ಕಠ್ಮಂಡು: ಆಂತರಿಕ ಭಿನ್ನಮತದಿಂದ ಕುದಿಯುತ್ತಿರುವ ಕಮ್ಯೂನಿಸ್ಟ್ ಪಕ್ಷ ಇಬ್ಭಾಗದ ಹೊಸ್ತಿಲಲ್ಲಿ ಬಂದು ನಿಂತಿದ್ದು, ನೇಪಾಳ ರಾಜಕೀಯ ಪರಿಸ್ಥಿತಿ ಅವಲೋಕಿಸಲು ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕರೊಬ್ಬರ ನೇತೃತ್ವದ ಕಠ್ಮಂಡುಗೆ ಭೇಟಿ ನೀಡಲಿದೆ. ನೇಪಾಳ ಕಮ್ಯೂನಿಸ್ಟ್ ಪಕ್ಷ ಇಬ್ಭಾಗವಾಗದಂತೆ ತಡೆಯಲು ಹಾಗೂ ನೆರೆ ರಾಷ್ಟ್ರದ ರಾಜಕೀಯ ಪರಿಸ್ಥಿತಿ ಅವಲೋಕಿಸಲು ಚೀನಾ ಕಮ್ಯೂನಿಸ್ಟ್ ಪಕ್ಷ(ಸಿಸಿಪಿ)ಯ ಉಪ ಮಂತ್ರಿ ಗುವೋ ಯೆಜೌ ನೇತೃತ್ವದ ನಿಯೋಗ ಶೀಘ್ರದಲ್ಲೇ ನೇಪಾಳಕ್ಕೆ ಭೇಟಿ ನೀಡಲಿದೆ ಎನ್ನಲಾಗಿದೆ. ಸಂಸತ್ತು ವಿಸರ್ಜಿಸಿ ಚುನಾವಣೆ ಘೋಷಿಸಿರುವ ನೇಪಾಳ ಪ್ರಧಾನಿ ನಡೆ ಖಂಡಿಸಿ, ಪ್ರಚಂಡ ನೇತೃತ್ವದ ಬಣ ಬಂಡಾಯದ ಬಾವುಟ ಹಾರಿಸಿದೆ. ಇಬ್ಬರೂ ನಾಯಕರ ಜಿದ್ದಾಜಿದ್ದಿಯಿಂದಾಗಿ ಪಕ್ಷ ಹೋಳಾಗುವ ಹಂತಕ್ಕೆ ಬಂದು ನಿಂತಿದೆ. ಆದರೆ ನೇಪಾಳದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಸಿಸಿಪಿ, ನೇಪಾಳಿ ಕಮ್ಯೂನಿಸ್ಟ್ ಪಕ್ಷವನ್ನು ಒಡೆಯದಂತೆ ತಡೆಯಲು ಪ್ರಯತ್ನಿಸುತ್ತಿದೆ. ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಚೀನಾ ಪರ ಒಲವುಳ್ಳವರಾಗಿದ್ದಾರೆ. ಹೀಗಾಗಿ ಪಕ್ಷ ಮತ್ತು ಸರ್ಕಾರದಲ್ಲಿ ಓಲಿ ಹಿಡಿತವಿದ್ದಷ್ಟೂ ತನಗೆ ಒಳ್ಳೆಯದು ಎಂಬುದು ಚೀನಾದ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ನೇಪಾಳಕ್ಕೆ ಸಿಸಿಪಿ ನಿಯೋಗ ಭೇಟಿ ನೀಡಲಿದ್ದು, ನೇಪಾಳ ಕಮ್ಯೂನಿಸ್ಟ್ ಪಕ್ಷ ಇಬ್ಭಾಗವಾಗದಂತೆ ತಡೆಯಲು ಪ್ರಯತ್ನಿಸಲಿದೆ ಎನ್ನಲಾಗಿದೆ.
from India & World News in Kannada | VK Polls https://ift.tt/3mTBOOh