ಗ್ರಾಮ ಪಂಚಾಯಿತಿ ಚುನಾವಣೆಗೆ ಸಿದ್ಧತೆ: ಕೋವಿಡ್‌ ಸೋಂಕಿತರಿಗೆ ಪ್ರತ್ಯೇಕ ಮತದಾನ ಅವಧಿ!

ಸುಧಾಕರ ಸುವರ್ಣ ಪುತ್ತೂರು ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ಎಲ್ಲ ರೀತಿಯ ಸಿದ್ಧತೆ ನಡೆಯುತ್ತಿದ್ದು, ಕೊರೊನಾ ಪರಿಸ್ಥಿತಿಯ ನಡುವೆ ನಡೆಯುತ್ತಿರುವ ಕಾರಣ ಕೊವಿಡ್‌ ಸೋಂಕಿತರಿಗಾಗಿಯೇ ಪ್ರತ್ಯೇಕ ಮತದಾನ ಸಮಯ ನಿಗದಿ ಮಾಡಲಾಗಿದೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನದ ಸಮಯ ನಿಗದಿ ಮಾಡಲಾಗಿದ್ದು, ಇದರಲ್ಲಿ ಸಂಜೆ 4ರಿಂದ 5 ಗಂಟೆಯ ಅವಧಿಯನ್ನು ಕೋವಿಡ್‌ ಪಾಸಿಟಿವ್‌ ಪ್ರಕರಣ ಇರುವ ಮತದಾರರಿಗಾಗಿ ನಿಗದಿ ಮಾಡಲಾಗಿದೆ. ಚುನಾವಣೆಯ ಕಾಲಕ್ಕೆ ಆಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಮಂದಿ ಕೋವಿಡ್‌ ಸೋಂಕಿತರು ಇದ್ದಾರೆ ಎಂಬ ಪಟ್ಟಿಯನ್ನು ಚುನಾವಣಾ ಆಯೋಗ ಪಡೆದುಕೊಳ್ಳಲಿದ್ದು, ಅವರೆಲ್ಲರ ಮೇಲೆ ನಿಗಾ ಇರಿಸುವ ಹೊಣೆಯನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತದೆ. ಮತದಾನದ ದಿನ ಸಮೀಪಿಸುತ್ತಿದ್ದಂತೆ ಆರೋಗ್ಯ ಕಾರ್ಯಕರ್ತರು ಸೋಂಕಿತರನ್ನು ಸಂಪರ್ಕಿಸಿ ಅವರಿಗೆ ಮತದಾನದ ವಿಶೇಷ ಸಮಯದ ಮಾಹಿತಿ ನೀಡಲಿದ್ದಾರೆ. ಈ ನಿಗದಿತ ಸಮಯದಲ್ಲೇ ಕೋವಿಡ್‌ ಸೋಂಕಿತರು ಮತದಾನ ಮಾಡುವುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಈ ಮಾಹಿತಿಯು ರಾಜಕೀಯ ಪಕ್ಷಗಳ ಚುನಾವಣಾ ಏಜೆಂಟರಿಗೂ ತಿಳಿದಿರುವ ಕಾರಣ ಮುಂಜಾಗರೂಕತೆ ವಹಿಸಲು ಸುಲಭವಾಗುತ್ತದೆ. 1000 ಮತದಾರರಿಗೆ ಸೀಮಿತ ಕೊರೊನಾ ಹಿನ್ನೆಲೆಯಲ್ಲಿ ಪ್ರತೀ ಮತಗಟ್ಟೆಗಳನ್ನು ಒಂದು ಸಾವಿರ ಗರಿಷ್ಠ ಮತದಾರರ ಮತಗಟ್ಟೆಯಾಗಿ ನಿಗದಿ ಪಡಿಸಲಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ 1200 ಮತದಾರರ ಮಿತಿ ನಿಗದಿಪಡಿಸಲಾಗಿತ್ತು. ಈ ಬಾರಿ 1000ಕ್ಕೆ ಸೀಮಿತಗೊಳಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಮತದಾರರು ಇರುವ ಕಡೆ ಸಹಾಯಕ ಮತಗಟ್ಟೆ ರೂಪಿಸಲಾಗಿದೆ. ಪುತ್ತೂರು ತಾಲೂಕಿನಲ್ಲಿ 106 ಮೂಲ ಮತಗಟ್ಟೆಗಳಿದ್ದು, 45 ಸಹಾಯಕ ಮತಗಟ್ಟೆಗಳನ್ನು ರಚಿಸಲಾಗಿದೆ. 1200 ಮತದಾರರು ಇರುವ ಕಡೆಗಳಲ್ಲಿ ತಲಾ 600 ಮತದಾರರ ಎರಡು ಮತಗಟ್ಟೆಗಳನ್ನು ರಚಿಸಲಾಗಿದೆ. ಚುನಾವಣಾ ಅಧಿಕಾರಿಗಳ ನೇಮಕ ಪ್ರತೀ ಗ್ರಾಮ ಪಂಚಾಯಿತಿಗೆ ಬಿ ದರ್ಜೆಯ ಅಧಿಕಾರಿಯನ್ನು ಚುನಾವಣಾ ಅಧಿಕಾರಿಯನ್ನಾಗಿ, ಸಿ ದರ್ಜೆಯ ಅಧಿಕಾರಿಯನ್ನು ಸಹಾಯಕ ಚುನಾವಣಾ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಮತದಾನದ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗುವವರೆಗೂ ಚುನಾವಣಾ ಆಯೋಗದ ನಿರ್ದೇಶನದಂತೆ ಇವರು ಆಯಾ ಪಂಚಾಯಿತಿಗಳ ಚುನಾವಣಾ ಅಧಿಕಾರಿಗಳಾಗಿ ಕೆಲಸ ಮಾಡಲಿದ್ದಾರೆ. ತಾಲೂಕು ತಹಸೀಲ್ದಾರ್‌ಗಳು ಆಯಾ ತಾಲೂಕುಗಳ ಸಮಗ್ರ ಉಸ್ತುವಾರಿಗಳಾಗಿದ್ದು, ಸಹಾಯಕ ಆಯುಕ್ತರು ಇಡೀ ವಿಭಾಗದ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ. ಮತದಾರರ ಪಟ್ಟಿಗೆ ಗಡು ನಿಗದಿ 2020ರ ಅಕ್ಟೋಬರ್‌ 31ರವರೆಗೆ ಅಂತಿಮಗೊಂಡಿರುವ ಮತದಾರರ ಪಟ್ಟಿಯನ್ನು ಈ ಬಾರಿ ಪಂಚಾಯಿತಿ ಚುನಾವಣೆಗೆ ಬಳಸಲಾಗುವುದು ಎಂದು ಪುತ್ತೂರು ತಹಸೀಲ್ದಾರ್‌ ರಮೇಶ್‌ ಬಾಬು ತಿಳಿಸಿದ್ದಾರೆ. ಈ ಬಗ್ಗೆ ವಿಜಯ ಕರ್ನಾಟಕದ ಜತೆ ಮಾತನಾಡಿದ ಅವರು, ನಂತರದ ಸೇರ್ಪಡೆ ಮತದಾರರನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಕೋವಿಡ್‌ ಸೋಂಕಿತರಿಗೆ ಪ್ರತ್ಯೇಕ ಮತದಾನ ಸಮಯ ನಿಗದಿ ಮಾಡಿರುವ ಕಾರಣ ಅದರ ಕಟ್ಟು ನಿಟ್ಟಿನ ಪಾಲನೆಗೆ ಎಲ್ಲ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ವೀಡಿಯೋ ಕಾನ್ಫರೆನ್ಸ್‌ ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಡಿಸೆಂಬರ್‌ 4ರಂದು ಸಂಜೆ 4 ಗಂಟೆಗೆ ವೀಡಿಯೋ ಕಾನ್ಫರೆನ್ಸ್‌ ನಡೆಸಲಿದ್ದಾರೆ. ಇದರಲ್ಲಿ ಸಹಾಯಕ ಆಯುಕ್ತರುಗಳು, ತಹಸೀಲ್ದಾರ್‌ಗಳು, ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಮುಂತಾದವರು ಭಾಗವಹಿಸಲಿದ್ದು, ಚುನಾವಣಾ ಸಿದ್ಧತೆಯ ಪರಿಶೀಲನೆ ನಡೆಯಲಿದೆ.


from India & World News in Kannada | VK Polls https://ift.tt/3qmo41l

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...