದು ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿರುವ ಆಸ್ಟ್ರೇಲಿಯಾ, 3-0 ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ತುಡಿದಲ್ಲಿದೆ. ಅಂತಾರಾಷ್ಟ್ರೀಯ ಓಡಿಐಗೆ ನಟರಾಜನ್ ಪದಾರ್ಪಣೆ: ಹದಿಮೂರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಯಾರ್ಕರ್‌ಗಳ ಮೂಲಕ ಗಮನ ಸೆಳೆದಿದ್ದ ತಮಿಳುನಾಡು ಮೂಲದ ವೇಗಿ ಟಿ ನಟರಾಜನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಕಳೆದ ಎರಡು ಪಂದ್ಯಗಳಲ್ಲಿ ದುಬಾರಿಯಾಗಿದ್ದ ನವದೀಪ್ ಸೈನಿ ಸ್ಥಾನದಲ್ಲಿ ಅವರನ್ನು ಆಡಿಸಲಾಗಿದೆ. ಮಯಾಂಕ್ ಅಗರ್ವಾಲ್ ಸ್ಥಾನಕ್ಕೆ ಶುಭಮನ್ ಗಿಲ್, ಯುಜ್ವೇಂದ್ರ ಚಹಲ್ ಬದಲು ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ ಸ್ಥಾನಕ್ಕೆ ಶಾರ್ದೂಲ್ ಠಾಕೂರ್‌ಗೆ ಅವಕಾಶ ಕೊಡಲಾಗಿದೆ. ಭಾರತ ತಂಡದ ಅಂತಿಮ 11ರಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದೆ. scorecard ಆಸ್ಟ್ರೇಲಿಯಾ ತಂಡದಲ್ಲಿ ಮೂರು ಬದಲಾವಣೆ: ಹೊಸ ಮುಖ ಕ್ಯಾಮೆರಾನ್ ಗ್ರೀನ್ ಅವರನ್ನು ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪರಿಚಯಿಸಲಾಯಿತು. ಟೆಸ್ಟ್ ಸರಣಿ ನಿಮಿತ್ತಾ ವಿಶ್ರಾಂತಿ ಪಡೆಯುತ್ತಿರುವ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಸ್ಟಾರ್ಕ್ ಅವರ ಜಾಗದಲ್ಲಿ ಆಷ್ಟನ್ ಅಗರ್, ಶಾನ್ ಅಬಾಟ್ ಅಂತಿಮ 11ರಲ್ಲಿ ಸ್ಥಾನ ಪಡೆಯಲಿದ್ದಾರೆ. ಇತ್ತಂಡಗಳ ಪ್ಲೇಯಿಂಗ್ ಇಲೆವೆನ್ ಹೀಗಿದೆ ಟೀಮ್ ಇಂಡಿಯಾ XI: ಶಿಖರ್ ಧವನ್, ಶುಭಮನ್ ಗಿಲ್, (ನಾಯಕ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಟಿ ನಟರಾಜನ್, ಜಸ್‌ಪ್ರೀತ್ ಬುಮ್ರಾ ಆಸ್ಟ್ರೇಲಿಯಾ XI: ಆರೊನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಯ್ಸೆಸ್ ಹೆನ್ರಿಕ್ಸ್, ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ಆಷ್ಟನ್ ಅಗರ್, ಶಾನ್ ಅಬಾಟ್, ಆಡಮ್ ಝಾಂಪ, ಜಾಶ್ ಹೇಝಲ್‌ವುಡ್. ತಂಡಗಳ ವಿವರ ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆರೊನ್ ಫಿಂಚ್ (ನಾಯಕ), ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯ್ನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ನಸ್ ಲಾಬುಶೇನ್, ಅಲೆಕ್ಸ್ ಕೇರಿ (ವಿಕೆಟ್‌ಕೀಪರ್), ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಾಂಪ, ಜಾಶ್ ಹೇಝಲ್‌ವುಡ್, ಮೊಯ್ಸೆಸ್ ಹೆನ್ರಿಕ್ಸ್, ಮ್ಯಾಥ್ಯೂ ವೇಡ್, ಶಾನ್ ಅಬಾಟ್ , ಆಷ್ಟನ್ ಅಗರ್, ಆಂಡ್ರ್ಯೂ ಟೈ, ಕ್ಯಾಮೆರಾನ್ ಗ್ರೀನ್, ಡೇನಿಯಲ್ ಸ್ಯಾಮ್ಸ್. ಭಾರತ: ಮಯಾಂಕ್ ಅಗರ್ವಾಲ್, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ನವದೀಪ್ ಸೈನಿ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್, ಮನೀಶ್ ಪಾಂಡೆ, ಸಂಜು ಸ್ಯಾಮ್ಸನ್, ಕುಲ್ದೀಪ್ ಯಾದವ್, ಶಾರ್ದುಲ್ ಠಾಕೂರ್, ಟಿ ನಟರಾಜನ್, ಶುಭಮನ್ ಗಿಲ್. ನೇರ ಪ್ರಸಾರ: ಸೋನಿ ಸಿಕ್ಸ್ ಸಮಯ: ಬೆಳಗ್ಗೆ 09:10 (ಭಾರತೀಯ ಕಾಲಮಾನ)
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3lnMBj2