ಬಾಲಕಿ ಅತ್ಯಾಚಾರಕ್ಕೆ ಯತ್ನ, ಕೊಲೆ: ಬಳ್ಳಾರಿಯಲ್ಲಿ ಗ್ರಾಮಸ್ಥರಿಂದ ಪ್ರತಿಭಟನೆ!

: ಬಾಲಕಿಯ ಶವಸಂಸ್ಕಾರ ಮಾಡದೇ ಗ್ರಾಮಸ್ಥರು ನಡೆಸುತ್ತಿರುವ ಘಟನೆ ಬಳ್ಳಾರಿಯಿಂದ ಡಿಸೆಂಬರ್ 4ರಂದು ವರದಿಯಾಗಿದೆ. ಮಂಡ್ಯಕ್ಕೆ ಗುಳೆ ಹೋಗಿದ್ದ ತಾಳೆ ಬಸಾಪುರ ತಾಂಡದ ಆರತಿ ಮೇಲೆ ಪಾಪಿ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ, ನಂತರ ಮಾಡಿದ್ದಾನೆ. ಶುಕ್ರವಾರ ಮೃತದೇಹ ಸ್ವಗ್ರಾಮಕ್ಕೆ ತಲುಪಿದೆ. ಗ್ರಾಮಸ್ಥರು ನ್ಯಾಯಕ್ಕಾಗಿ ಬಾಲಕಿಯ ಶವಸಂಸ್ಕಾರ ಮಾಡದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 50 ಅನ್ನು ಬಂದ್ ಮಾಡಲು ಮುಂದಾಗಿದ್ದ ಗ್ರಾಮಸ್ಥರನ್ನು ಪೊಲೀಸರು ತಡೆದಿದ್ದಾರೆ. ಬಳ್ಳಾರಿಯ ಜಿಲ್ಲಾಧಿಕಾರಿ ಬರೋವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು ಗುಳೆ ಹೋಗುವ ಮಕ್ಕಳ ಜೀವಕ್ಕೆ ಗ್ಯಾರಂಟಿ ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ಹೊಸಪೇಟೆ ತಾಲೂಕಿನ ತಾಳೆಬಸಾಪುರ ತಾಂಡದ ಹೊರವಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಶವ ಸಂಸ್ಕಾರ ಮಾಡಿ ನಂತರ ಮಾತನಾಡೋಣ ಎನ್ನುತ್ತಿದ್ದಾರೆ ಪೊಲೀಸರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಘಟನೆಯ ಹಿನ್ನಲೆ ಕಬ್ಬು ಕಟಾವಿಗೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪದ ಹುರುಗಲವಾಡಿಗೆ ಕುಟುಂಬದವರೊಂದಿಗೆ ಹೋಗಿದ್ದ, ಹೊಸಪೇಟೆಯ ತಾಳೆಬಸಾಪುರ ತಾಂಡಾದ ಬಾಲಕಿಯನ್ನು ಕತ್ತುಕೊಯ್ದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಬುಧವಾರ ನಡೆದಿದ್ದು,ತಾಲೂಕಿನ ತಾಳೆಬಸಾಪುರ ತಾಂಡಾದ ಆರತಿ (10) ಕೊಲೆಗೀಡಾದ ಬಾಲಕಿ. ಶಾಲೆಯಿಲ್ಲದ್ದರಿಂದ ಸೋದರತ್ತೆಯೊಂದಿಗೆ ಈಕೆ ಹುರುಗಲವಾಡಿಗೆ ತೆರಳಿದ್ದಳು. ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಯ ಕಬ್ಬು ಕಟಾವು ಕೆಲಸಕ್ಕಾಗಿ ಆಗಮಿಸಿದ್ದ ಕೂಲಿಕಾರ್ಮಿಕರಿಗೆ ಹೊಲದಲ್ಲಿಯೇ ಟೆಂಟ್‌ ಹಾಕಿಕೊಡಲಾಗಿದೆ. ಈ ಟೆಂಟ್‌ನಲ್ಲಿಯೇ ಕುಟುಂಬಗಳು ವಾಸಿಸುತ್ತವೆ. ''ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ಬಾಲಕಿ ಚೀರಾಟ ಕೇಳಿದೆ. ಏನಾಯ್ತು ಎಂದು ಬಂದು ನೋಡುವಷ್ಟರಲ್ಲಿ ಬಾಲಕಿ ಕೊಲೆಗೀಡಾಗಿದ್ದಾಳೆ. ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿ ಸಿಕ್ಕಿಬಿದ್ದಿದ್ದಾನೆ.


from India & World News in Kannada | VK Polls https://ift.tt/3gfSQ7G

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...