ಮೆಲ್ಬೋರ್ನ್: ಕನ್ಕಷನ್‌ಗೆ ಒಳಗಾಗಿ ಅಡಿಲೇಡ್ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದ ಸ್ಟಾರ್ ಆಲ್‌ರೌಂಡರ್ , ಶನಿವಾರದಿಂದ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಆರಂಭವಾದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾಗೆ ಮರಳಿದರು ಹಾಗೂ ಫೀಲ್ಡಿಂಗ್ ವೇಳೆ ಅವರಿಗೆ ಡಿಕ್ಕಿ ಹೊಡೆಯಬಹುದಾದ ಅಪಾಯವನ್ನು ತಪ್ಪಿಸಿ ಮ್ಯಾಥ್ಯೂ ವೇಡ್ ಅವರ ಕಠಿಣ ಕ್ಯಾಚ್ ಅನ್ನು ಹಿಡಿದರು. ಎಂಸಿಜಿಯಲ್ಲಿ ಆರಂಭವಾದ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟಿಮ್ ಪೇಯ್ನ್, ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಳಿಕ ಆಸ್ಟ್ರೇಲಿಯಾ ಇನಿಂಗ್ಸ್ 13ನೇ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಮ್ಯಾಥ್ಯೂ ವೇಡ್ ದೊಡ್ಡ ಹೊಡೆತಕ್ಕೆ ಕೈ ಹಾಕಿದರು, ಆದರೆ ಬ್ಯಾಟ್‌ಗೆ ಸರಿಯಾಗಿ ಸಿಗದ ಚೆಂಡು 30 ಯಾರ್ಡ್ ಸರ್ಕಲ್ ಒಳಗೆ ಇತ್ತು. ಈ ವೇಳೆ ಕ್ಯಾಚ್ ಹಿಡಿಯಲು ಜಡೇಜಾ ಹಾಗೂ ಗಿಲ್ ಪ್ರಯತ್ನ ನಡೆಸಿದರು. ಆದರೆ, ಅಂತಿಮವಾಗಿ ಜಡೇಜಾ, ಗಿಲ್ ಅವರನ್ನು ತಪ್ಪಿಸಿ ಕ್ಯಾಚ್ ಹಿಡಿದರು. ಜೋ ಬರ್ನ್ಸ್ ಅವರನ್ನು ಜಸ್‌ಪ್ರಿತ್ ಬುಮ್ರಾ ಬಹುಬೇಗ ಔಟ್ ಮಾಡಿದ್ದರು. ನಂತರ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ಆರಂಭಿಕ ಬ್ಯಾಟ್ಸ್‌ಮನ್ ಬಹಳ ಎಚ್ಚರಿಕೆಯಿಂದ ಇನಿಂಗ್ಸ್ ಕಟ್ಟುತ್ತಿದ್ದರು. ಅವರು 39 ಎಸೆತಗಳಲ್ಲಿ ಮೂರು ಬೌಂಡರಿ ಸೇರಿದಂತೆ 30 ರನ್ ಗಳಿಸಿ ಆಡುತ್ತಿದ್ದರು. ಆದರೆ ಸರಿಯಾದ ಸಮಯದಲ್ಲಿ ಅಶ್ವಿನ್, ಎಡಗೈ ಬ್ಯಾಟ್ಸ್‌ಮನ್ ಅನ್ನು ನಿಯಂತ್ರಿಸಿದರು. ನಂತರ ಇದೇ ಲಯವನ್ನು ಮುಂದುವರಿಸಿದ ಆರ್. ಅಶ್ವಿನ್ ಆಸ್ಟ್ರೇಲಿಯಾದ ಪ್ರಮುಖ ವಿಕೆಟ್ ಸ್ಟೀವನ್ ಸ್ಮಿತ್(0) ಅವರನ್ನು ಶೂನ್ಯಕ್ಕೆ ಔಟ್ ಮಾಡಿದರು. ಮೊದಲನೇ ದಿನದ ಭೋಜನ ವಿರಾಮದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡ 65 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಾಲ್ಕನೇ ವಿಕೆಟ್‌ಗೆ ಜತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಟ್ರಾವಿಸ್ ಹೆಡ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ತೋರಿದರು. ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 86 ರನ್ ಕಲೆಹಾಕಿತ್ತು. ನಂತರ 38 ರನ್ ಗಳಿಸಿ ಹೆಡ್ ಔಟ್ ಆದರು. ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ಆಸ್ಟ್ರೇಲಿಯಾ ತಂಡದ ಜವಾಬ್ದಾರಿಯನ್ನು ಹೊತ್ತ ಮಾರ್ನಸ್ ಲಾಬುಶೇನ್, ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಅವರು 129 ಎಸೆತದಲ್ಲಿ 48 ರನ್ ಗಳಿಸಿ ಬ್ಯಾಟಿಂಗ್ ಮುಂದುವರಿಸಿದ್ದಾರೆ ಹಾಗೂ ಮತ್ತೊಂದು ತುದಿಯಲ್ಲಿ ಕ್ಯಾಮೆರಾನ್ ಗ್ರೀನ್ ಇದ್ದಾರೆ. 49 ಓವರ್‌ಗಳ ಅಂತ್ಯಕ್ಕೆ ಆಸ್ಟ್ರೇಲಿಯಾ 4 ವಿಕೆಟ್‌ಗಳನ್ನು ಕಳೆದುಕೊಂಡು 134 ರನ್ ಗಳಿಸಿದೆ. ಪಂದ್ಯಕ್ಕೂ ಮುನ್ನ ಭಾರತ ತಂಡ ತನ್ನ ಅಂತಿಮ 11ರಲ್ಲಿ ಪ್ರಮುಖ ನಾಲ್ಕು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಆರಂಭಿಕ ಪೃಥ್ವಿ ಶಾ ಸ್ಥಾನಕ್ಕೆ ಶುಭಮನ್ ಗಿಲ್ ಹಾಗೂ ಗಾಯಾಳು ಮೊಹಮ್ಮದ್ ಶಮಿ ಬದಲಿಗೆ ಮೊಹಮ್ಮದ್ ಸಿರಾಜ್‌ಗೆ ಅವರಿಗೆ ಅವಕಾಶವನ್ನು ನೀಡಲಾಗಿತ್ತು. ಪಿತೃತ್ವ ರಜೆ ಪಡೆದು ತವರಿಗೆ ಮರಳಿರುವುದು ಕೊಹ್ಲಿ ಸ್ಥಾನಕ್ಕೆ ರವೀಂದ್ರ ಜಡೇಜಾ ಬಂದರೆ, ವೃದ್ದಿಮಾನ್ ಸಹಾ ಸ್ಥಾನಕ್ಕೆ ರಿಷಭ್ ಪಂತ್ ಅಂತಿಮ 11ಕ್ಕೆ ಲಗ್ಗೆ ಇಟ್ಟರು. ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಎಂಟು ವಿಕೆಟ್‌ಗಳಿಂದ ಆಸ್ಟ್ರೇಲಿಯಾ ಎದುರು ಸೋಲು ಅನುಭವಿಸಿತ್ತು. ಆ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 0-1 ಹಿನ್ನಡೆಯನ್ನು ಅನುಭವಿಸಿತ್ತು. ಉಭಯ ತಂಡಗಳ ಪ್ಲೇಯಿಂಗ್ XI ಭಾರತ: ಅಜಿಂಕ್ಯ ರಹಾನೆ (ನಾಯಕ), ಹನುಮ ವಿಹಾರಿ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಶುಭಮನ್ ಗಿಲ್, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ , ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಸ್ಪ್ರಿತ್ ಬುಮ್ರಾ. ಆಸ್ಟ್ರೇಲಿಯಾ: ಟಿಮ್ ಪೈನ್ (ನಾಯಕ), ಜೋ ಬರ್ನ್ಸ್, ಮ್ಯಾಥ್ಯೂ ವೇಡ್, ಮಾರ್ನಸ್ ಲಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜಾಶ್ ಹೇಝಲ್‌ವುಡ್, ನೇಥನ್ ಲಯಾನ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38C32DP