2020: ಕೊರೊನಾ ನಡುವೆಯೂ ಕೇಂದ್ರ, ಕರ್ನಾಟಕದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳಿವು...

2020- ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡಿದ ಕೊರೊನಾದಿಂದಾಗಿ ಇಡೀ ವರ್ಷವೇ 'ಮುಸುಕು' ಹಾಕಿಕೊಂಡು ಕುಳಿತುಕೊಳ್ಳುವಂತಾಯಿತು. ಎಲ್ಲವೂ ಮಾಸ್ಕ್‌ಮಯವಾಗಿತ್ತು. ಕೊರೊನಾ ಸೋಂಕು ಭಾರತವನ್ನು ಮಾತ್ರವಲ್ಲ ಇಡೀ ವಿಶ್ವವನ್ನೇ ಮುಖ ಮುಚ್ಚಿಕೊಳ್ಳುವಂತೆ ಮಾಡಿಬಿಟ್ಟಿತು. ಇಂಥ ಸಂಕಷ್ಟದ ಸಮಯದಲ್ಲಿಯೂ ಕೇಂದ್ರದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಹಾಗೂ ಕರ್ನಾಟಕದಲ್ಲಿರುವ ಬಿಎಸ್ ಯಡಿಯೂರಪ್ಪ ಸರಕಾರ ಹಲವಾರು ಮಹತ್ವದ ಕಾಯಿದೆಗಳನ್ನು ಜಾರಿಗೆ ತಂದಿದೆ. ಈ ವರ್ಷ ವೈರಸ್‌ಮಯ ಆಗಿದೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕೈಗೊಂಡಿರುವ ನಿರ್ಧಾರಗಳು ವಿದಾಯಮಯವಾಗಿದೆ. ಈ ವರ್ಷ ಬಹುತೇಕ ಲಾಕ್‌ಡೌನ್‌ ಆಗಿದ್ದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿವೇಶನ ಕೂಡ ಮೊಟಕಾಗಿತ್ತು. ಹಾಗಿದ್ದರೂ ಕೆಲವು ನಿರ್ಧಾರಗಳನ್ನು ಸರಕಾರಗಳು ಕೈಗೊಂಡಿವೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ....

2020-ಕೊರೊನಾ ಎಂಬ ಮಹಾಮಾರಿ ಆವರಿಸಿರುವ ಈ ವರ್ಷಕ್ಕೆ ಈಗ ಗುಡ್‌ ಬೈ ಹೇಳುವ ಸಮಯ ಬಂದಿದೆ. 2021ರಲ್ಲಿ ಎಲ್ಲರಿಗೂ ಆರೋಗ್ಯ ಭಾಗ್ಯ ಸಿಗಲಿ ಎಂದು ಆಶಿಸುತ್ತಾ 2020ರಲ್ಲಿ ಕೈಗೊಳ್ಳಲಾಗಿರುವ ಕೆಲವು ಮಹತ್ವದ ನಿರ್ಧಾರಗಳ ಬಗ್ಗೆ ಕಣ್ಣಾಡಿಸೋಣ.....


2020: ಕೊರೊನಾ ನಡುವೆಯೂ ಕೇಂದ್ರ, ಕರ್ನಾಟಕದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳಿವು...

2020- ಇಡೀ ವಿಶ್ವವನ್ನೇ ಹಿಂಡಿ ಹಿಪ್ಪೆ ಮಾಡಿದ ಕೊರೊನಾದಿಂದಾಗಿ ಇಡೀ ವರ್ಷವೇ 'ಮುಸುಕು' ಹಾಕಿಕೊಂಡು ಕುಳಿತುಕೊಳ್ಳುವಂತಾಯಿತು. ಎಲ್ಲವೂ ಮಾಸ್ಕ್‌ಮಯವಾಗಿತ್ತು. ಕೊರೊನಾ ಸೋಂಕು ಭಾರತವನ್ನು ಮಾತ್ರವಲ್ಲ ಇಡೀ ವಿಶ್ವವನ್ನೇ ಮುಖ ಮುಚ್ಚಿಕೊಳ್ಳುವಂತೆ ಮಾಡಿಬಿಟ್ಟಿತು. ಇಂಥ ಸಂಕಷ್ಟದ ಸಮಯದಲ್ಲಿಯೂ ಕೇಂದ್ರದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಕಾರ ಹಾಗೂ ಕರ್ನಾಟಕದಲ್ಲಿರುವ ಬಿಎಸ್ ಯಡಿಯೂರಪ್ಪ ಸರಕಾರ ಹಲವಾರು ಮಹತ್ವದ ಕಾಯಿದೆಗಳನ್ನು ಜಾರಿಗೆ ತಂದಿದೆ. ಈ ವರ್ಷ ವೈರಸ್‌ಮಯ ಆಗಿದೆ. ಜತೆಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕೈಗೊಂಡಿರುವ ನಿರ್ಧಾರಗಳು ವಿದಾಯಮಯವಾಗಿದೆ. ಈ ವರ್ಷ ಬಹುತೇಕ ಲಾಕ್‌ಡೌನ್‌ ಆಗಿದ್ದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿವೇಶನ ಕೂಡ ಮೊಟಕಾಗಿತ್ತು. ಹಾಗಿದ್ದರೂ ಕೆಲವು ನಿರ್ಧಾರಗಳನ್ನು ಸರಕಾರಗಳು ಕೈಗೊಂಡಿವೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ....



​ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಉತ್ತೇಜನ, ಸೌಲಭ್ಯ) ಸುಗ್ರೀವಾಜ್ಞೆ 2020
​ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ(ಉತ್ತೇಜನ, ಸೌಲಭ್ಯ) ಸುಗ್ರೀವಾಜ್ಞೆ 2020

ಅತ್ಯಂತ ಸೂಕ್ಷ್ಮ ವಿಷಯವಾದ ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮಹತ್ವದ ನಿರ್ಣಯ ಕೈಗೊಂಡಿತು. ಅದುವೇ ಕೃಷಿ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಸುಗ್ರೀವಾಜ್ಞೆ 2020. ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಉದ್ದೇಶದಿಂದ ಈ ಕಾಯಿದೆ ತರಲಾಗಿದೆ ಎಂಬುದು ಕೇಂದ್ರ ಸರಕಾರದ ವಾದ. ರೈತರು ದೇಶದ ಯಾವುದೇ ಭಾಗದಲ್ಲಿ ತಮ್ಮ ಉತ್ಪನ್ನ ಮಾರಾಟ ಮಾಡಬಹುದು. ಕೃಷಿ ವಲಯದಲ್ಲಿನ ಹೂಡಿಕೆಗೆ ಉತ್ತೇಜನ ನೀಡಲು ಅವಕಾಶ ಕಲ್ಪಿಸಲಾಗಿದೆ. ರೈತರ ಆದಾಯ ದುಪ್ಪಟ್ಟುಗೊಳಿಸುವ ಆಶಯ ಕೂಡ ಈ ಕಾಯಿದೆಯಲ್ಲಿದೆ ಎಂದು ಹೇಳಲಾಗಿದೆ. ಇದರ ಜತೆಗೆ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಖಾತರಿ ಒಪ್ಪಂದ ಸುಗ್ರೀವಾಜ್ಞೆ 2020, 'ಕೃಷಿ ಸೇವಾ ಸುಗ್ರೀವಾಜ್ಞೆ 2020' ಖರೀದಿದಾರರ ಘಟಕಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಅವಕಾಶ ಒದಗಿಸಲಾಗಿದೆ. ಕೇಂದ್ರ ಸರಕಾರದ ಈ ಕಾಯಿದೆಗೆ ವಿರೋಧ ಪಕ್ಷಗಳು ಹಾಗೂ ರೈತ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ ವರ್ಷಾಂತ್ಯದವರೆಗೂ ನಡೆದಿದೆ.



​ರಾಷ್ಟ್ರೀಯ ಶಿಕ್ಷಣ ನೀತಿ
​ರಾಷ್ಟ್ರೀಯ ಶಿಕ್ಷಣ ನೀತಿ

ಚಿಂತನೆಗಳು ಮತ್ತು ನಿರ್ಧಾರಗಳು ಬದಲಾಗುತ್ತಿರಲೇಬೇಕು. ಈ ರೀತಿಯಾಗಿ ಕೇಂದ್ರ ಸರಕಾರ 34 ವರ್ಷಗಳ ಬಳಿಕ ಶಿಕ್ಷಣ ನೀತಿಯನ್ನು ಮಾರ್ಪಾಡು ಮಾಡಿದೆ. 'ರಾಷ್ಟ್ರೀಯ ಶಿಕ್ಷಣ ನೀತಿ'ಗೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ. ಉಚಿತ, ಕಡ್ಡಾಯ ಮತ್ತು ಕ್ರಿಯಾಶೀಲ ಶಿಕ್ಷಣವೇ ಈ ನೀತಿಯ ಮೂಲಕ ಉದ್ದೇಶ. ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ.6 ರಷ್ಟನ್ನು ಶಿಕ್ಷಣಕ್ಕೆ ವ್ಯಯ ಮಾಡಬೇಕು ಎಂಬುದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಲಾಗಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಹೊಸ ಶಿಕ್ಷಣ ನೀತಿಯಲ್ಲಿ ಪದವಿ ಪೂರ್ವ, ಪದವಿ ಶಿಕ್ಷಣ ವಿಲೀನವಾಗುತ್ತಿದ್ದು, 3 ಅಥವಾ 4 ವರ್ಷಗಳ ಅವಧಿಯದ್ದಾಗಿರುತ್ತದೆ. 1 ವರ್ಷ ಪೂರೈಸಿದ ಬಳಿಕ ವೃತ್ತಿಪರ ಶಿಕ್ಷಣ ಸೇರಿದಂತೆ ಅವರು ಆಯ್ಕೆ ಮಾಡಿಕೊಂಡಿದ್ದ ವಿಷಯದಲ್ಲಿ ಪ್ರಮಾಣ ಪತ್ರ ನೀಡಲಾಗುತ್ತದೆ. ವಿದ್ಯಾರ್ಥಿಯು 2 ವರ್ಷ ಪೂರೈಸಿದರೆ ಡಿಪ್ಲೊಮಾ ಪ್ರಮಾಣ ಪತ್ರ ದೊರೆಯಲಿದೆ. 3 ವರ್ಷ ಪೂರೈಸಿದರೆ ಪದವಿ ಪ್ರಮಾಣ ಪತ್ರ ದೊರೆಯಲಿದೆ. ವಿದ್ಯಾರ್ಥಿಯು ಐಚ್ಛಿಕವಾಗಿ 4 ವರ್ಷದ ಡಿಗ್ರಿಯನ್ನೂ ಪೂರ್ಣಗೊಳಿಸಬಹುದಾಗಿದೆ. ವಿನೋದದ ಜತೆ ವಿಜ್ಞಾನ, ಕ್ರಿಯಾಶೀಲದೊಂದಿಗೆ ಕಲಿಕೆ ಎನ್ನುವ ತತ್ವವನ್ನು ಅಳವಡಿಸಿಕೊಳ್ಳಲು ಕೇಂದ್ರ ಸರಕಾರ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಪ್ರಯತ್ನಿಸಿದೆ ಎನ್ನುವುದು ಶಿಕ್ಷಣ ತಜ್ಞರ ಅಭಿಪ್ರಾಯ.



​ಚೀನಾ ಆ್ಯಪ್‌ಗಳಿಗೆ ನಿಷೇಧ
​ಚೀನಾ ಆ್ಯಪ್‌ಗಳಿಗೆ ನಿಷೇಧ

ನೆರೆ 'ಹೊರೆ'ಯಾಗಿರುವ ಚೀನಾ ಜತೆಗಿನ ಗಡಿ ಸಮಸ್ಯೆ ವಾಣಿಜ್ಯ ಸಂಘರ್ಷ ದಶಕಗಳಿಂದ ನಡೆಉದುಕೊಂಡು ಬರುತ್ತಿದೆ. ಚೀನಾದ ಕ್ಯಾತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ನೆರೆ ರಾಷ್ಟ್ರಕ್ಕೆ ಗುದ್ದು ನೀಡಿದೆ. ಚೀನಾ ಮೂಲದ ಆ್ಯಪ್‌ಗಳನ್ನು ಭಾರತ ನಿಷೇಧಿಸಿದೆ. ಎರಡು ಕಂತಿನಲ್ಲಿ ಕೇಂದ್ರ ಸರಕಾರ ನಿಷೇಧದ ನಿರ್ಧಾರ ಕೈಗೊಂಡಿತು. ಮೊದಲ ಕಂತಿನಲ್ಲಿ ಟಿಕ್‌ಟಾಕ್, ಶೇರ್‌ ಇಟ್, ಯುಸಿ ಬ್ರೌಸರ್ ಹಾಗೂ ಹಲೋ ಆ್ಯಪ್‌ ಸಹಿತ ಒಟ್ಟು 59 ಆ್ಯಪ್‌ಗಳಿಗೆ ನಿಷೇಧ ಹೇರಿತು. ನಂತರ 15ಕ್ಕೂ ಹೆಚ್ಚು ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ದೇಶದ ಸಾರ್ವಭೌಮತೆ, ಭದ್ರತೆ, ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಗುಪ್ತಚರ ಇಲಾಖೆಯು ಶಿಫಾರಸಿನ ಮೇರೆಗೆ ಕೇಂದ್ರ ಗೃಹ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ. ದೇಶದಲ್ಲಿ ಬಳಕೆದಾರರ ಮಾಹಿತಿ ಹೆಕ್ಕುವ ಮತ್ತು ಸುರಕ್ಷತೆಗೆ ಧಕ್ಕೆ ತರುವ ಚೀನಾ ಮೂಲದ ಆ್ಯಪ್‌ಗಳಿಗೆ ರೆಡ್‌ ಸಿಗ್ನಲ್‌ ತೋರಿಸಲಾಗಿದೆ. ಇನ್ನಷ್ಟು ಬ್ಯಾನ್‌ ಆಗುವ ಸಾಧ್ಯತೆ ಇದೆ. ಚೀನಾ ಹೂಡಿಕೆ ಇರುವ ಆ್ಯಪ್‌, ಚೀನಾದಲ್ಲಿ ಸರ್ವರ್ ಹೊಂದಿರುವ ಆ್ಯಪ್‌ಗಳ ಬಗ್ಗೆಯೂ ನಿಗಾ ಇಡಲಾಗಿದೆ. ಮುಂದಿನ ಹಂತದಲ್ಲಿ ಮತ್ತಷ್ಟು ಚೀನಾ ಆ್ಯಪ್‌ ಬಂದ್ ಆಗುವ ಸಾಧ್ಯತೆಯಿದೆ. ನಿಷೇಧಿತ ಆ್ಯಪ್‌ಗಳಿದ್ದರೆ ಈಗಲೇ ಡಿಲೀಟ್‌ ಮಾಡಿಕೊಳ್ಳಿ.



​ಎಪಿಎಂಸಿ ಕಾಯಿದೆ
​ಎಪಿಎಂಸಿ ಕಾಯಿದೆ

ಹಾಲಿ ಇರುವ ಎಪಿಎಂಸಿ ಕಾಯಿದೆಯನ್ನು ತಿದ್ದುಪಡಿ ಮಾಡಿ 'ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯಿದೆ'ಯನ್ನು (ಎಪಿಎಂಎಲ್‌ ಕಾಯಿದೆ) ಸುಗ್ರೀವಾಜ್ಞೆ ಜಾರಿಗೆ ತರಲಾಗಿದ್ದು, ಇದು ಭಾರಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ದಿನಸಿ ಪದಾರ್ಥಗಳ ಖರೀದಿ ಮತ್ತು ಮಾರಾಟಕ್ಕೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದೊಂದಿಗೆ ಎಪಿಎಂಸಿ ತಿದ್ದುಪಡಿ ಕಾಯಿದೆ ಜಾರಿಗೆ ತರಲಾಗಿದೆ. ಆದರೆ ಖಾಸಗಿ ಕಂಪನಿಗಳಿಗೆ ಲಾಭ ಒದಗಿಸಿಕೊಡುವುದೇ ಈ ತಿದ್ದುಪಡಿ ಹಿಂದಿನ ಹುನ್ನಾರ ಎಂಬುದು ರೈತರ ಆರೋಪವಾಗಿದೆ. ಪ್ರತಿಪಕ್ಷಗಳು ಈ ತಿದ್ದುಪಡಿಯನ್ನು ವಿರೋಧಿಸುತ್ತಿವೆ. ವ್ಯಾಪಾರಸ್ಥರು, ನಾನಾ ಕಂಪನಿಯವರು ನೇರವಾಗಿ ರೈತರ ಮನೆ ಬಾಗಿಲಿಗೆ ತೆರಳಿ ಬೆಳೆ ಖರೀದಿಸಲು, ರೈತರು ರಾಜ್ಯದ ಯಾವುದೇ ಜಿಲ್ಲೆಯ ಎಪಿಎಂಸಿಯಲ್ಲಿ ಬೆಳೆ ಮಾರಾಟ ನಡೆಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ರೈತರು ಬೆಳೆದ ಉತ್ಪನ್ನಗಳನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡಲು ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೊಸ ಕಾಯಿದೆ ಎಪಿಎಂಸಿಗಳನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುವ ಉದ್ದೇಶ ಹೊಂದಿದೆ ಎಂಬುದು ಸರಕಾರದ ವಾದವಾಗಿದೆ. ಆದರೆ ಪ್ರತಿಪಕ್ಷಗಳು ಇದೊಂದು ಬೃಹತ್‌ ಹುನ್ನಾರ, ಎಪಿಎಂಪಿ ಮಾರುಕಟ್ಟೆಗಳನ್ನು ಮುಚ್ಚುವ ಸಂಚು ಇದೆ ಎಂದು ಆರೋಪಿಸಿವೆ.



ಭೂ ಸುಧಾರಣಾ ಕಾಯಿದೆ
ಭೂ ಸುಧಾರಣಾ ಕಾಯಿದೆ

ಭಾರಿ ಚರ್ಚೆಗೆ ಗ್ರಾಸವಾಗಿದ್ದ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿಗೆ ಬಿಜೆಪಿ ಸರಕಾರ ಸುಗ್ರೀವಾಜ್ಞೆ ಹೊರಡಿಸಿದ್ದು ಇದಕ್ಕೆ ರಾಜ್ಯಪಾಲ ವಜೂಭಾಯಿವಾಲಾ ಕೂಡ ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿ ಕಾಯಿದೆಗೆ ಪ್ರತಿಪಕ್ಷಗಳು, ರೈತ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ ನಿರಂತರ ಪ್ರತಿಭಟನೆಗಳನ್ನು ನಡೆಸಿದವು. ರಾಜ್ಯದಲ್ಲಿ ಕೃಷಿ ಜಮೀನು ಖರೀದಿಸಲು ಜಾರಿಯಲ್ಲಿದ್ದ ಮೂರು ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಈಗ ಈ ತಿದ್ದುಪಡಿ ಕಾಯಿದೆಗೆ ಅನುಮೋದನೆ ದೊರೆತಿದೆ. ಇನ್ನು ಮುಂದೆ ಯಾವುದೇ ಆದಾಯ ಮಿತಿ ಇಲ್ಲದೆ ಹಾಗೂ ಕೃಷಿ ಕುಟುಂಬದ ಹಿನ್ನೆಲೆ ಹೊಂದಿಲ್ಲದವರೂ ಕೃಷಿ ಜಮೀನು ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ. 1974ರ ಕರ್ನಾಟಕ ಭೂ ಸುಧಾರಣಾ ಕಾಯ್ದೆ ಪ್ರಕಾರ ಈವರೆಗೆ ಕೃಷಿಕರು, ಕೃಷಿ ಮೂಲದ ಕುಟುಂಬದವರು ಮಾತ್ರ ರಾಜ್ಯದಲ್ಲಿ ಕೃಷಿ ಭೂಮಿ ಖರೀದಿಸಲು ಸಾಧ್ಯವಿತ್ತು. ಕೃಷಿಕರಲ್ಲದವರು ಕೃಷಿ ಮಾಡಲು ಆಸಕ್ತಿ ಹೊಂದಿದ್ದರೂ ಕೃಷಿ ಭೂಮಿ ಖರೀದಿಸಲು ಕಾಯ್ದೆಯಲ್ಲಿ ಅವಕಾಶವಿರಲಿಲ್ಲ. ಇಂತಹವರಿಗೆ ಅವಕಾಶ ಮಾಡಿಕೊಡಲು ಕೇವಲ ಕೃಷಿ ಸಂಬಂಧಿ ಚಟುವಟಿಕೆಗೆ ಮಾತ್ರ ಬಳಸುವ ಷರತ್ತು ವಿಧಿಸಿ ಯಾರು ಬೇಕಾದರೂ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿದೆ.



​ಬಳ್ಳಾರಿ ಇಬ್ಭಾಗ: ವಿಜಯನಗರ ಜಿಲ್ಲೆ ರಚನೆ
​ಬಳ್ಳಾರಿ ಇಬ್ಭಾಗ: ವಿಜಯನಗರ ಜಿಲ್ಲೆ ರಚನೆ

ಹಲವಾರು ದಿನಗಳಿಂದ ಬೇಡಿಕೆಯಲ್ಲಿದ್ದ ವಿಜಯನಗರ ಜಿಲ್ಲೆ ರಚನೆಗೆ ಬಿಎಸ್‌ ಯಡಿಯೂರಪ್ಪ ನೇತೃತ್ವದ ಸರಕಾರ ಅಸ್ತು ಎಂದಿದೆ. ಸಚಿವ ಆನಂದ್ ಸಿಂಗ್ ಪಟ್ಟು ಹಿಡಿದು ತಮ್ಮ ಕೆಲಸವನ್ನು ಮಾಡಿಸಿಕೊಂಡಿದ್ದಾರೆ. ಹೊಸಪೇಟೆಯನ್ನು ಜಿಲ್ಲಾ ಕೇಂದ್ರವಾಗಿಟ್ಟು ನೂತನ ವಿಜಯನಗರ ಜಿಲ್ಲೆಯನ್ನು ಘೋಷಣೆ‌ ಮಾಡಲಾಗಿದೆ. ಇದಕ್ಕೆ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ಹೊಸಪೇಟೆಯನ್ನು ಕೇಂದ್ರ ಸ್ಥಾನವನ್ನಾಗಿಸಿಕೊಂಡು, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹೂವಿನಹಡಗಲಿ ಹಾಗೂ ಹರಪನಹಳ್ಳಿ ಸೇರಿ ಒಟ್ಟು ‌ಆರು ತಾಲೂಕುಗಳನ್ನು‌ ಒಳಗೊಂಡ ನೂತನ‌‌‌‌ ಜಿಲ್ಲೆಯಾಗಿ ವಿಜಯನಗರ ಹೊರಹೊಮ್ಮಿದೆ. ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ, ಸಿರುಗುಪ್ಪ, ಕುರುಗೋಡು ಹಾಗೂ‌ ಕಂಪ್ಲಿ ತಾಲೂಕುಗಳು ಉಳಿದುಕೊಳ್ಳಲಿವೆ.



​ಲವ್‌ ಜಿಹಾದ್‌ ವಿರುದ್ಧ ಸಮರ
​ಲವ್‌ ಜಿಹಾದ್‌ ವಿರುದ್ಧ ಸಮರ

ಪ್ರೇಮದ ಬಲೆಯಲ್ಲಿ ಯುವತಿಯರನ್ನು, ಬಾಲಕಿಯರನ್ನು ಸಿಲುಕಿಸುವುದನ್ನು ತಪ್ಪಿಸಲು ಉತ್ತರ ಪ್ರದೇಶ ಸಮರ ಸಾರಿದೆ. ಮದುವೆ ಕಾರಣಕ್ಕೆ ಒತ್ತಾಯದ ಮತಾಂತರ ಪ್ರಕರಣಗಳನ್ನು ತಡೆಗಟ್ಟಲು, ಲವ್‌ ಜಿಹಾದ್‌ ಹೆಸರಿನಲ್ಲಿ ಮೋಸ ಮಾಡುವುದನ್ನು ತಪ್ಪಿಸಲು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರ ಲವ್‌ ಜಿಹಾದ್‌ ನಿಯಂತ್ರಣ ಸುಗ್ರೀವಾಜ್ಞೆ ಜಾರಿಗೊಳಿಸಿದೆ. ಈ ರೀತಿಯ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಾನೂನುಬಾಹಿರ ಧಾರ್ಮಿಕ ಪರಿವರ್ತನೆಯನ್ನು ತಡೆಗಟ್ಟಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ ಎನ್ನುವುದು ಉತ್ತರ ಪ್ರದೇಶ ಸರಕಾರದ ವಾದ. ನವೆಂಬರ್‌ 24ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಒತ್ತಾಯದ ಮತಾಂತರಕ್ಕೆ 1-5 ವರ್ಷಗಳ ಜೈಲುಶಿಕ್ಷೆ ಹಾಗೂ 15,000 ರೂ. ದಂಡ, ಎಸ್‌ಸಿ / ಎಸ್‌ಟಿ ಸಮುದಾಯದ ಅಪ್ರಾಪ್ತ ಮತ್ತು ವಯಸ್ಕ ಮಹಿಳೆಯರ ಒತ್ತಾಯದ ಮತಾಂತರಕ್ಕೆ 3-10 ವರ್ಷಗಳ ಜೈಲುಶಿಕ್ಷೆ ಹಾಗೂ 25,000 ರೂ.ಗಳ ದಂಡ ವಿಧಿಸಲು ಸುಗ್ರೀವಾಜ್ಞೆಯಲ್ಲಿ ಅವಕಾಶ ನೀಡಲಾಗಿದೆ. ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವ ಕುರಿತು ದೇಶಾದ್ಯಂತ ಚರ್ಚೆಯಾಗುತ್ತಿದೆ. ಉತ್ತರಪ್ರದೇಶ ಸರಕಾರ ಲವ್ ಜಿಹಾದ್ ವಿರುದ್ಧ ಹೊರಡಿಸಿರುವ ಸುಗ್ರೀವಾಜ್ಞೆ ಇಡೀ ದೇಶದ ಗಮನ ಸೆಳೆದಿದೆ. ಹಲವು ರಾಜ್ಯಗಳಲ್ಲಿಯೂ ಇದನ್ನು ಜಾರಿಗೆ ತರವು ಚಿಂತನೆ ಕೂಡ ನಡೆದಿದೆ.





from India & World News in Kannada | VK Polls https://ift.tt/3hhsaUk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...