ದೇಶದ ಎಲ್ಲಾ ಜನರಿಗೆ ಕೊರೊನಾ ಲಸಿಕೆ ನೀಡುವುದಾಗಿ ಸರಕಾರ ಹೇಳಿಲ್ಲ, ಲಸಿಕೆ ಪಡೆಯಲು ಬಲವಂತವಿಲ್ಲ: ಕೇಂದ್ರ ಆರೋಗ್ಯ ಇಲಾಖೆ

ಹೊಸದಿಲ್ಲಿ: ಕೊರೊನಾ ನಿರೋಧಕ ಲಸಿಕೆ ಪಡೆಯುವಂತೆ ಯಾರಿಗೂ ಬಲವಂತ ಮಾಡುವುದಿಲ್ಲಎಂದು ಮಂಗಳವಾರ ಸ್ಪಷ್ಟಪಡಿಸಿದೆ. ''ಇದು ಪ್ರಜಾಪ್ರಭುತ್ವ ದೇಶ. ಯಾವುದನ್ನೂ ಬಲವಂತದಿಂದ ಮಾಡಲು ಸಾಧ್ಯವಿಲ್ಲ. ಇಷ್ಟ ಇದ್ದವರು ಮಾತ್ರವೇ ಲಸಿಕೆ ಪಡೆಯಬಹುದು. ಆದ್ಯತಾ ವಲಯದಲ್ಲಿಇರುವವರು ಹಾಗೂ ಆರೋಗ್ಯ ದೃಷ್ಟಿಯಿಂದ ದುರ್ಬಲರಾಗಿರುವವರು ಸಹ ಲಸಿಕೆ ಪಡೆಯಲು ಒಪ್ಪಿಗೆ ನೀಡದಿದ್ದಲ್ಲಿ ಬಲವಂತ ಮಾಡುವುದಿಲ್ಲ,'' ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ''ದೇಶದ ಎಲ್ಲರಿಗೂ ಸರಕಾರವೇ ಲಸಿಕೆ ನೀಡುತ್ತದೆ ಎಂಬುದಾಗಿ ಸರಕಾರ ಅಧಿಕೃತವಾಗಿ ಘೋಷಿಸಿಲ್ಲ. ಅದರ ಅರ್ಥ, ಆರ್ಥಿಕವಾಗಿ ಸಬಲರಾಗಿರುವವರು ತಾವೇ ಲಸಿಕೆ ಖರೀದಿಸಬಹುದು. ಯುವಕರು ಮತ್ತು ರೋಗ ನಿರೋಧಕ ಶಕ್ತಿ ಇರುವವರು ಲಸಿಕೆ ಪಡೆಯಲು ಒತ್ತಡ ಹೇರುವುದಿಲ್ಲ,'' ಎಂದೂ ಅವರು ವಿವರಿಸಿದ್ದಾರೆ. ''ಸರಕಾರ ಆದ್ಯತಾ ವಲಯಗಳನ್ನು ಗುರುತಿಸಿ ಲಸಿಕೆ ನೀಡುವ ಉದ್ದೇಶವೆಂದರೆ ಸೋಂಕಿನ ಸರಪಳಿ ತುಂಡರಿಸುವುದು. ಒಂದಷ್ಟು ಜನರಿಗಾದರೂ ಲಸಿಕೆ ನೀಡಿದರೆ ಈ ಉದ್ದೇಶ ಈಡೇರಲು ಸಾಧ್ಯ,'' ಎಂದಿರುವ ಅವರು, ''ಲಸಿಕೆ ಬಂದ ಬಳಿಕವೂ ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸುವುದನ್ನು ಮರೆಯಬಾರದು,'' ಎಂದು ಕಿವಿಮಾತು ಹೇಳಿದ್ದಾರೆ. ದೇಶದಲ್ಲಿ ಮಂಗಳವಾರ 31,118 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 94.62 ಲಕ್ಷಕ್ಕೆ ಏರಿಕೆಯಾಗಿದೆ. ಈ ತಿಂಗಳಲ್ಲಿ ಮೂರನೇ ಬಾರಿ ದಿನವೊಂದರಲ್ಲಿ 35 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.


from India & World News in Kannada | VK Polls https://ift.tt/3ltnVps

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...