ಭೋಪಾಲ್: ನಾನು ಕೆಲವು ದಿನಗಳಿಂದ ಕೆಟ್ಟ ಮನಸ್ಥಿತಿಯಲ್ಲಿದ್ದೇನೆ. ನೀವು ರಾಜ್ಯವನ್ನು ಬಿಟ್ಟು ಹೋಗದಿದ್ದರೆ 10 ಅಡಿ ಆಳದಲ್ಲಿ ನಿಮ್ಮನ್ನು ಹೂತು ಬಿಡುತ್ತೇನೆ ಎಂದು ಮಾಫಿಯಾದಲ್ಲಿ ತೊಡಗಿದ್ದ ಗೂಂಡಾಗಳಿಗೆ ಸಿನಿಮೀಯ ರೀತಿಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಾರ್ನಿಂಗ್ ನೀಡಿದ ಪರಿ ಇದು. ಸಭೆಯೊಂದರಲ್ಲಿ ಮಾತನಾಡುತ್ತಿರುವ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಸಂಬಂಧ ಪ್ರಸ್ತಾಪಿಸಿದ ಅವರು, ನಾನು ಇತ್ತೀಚಿನ ದಿನಗಳಲ್ಲಿ ಕೆಟ್ಟ ಮನಸ್ಥಿತಿಯಲ್ಲಿದ್ದೇನೆ. ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ನಾನು ಬಿಡುವುದಿಲ್ಲ. ಮಧ್ಯಪ್ರದೇಶ ಬಿಟ್ಟು ಹೋಗದಿದ್ದರೆ ನಿಮ್ಮನ್ನು 10 ಅಡಿ ಆಳದಲ್ಲಿ ಹೂಳುತ್ತೇನೆ. ನೀವು ಏನು ಆಗಿದ್ದೀರಿ ಅಂತ ಯಾರಿಗೂ ತಿಳಿಯದ ರೀತಿಯಲ್ಲಿ ಈ ಕ್ರಮವಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಉತ್ತಮ ಆಡಳಿತ ಅಂದರೆ ಜನರು ಯಾವುದೇ ತೊಂದರೆಗಳನ್ನು ಎದುರಿಸದೆ ಜೀವನ ನಡೆಸುವುದು ಆಗಿದೆ. ಈಗ ಮಧ್ಯಪ್ರದೇಶದಲ್ಲಿ ಇಂತಹ ಆಡಳಿತ ಚಾಲ್ತಿಯಲ್ಲಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು. ಇತ್ತೀಚೆಗೆ ಮುಖ್ಯಮಂತ್ರಿ ಡ್ರಗ್ ಮಾಫಿಯಾ ನಿಗ್ರಹಿಸಲು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ)ಗೆ ಆದೇಶ ನೀಡಿದ್ದರು. ಅಲ್ಲದೇ ಇಂತಹ ಚಟುವಟಿಕೆಯಲ್ಲಿ ಭಾಗಿಯಾಗುವ ಯಾರನ್ನು ಕೂಡ ಬಿಡಬೇಡಿ ಎಂದು ಎಚ್ಚರಿಕೆ ನೀಡಿದ್ದರು. ಎನ್‌ಸಿಬಿ ತನಿಖೆ ಪ್ರಕಾರ ಹದಿನೈದಕ್ಕೂ ಹೆಚ್ಚು ಮಧ್ಯಪ್ರದೇಶದ ಜಿಲ್ಲೆಗಳಲ್ಲಿ ಡ್ರಗ್ಸ್ ಮಿತಿ ಮೀರಿ ರವಾನೆಯಾಗುತ್ತಿದೆಯಂತೆ. ಇದರಿಂದ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
from India & World News in Kannada | VK Polls https://ift.tt/37PeYTz