ಸಿಎಂ ಬಿಎಸ್ ಯಡಿಯೂರಪ್ಪ ಮಂಡಿಸಲಿರುವ ಆಯವ್ಯಯ ಪತ್ರದಲ್ಲಿ ವಲಯದಿಂದ ಸಾಕಷ್ಟು ಬೇಡಿಕೆಗಳಿವೆ. ಅವುಗಳ ಪೈಕಿ ಪ್ರಮುಖ ನಿರೀಕ್ಷೆಗಳು ಇಲ್ಲಿವೆ- ರೈತರಿಗೆ ದೋಖಾ, ವಿಮಾ ಕಂಪನಿಗಳಿಗೆ ಬಂಪರ್ ಆಗಿರುವ ಫಸಲ್ ಬಿಮಾ ಲೋಪ ಸರಿಪಡಿಸಲು ಆದ್ಯತೆ. - ರೈತರ ಆದಾಯ ದುಪ್ಪಟ್ಟು ಮಾಡುವ ಪ್ರಧಾನಿಗಳ ಆಶಯಕ್ಕೆ ಪೂರಕ ಪ್ರಯತ್ನ, ಕಾರ್ಯಕ್ರಮಗಳು. - ಪ್ರವಾಹಪೀಡಿತ ಜಿಲ್ಲೆಗಳಲ್ಲಿನ ಕೃಷಿ ಭೂಮಿಯನ್ನು ಸುಸ್ಥಿತಿಗೆ ತರಲು ಯೋಜನೆ. - ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುವ ವ್ಯವಸ್ಥೆ ನಿರ್ಮಾಣ. - ಅತಿವೃಷ್ಟಿ, ಅನಾವೃಷ್ಟಿಯಿಂದ ಬೆಳೆ ಇಳುವರಿಯಲ್ಲಿಆಗುವ ಕುಸಿತ, ನಷ್ಟ ತಪ್ಪಿಸಲು ಹೊಸ ಚಿಂತನೆ. - ರೈತರ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿಗಳನ್ನು ಕಳಿಸಿ ಮಾರ್ಗದರ್ಶನ ನೀಡುವ ವ್ಯವಸ್ಥೆ ಆಗಬೇಕು. - ಕೃಷಿ ಮತ್ತು ತೋಟಗಾರಿಕೆ ವಿವಿಗಳ ಸಂಶೋಧನೆಗಳ ಫಲ ರೈತರಿಗೆ ಸಿಗುವಂತಾಗಬೇಕು. - 'ಕೃಷಿ ಭಾಗ್ಯ' ಯೋಜನೆಯಲ್ಲಿನ ತಪ್ಪುಗಳನ್ನು ಸರಿಪಡಿಸಿ, ಅಕ್ರಮಗಳಿಗೆ ಅವಕಾಶವಾಗದಂತೆ ಸಮರ್ಪಕ ಅನುಷ್ಠಾನ. - ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಇಸ್ರೇಲ್ ಮಾದರಿ ಕಿರು ನೀರಾವರಿ ಯೋಜನೆ, ಸಿರಿಧಾನ್ಯ ಯೋಜನೆಗಳಿಗೆ ಕಾಯಕಲ್ಪ. ರೈತರ ಬಗ್ಗೆ ಸಹಾನುಭೂತಿ, ಹೊಗಳಿಕೆ ಸಾಕು. ಅನುದಾನ ಮೀಸಲಿಟ್ಟರೆ ಮಾತ್ರಕ್ಕೆ ಸುಧಾರಣೆಯಾಗಲ್ಲ. ರೈತರ ಹೊಲದಲ್ಲಿಉತ್ಪಾದನೆ, ಇಳುವರಿ ಹೆಚ್ಚಿಸಲು ಪ್ರಾಮಾಣಿಕ, ಬದ್ಧತೆಯ ಪ್ರಯತ್ನ ಏನು ಎಂಬುದು ಪ್ರಕಟವಾಗಬೇಕು. - ಡಾ.ಎಸ್.ಬಿಸಲಯ್ಯ, ಮಾಜಿ ಕುಲಪತಿ, ಬೆಂಗಳೂರು ಕೃಷಿ ವಿವಿ
from India & World News in Kannada | VK Polls https://ift.tt/2Ty6M1X