ಪಕ್ಷ ಸಂಘಟನೆಗಾಗಿ ಜೆಡಿಎಸ್ ನಿಂದ ರಾಜ್ಯ ಪ್ರವಾಸ: ಪ್ರಜ್ವಲ್‌ ರೇವಣ್ಣ

ಸುಬ್ರಹ್ಮಣ್ಯ: ಜೆಡಿಎಸ್‌ ಬಲವರ್ಧನೆಗಾಗಿ ರಾಜ್ಯ ಕೈಗೊಳ್ಳುತ್ತೇನೆ. ಜ.15ರ ನಂತರ ನಾನು ಮತ್ತು ನಿಖಿಲ್‌ ಕುಮಾರಸ್ವಾಮಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇವೆ. ಅಲ್ಲದೆ ಪಕ್ಷದ ಶಕ್ತಿ ವರ್ಧನೆಯ ನಿಟ್ಟಿನಲ್ಲಿ ಪಕ್ಷದಲ್ಲಿ ತಟಸ್ಥವಾಗಿರುವ ನಾಯಕರನ್ನು ಮತ್ತೆ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದು ಮಹಾಪೂಜೆ ಸೇವೆ ನೆರವೇರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮುಂಬರುವ ಗ್ರಾ.ಪಂ.ಚುನಾವಣೆಯಲ್ಲಿ ಪಕ್ಷವು ಉತ್ತಮ ಸಾಧನೆ ತೋರಲಿದೆ. ಈ ನಿಟ್ಟಿನಲ್ಲಿಈಗಾಗಲೇ ತಳಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ ಎಂದರು. ಗ್ರಾ.ಪಂ. ಚುನಾವಣೆಯಲ್ಲಿ ಆಯಾಯ ಕ್ಷೇತ್ರದ ನಾಯಕರಿಗೆ, ಶಾಸಕರಿಗೆ ಹಾಗೂ ಮಾಜಿ ಶಾಸಕರಿಗೆ ಜವಬ್ದಾರಿ ನೀಡಲಾಗುವುದು. ಈ ಬಾರಿ ಜೆಡಿಎಸ್‌ ಮತ್ತೆ ತನ್ನ ಅಸ್ತಿತ್ವವನ್ನು ತೋರ್ಪಡಿಸಲಿದೆ. ಕರಾವಳಿ ಭಾಗದಲ್ಲಿ ಪಕ್ಷ ಸಂಘಟನೆ ಮಾಡಲಾಗುವುದು. ಹಂತ ಹಂತವಾಗಿ ಪಕ್ಷದ ಬಲವರ್ಧನೆಗೆ ಚಿಂತನೆ ನಡೆಸಲಾಗಿದೆ. ಜೆಡಿಎಸ್‌ ಪಕ್ಷವನ್ನು ಬಿಟ್ಟು ಹೋಗುವ ನಾಯಕರು ಇನ್ನಿಲ್ಲ. ಮುಂದೆ ಬರುವ ಗ್ರಾ.ಪಂ.ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ದುಡಿಯಲಿದ್ದೇವೆ ಎಂದು ಹೇಳಿದರು. ಮುಂಬರುವ ತಾ.ಪಂ ಹಾಗೂ ಜಿ.ಪಂ.ಚುನಾವಣೆಯಲ್ಲಿ ಮತ್ತಷ್ಟು ಹುರುಪಿನಿಂದ ಪಕ್ಷ ಸಂಘಟನೆ ಮಾಡಿದ ರಾಜ್ಯದಲ್ಲಿ ಅಧಿಕ ಸಂಖ್ಯೆಯ ಸೀಟುಗಳನ್ನು ಗೆಲ್ಲಲು ಪ್ರಯತ್ನಸುತ್ತೇವೆ. ಅದೇ ರೀತಿ ಬಿಸಿಲೆಯ ರಸ್ತೆಯ ಸ್ವಲ್ಪ ಭಾಗ ಕಾಂಕ್ರೀಟ್‌ ರಸ್ತೆ ಕಾಮಗಾರಿ ಬಾಕಿಯಾಗಿದೆ. ಮಳೆಯ ಕಾರಣದಿಂದ ಈ ಕಾಮಗಾರಿ ತಡವಾಯಿತು. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಲೋಕೋಪಯೋಗಿ ಅಭಿಯಂತರರಲ್ಲಿ ಮಾತನಾಡಿದ್ದೇನೆ. ಈಗ ಆ ರಸ್ತೆಯಲ್ಲಿ ತೆರಳಿ ರಸ್ತೆಯನ್ನು ವೀಕ್ಷಿಸುತ್ತೇನೆ. ಬಳಿಕ ಶೀಘ್ರವೇ ಈ ರಸ್ತೆಯ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಜ್ವಲ್‌ರೇವಣ್ಣ ನುಡಿದರು. ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಮತ್ತು ದ.ಕ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ, ಜೆಡಿಎಸ್‌ ಕಡಬ ತಾಲೂಕು ಅಧ್ಯಕ್ಷ ಮೀರಾ ಸಾಹೇಬ್‌, ಸಂಘಟನಾ ಕಾರ್ಯದರ್ಶಿ ಇ.ಜಿ.ಜೋಸೆಫ್‌, ಸುಬ್ರಹ್ಮಣ್ಯ ಜೆಡಿಎಸ್‌ ಅಧ್ಯಕ್ಷ ಡಾ.ತಿಲಕ್‌ ಎ.ಎ, ಕಾರ್ಯದರ್ಶಿ ದಿನೇಶ್‌ ಎಂ.ಪಿ, ಜೆಡಿಎಸ್‌ ಮುಖಂಡರಾದ ಚಂದ್ರಶೇಖರ ಚೆನ್ನಕಜೆ, ಅಗ್ರಹಾರ ದುಗ್ಗಪ್ಪ, ಎಂ.ಸುಂದರ ಸುಂಕದಕಟ್ಟೆ, ಸಜಿತ್‌ ಕುಟ್ಟುಪ್ಪಾಡಿ ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3luNZjY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...