ಕೊರೊನಾ ವೈರಸ್‌: ರಾಜ್ಯದಲ್ಲಿ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳೇನು?

ಬೆಂಗಳೂರು: ಚೀನಾದಲ್ಲಿಮರಣ ಮೃದಂಗ ಸೃಷ್ಟಿಸಿರುವ ನೊವೆಲ್‌ ಕೊರೊನಾ ವೈರಸ್‌(2019 nCov) ಪಕ್ಕದ ಕೇರಳ ರಾಜ್ಯದಲ್ಲೂ ಕಾಣಿಸಿಕೊಂಡಿರುವುದರಿಂದ ರಾಜ್ಯದಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಈ ನಿಟ್ಟಿನಲ್ಲಿಸಾರ್ವಜನಿಕರು ಕೂಡಾ ಜಾಗೃತರಾಗಿರುವಂತೆ ಸರಕಾರ ಸೂಚಿಸಿದ್ದು, ಯಾವುದೇ ಗಂಭೀರ ಲಕ್ಷಣ ಕಂಡುಬಂದರೆ ತಕ್ಷಣ ತಪಾಸಣೆಗೆ ಒಳಗಾಗುವಂತೆ ವಿನಂತಿಸಿದೆ. ಗಾಳಿಯಲ್ಲಿಹರಡುವ ಈ ವೈರಾಣುವಿನ ದಾಳಿಗೆ ಒಳಗಾಗಿ ಚೀನಾದಲ್ಲಿಇದುವರೆಗೆ 420ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಾಸರಗೋಡು ಸೇರಿದಂತೆ ಕೇರಳದಲ್ಲಿ ಮೂರು ಪ್ರಕರಣಗಳು ದೃಢಪಟ್ಟಿರುವುದರಿಂದ ಅದರ ಗಡಿಯಲ್ಲಿ ಬರುವ ರಾಜ್ಯದ ಜಿಲ್ಲೆಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಚೀನಾ ಸೇರಿದಂತೆ ವಿದೇಶಗಳಿಂದ ಬರುತ್ತಿರುವವರ ಮೇಲೆ ವಿಮಾನ ನಿಲ್ದಾಣಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ.
  1. ಜಿಲ್ಲಾಆಸ್ಪತ್ರೆಗಳಲ್ಲಿ ಪ್ರತ್ಯೇಕ ಚಿಕಿತ್ಸಾ ವಾರ್ಡ್‌, ದಿನದ 24 ಗಂಟೆ ಚಿಕಿತ್ಸೆಗೆ ಸಕಲ ಕ್ರಮ
  2. ಕೆಲವು ತಾಲೂಕು ಕೇಂದ್ರಗಳಲ್ಲೂಐದು ಬೆಡ್‌ಗಳ ಐಸೋಲೇಷನ್‌ ಸೆಂಟರ್‌ ಸಜ್ಜು
  3. ವಿಮಾನ, ರೈಲು, ಬಸ್‌ ನಿಲ್ದಾಣ, ಶಾಲೆ, ಕಾಲೇಜುಗಳಲ್ಲಿ ವೈರಸ್‌ ಬಗ್ಗೆ ಮಾಹಿತಿ
  4. ಚೀನಾ ದೇಶದಿಂದ ಮರಳಿದವರು, ಕೇರಳದಿಂದ ಬಂದವರು ಅನಾರೋಗ್ಯಕ್ಕೆ ಒಳಗಾದರೆ ತುರ್ತು ಪರೀಕ್ಷೆಗೆ ಸೂಚನೆ
  5. ಕಾರವಾರ ಬಂದರು ಮತ್ತು ಮುಂಡಗೋಡದ ಟಿಬೇಟಿಯನ್‌ ಕ್ಯಾಂಪ್‌ಗೆ ವಿದೇಶಿಗರು ಬರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ
  6. ಚಿತ್ರದುರ್ಗದಲ್ಲಿ ಪ್ರವಾಸಿಗರ ಸ್ಕ್ರೀನಿಂಗ್‌ಗೆ ಕ್ರಮ, ಮೈಸೂರಿನಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪೋಸ್ಟರ್‌ ಮಾಹಿತಿ
  7. ಹಂಪಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿತಪಾಸಣೆ ನಡೆಯುತ್ತಿದೆ.
  8. ವಿದೇಶದಿಂದ ಸಾಕಷ್ಟು ಜನ ಬರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ನಡೆಸಿಯೇ ಹೊರಕ್ಕೆ
  9. ಚಾಮರಾಜ ನಗರದ ಬಂಡೀಪುರ ಅರಣ್ಯದಲ್ಲಿಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ
  10. ವಿದೇಶಿ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಓಡಾಡುತ್ತಿರುವ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ
ರೋಗ ಲಕ್ಷಣಗಳು: ಜ್ವರ, ತಲೆನೋವು, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ, ನ್ಯುಮೋನಿಯಾ, ಭೇದಿ ಚಿಕಿತ್ಸೆ: ನಿಖರ ಚಿಕಿತ್ಸೆ ಇರುವುದಿಲ್ಲ. ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಲಸಿಕೆ ಲಭ್ಯವಿಲ್ಲ. ಸಲಹೆ: ಸಾರ್ವಜನಿಕರು ಯಾವುದೇ ಮುಜುಗರಕ್ಕೆ ಒಳಗಾಗದೆ ಸ್ಕ್ರೀನಿಂಗ್‌ ಮತ್ತು ತಪಾಸಣೆಗೆ ಒಳಗಾಗುವುದು ಉತ್ತಮ ಮುಂಜಾಗ್ರತಾ ಕ್ರಮಗಳು
  • ಸೋಂಕು ಪೀಡಿತರಿಂದ ದೂರವಿರಿ
  • ಶಂಕಿತರನ್ನು ಪ್ರತ್ಯೇಕವಾಗಿಡುವುದು
  • ಮೂರು ಪದರದ ಮುಖಗವಸು ಬಳಸಿ
  • ಆಗಾಗ್ಗೆ ಸಾಬೂನಿನಿಂದ ಕೈ ತೊಳೆದುಕೊಳ್ಳಿ
  • ಕೆಮ್ಮು, ಸೀನುವಾಗ ಕೈವಸ್ತ್ರ ಉಪಯೋಗಿಸಿ
  • ಸಾರ್ವಜನಿಕ ಸ್ಥಳಗಳಲ್ಲಿಉಗುಳಬಾರದು
  • ಉಸಿರಾಟದ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಕಾಣಿ
  • ಮಾಂಸ, ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು
  • ಕಾಡು ಪ್ರಾಣಿ ಅಥವಾ ಸಾಕು ಪ್ರಾಣಿ ಮುಟ್ಟಬಾರದು


from India & World News in Kannada | VK Polls https://ift.tt/2OuHr74

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...