‌ಕಾಲಿನ ಬೆರಳಿಗೆ ಶಾಯಿ ಹಾಕಿ ಮತದಾನ; ಯುವಜನತೆಗೆ ಲಕ್ಷ್ಮಿ ಸ್ಫೂರ್ತಿಯ ಸೆಲೆ!

ಬಳ್ಳಾರಿ:ಎರಡು ಕೈಗಳಿಲ್ಲ ಕಾಲಿನ ಬೆರಳಿಗೆ ಶಾಹಿ ಹಾಕಿಸಿಕೊಳ್ಳುವುದರ ಮೂಲಕ ಮತದಾರರಿಗೆ ಸ್ಪೂರ್ತಿ ನೀಡಿದ್ದಾರೆ. ಅದೆಷ್ಟೋ ಜನ ಮಾಡಲು ಹೋಗದೆ ಮನೆಯಲ್ಲಿ ಕುಳಿತುಕೊಂಡಿದ್ದರೆ, ಎರಡು ಕೈಗಳಿಲ್ಲದ ಲಕ್ಷ್ಮಿಯವರು ಮತಗಟ್ಟೆಗೆ ತೆರಳಿ ಇಂದು (ಡಿ.27) ಮತದಾನ ಮಾಡಿದರು. ಕಾನಾಹೊಸಳ್ಳಿ ಸಮೀಪದ ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ 47 ರಲ್ಲಿ ಎರಡು ಕೈಗಳಿಲ್ಲದ ಲಕ್ಷ್ಮಿ ಕಾಲಿನ‌ ಬೆರಳಿಗೆ ಶಾಹಿ ಹಾಕಿಸಿಕೊಂಡು ಮತದಾನ ಮಾಡಿದರು. ಇವರು ಈ ಹಿಂದೆ ನಡೆದ ಎಂ ಪಿ ಚುನಾವಣೆಯಲ್ಲಿ ಜಿಲ್ಲೆಯ ಮತದಾನ ಜಾಗೃತಿಯ ರಾಯಭಾರಿಯಾಗಿದ್ದರು. ಇಂದು ಬೆಳಗ್ಗೆ 7 ಗಂಟೆಯಿಂದ ಎರಡನೆ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಕೋವಿಡ್ -19 ಸೋಂಕಿತರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ 30ರಂದು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.


from India & World News in Kannada | VK Polls https://ift.tt/3nVAVpC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...