IND vs NZ ಲೈವ್ ಅಪ್‌ಡೇಟ್ಸ್: ಮಯಾಂಕ್, ಪೃಥ್ವಿ ಡೆಬ್ಯು; ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ

ಹ್ಯಾಮಿಲ್ಟನ್: ಪ್ರವಾಸಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೊದಲ ಏಕದಿನ ಪಂದ್ಯ ಇಲ್ಲಿನ ಸೆಡಾನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದಿರುವ ನ್ಯೂಜಿಲೆಂಡ್ ನಾಯಕ ಟಾಮ್ ಲೇಥಮ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ. ಮಯಾಂಕ್, ಪೃಥ್ವಿಗೆ ಡೆಬ್ಯು ಭಾಗ್ಯ ಕರ್ನಾಟಕದ ಮಯಾಂಕ್ ಅಗರ್ವಾಲ್ ಮತ್ತು ಉದಯೋನ್ಮುಖ ಪೃಥ್ವಿ ಶಾ, ಏಕದಿನ ಕ್ರಿಕೆಟ್‌ಗೆ ಡೆಬ್ಯು ಮಾಡುತ್ತಿದ್ದಾರೆ. ಈ ಮೂಲಕ ಒಂದೇ ಪಂದ್ಯದಲ್ಲಿ ಇಬ್ಬರು ಆರಂಭಿಕರು ಪದಾರ್ಪಣೆ ಮಾಡುತ್ತಿರುವ ವಿಶೇಷ ದಾಖಲೆಗೆ ಪಾತ್ರವಾಗಿದ್ದಾರೆ. ಮನೀಶ್ ಔಟ್, ಕೇದಾರ್ ಇನ್ ಈ ನಡುವೆ ಇನ್ ಫಾರ್ಮ್‌ನಲ್ಲಿರುವ ಕರ್ನಾಟಕದ ಮನೀಶ್ ಪಾಂಡೆ ಅವರನ್ನು ಕಡೆಗಣಿಸಲಾಗಿದೆ. ಇವರ ಜೊತೆಗೆ ರಿಷಬ್ ಪಂತ್, ಶಿವಂ ದುಬೆ, ನವದೀಪ್ ಸೈನಿ ಹಾಗೂ ಯುಜ್ವೇಂದ್ರ ಚಹಲ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಈ ನಡುವೆ ಕೇದಾರ್ ಜಾಧವ್ ಆಡುವ ಅವಕಾಶ ಗಿಟ್ಟಿಸಿದ್ದಾರೆ. ಆಡುವ ಬಳಗ ಇಂತಿದೆ: New Zealand (Playing XI): Martin Guptill, Henry Nicholls, Tom Latham(w/c), Tom Blundell, Ross Taylor, James Neesham, Colin de Grandhomme, Mitchell Santner, Tim Southee, Ish Sodhi, Hamish Bennett India (Playing XI): Prithvi Shaw, Mayank Agarwal, Virat Kohli(c), Shreyas Iyer, Lokesh Rahul(w), Kedar Jadhav, Ravindra Jadeja, Shardul Thakur, Mohammed Shami, Kuldeep Yadav, Jasprit Bumrah ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಲ್ಲಿನ ಸೆಡಾನ್‌ ಪಾರ್ಕ್‌ನಲ್ಲಿ ನಡೆಯುತ್ತಿದ್ದು, ಆತ್ಮವಿಶ್ವಾಸದ ಕೊರತೆಯಲ್ಲಿರುವ ನ್ಯೂಜಿಲೆಂಡ್‌ ತಂಡದ ವಿರುದ್ಧ ವಿರಾಟ್‌ ಕೊಹ್ಳಿ ಬಳಗ ತನ್ನ ಅಮೋಘ ಲಹರಿ ಮುಂದುವರಿಸುವ ಇರಾದೆಯಲ್ಲಿದೆ. ಕಳೆದ ವರ್ಷ ನಡೆದ ಏಕದಿನ ವಿಶ್ವ ಕಪ್‌ ಬಳಿಕ ಭಾರತ ತಂಡ ಆಡುತ್ತಿರುವ 3ನೇ ಏಕದಿನ ಸರಣಿ ಇದಾಗಿದೆ. ಇದಕ್ಕೂ ಮುನ್ನ ತವರಿನಾಚೆ ವೆಸ್ಟ್‌ ಇಂಡೀಸ್‌ ತಂಡವನ್ನು ಹಾಗೂ ತವರಿನಲ್ಲಿ ಆಸ್ಪ್ರೇಲಿಯಾ ತಂಡವನ್ನು ಟೀಮ್‌ ಇಂಡಿಯಾ ಮಣಿಸಿದೆ. ಇನ್ನೊಂದೆಡೆ ನ್ಯೂಜಿಲೆಂಡ್‌ ತಂಡ, ಲಾರ್ಡ್ಸ್ನಲ್ಲಿ ನಡೆದ ವಿಶ್ವ ಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ಗೆ ಮಣಿದ ನಂತರ, ಇದೇ ಮೊದಲ ಬಾರಿ ಏಕದಿನ ಸರಣಿ ಆಡುತ್ತಿದೆ. ಅದೇ ವಿಶ್ವ ಕಪ್‌ನ ದ್ವಿತೀಯ ಸೆಮಿಫೈನಲ್‌ನಲ್ಲಿ (ಮ್ಯಾಂಚೆಸ್ಟರ್‌ನಲ್ಲಿ) ಭಾರತ ಮತ್ತು ನ್ಯೂಜಿಲೆಂಡ್‌ ಮುಖಾಮುಖಿಯಾಗಿದ್ದವು. ಅಂದು ಭಾರತ 18 ರನ್‌ಗಳಿಂದ ಪರಾಭವಗೊಂಡಿತ್ತು. ಅದಾದ ಬಳಿಕ ಉಭಯ ತಂಡಗಳು ಪರಸ್ಪರ ಆಡಿಲ್ಲ. ಪ್ರಮುಖ ಆಟಗಾರರು ಅಲಭ್ಯ: ಉಭಯ ತಂಡಗಳಲ್ಲಿ ಮುಂಚೂಣಿ ಆಟಗಾರರು ಗಾಯದಿಂದ ಬಳಲುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ರೋಹಿತ್‌ ಶರ್ಮ ಮೀನಖಂಡದ ಸೆಳೆತದಿಂದಾಗಿ ತವರಿಗೆ ವಾಪಸಾಗುತ್ತಿರುವುದು ಭಾರತಕ್ಕೆ ಭಾರಿ ಹಿನ್ನಡೆಯಾಗಿದೆ. ಶಿಖರ್‌ ಧವನ್‌, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌ ಮತ್ತು ದೀಪಕ್‌ ಚಾಹರ್‌ ಸಹ ಗಾಯಾಳು ಪಟ್ಟಿಯಲ್ಲಿದ್ದಾರೆ. ಇನ್ನೊಂದೆಡೆ, ಕೇನ್‌ ವಿಲಿಯಮ್ಸನ್‌ ಗಾಯದಿಂದ ಚೇತರಿಸಿಕೊಳ್ಳದಿರುವುದು ಕಿವೀಸ್‌ ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಏಕದಿನ ಸರಣಿಗೂ ಮುನ್ನ ನಡೆದ ಟಿ20 ಸರಣಿಯಲ್ಲಿ 5-0 ಅಂತರದ ಕ್ಲೀನ್ ಸ್ವೀಪ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಚಾರಿತ್ರಿಕ ಸಾಧನೆ ಮಾಡಿತ್ತು. ಈ ಪೈಕಿ ಹ್ಯಾಮಿಲ್ಟನ್‌ನಲ್ಲಿ ನಡೆದ ಟೈ ಪಂದ್ಯದಲ್ಲಿ ಸೂಪರ್ ಗೆಲುವನ್ನು ಬಾರಿಸಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37UBd8l

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...