ಬಸವನ ಬಾಗೇವಾಡಿಯಲ್ಲಿ ಭೂಕಂಪನ: ಗೋಡೆಗಳಲ್ಲಿ ಬಿರುಕು, ಮಣ್ಣು ಉದುರುವುದು ಕಂಡು ಹೆದರಿ ಓಡಿದ ಜನರು

ಬಸವನಬಾಗೇವಾಡಿ: ತಾಲೂಕಿನ ಹಲವೆಡೆ ಭೂಮಿ ಕಂಪಿಸಿದೆ. ಇದರಿಂದಾಗಿ ಬೆಚ್ಚಿದ ಕುಟುಂಬ ಸದಸ್ಯರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ತಾಲೂಕಿನ ಮನಗೂಳಿ, ಉಕ್ಕಲಿ ಗ್ರಾಮದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಇಲ್ಲಿನ ಜನರು ಹೇಳಿದ್ದಾರೆ. ಇನ್ನು ಈ ಘಟನೆ ಬಳಿಕ ಕೆಲ ಗ್ರಾಮಗಳಲ್ಲಿ ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಮನೆಗಳ ಚಾವಣಿಯಿಂದ ಮಣ್ಣು ಉದುರಿ ಬಿದ್ದಿದ್ದರಿಂದ ಮನಗೂಳಿ ಮತ್ತು ಉಕ್ಕಲಿ ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ ಎಂದು ಜನರು ಮಾಹಿತಿ ನೀಡಿದ್ದಾರೆ. ಇನ್ನು ಮಧ್ಯಾಹ್ನ ಏಕಾಏಕಿ ಭಾರಿ ಸದ್ದು ಕೇಳಿ ಬಂದಿದ್ದರಿಂದ ಜನರು ಭಯಭೀತರಾಗಿದ್ದಾರೆ. ಉಕ್ಕಲಿ ಗ್ರಾಪಂ ಸುತ್ತ ಮುತ್ತ ಸೇರಿ ಬಸ್‌ ನಿಲ್ದಾಣ ಇತರೆಡೆ ಭಾರಿ ಸದ್ದಾಗಿದೆ. ನಾನಾ ಮನೆಗಳ ಪಾತ್ರಗಳು ಅಲುಗಾಡಿವೆ. ಈಗಲೂ ಜನ .ಹೆದರಿದ್ದಾರೆ. ಸದ್ದಿಗೆ ಜನರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ. ಮನೆಗಳಲ್ಲಿನ ಪಾತ್ರೆಗಳು ಅಲುಗಾಡಿವೆ. ಜನರು ಗುಂಪಾಗಿ ಮನೆಯಿಂದ ಹೊರಗಡೆ ಓಡಿ ಬಂದರು ಎಂದು ಪಿಡಿಒ ಬಂಡಿವಡ್ಡರ ವಿಜಯ ಕರ್ನಾಟಕಕ್ಕೆ ತಿಳಿಸಿದ್ದಾರೆ.


from India & World News in Kannada | VK Polls https://ift.tt/33KjCjg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...