ವಿಂಡೀಸ್‌ ಕ್ರಿಕೆಟಿಗನಿಗೆ ಪೌರತ್ವದ ಜೊತೆಗೆ ನಾಗರೀಕ ಪ್ರಶಸ್ತಿಯನ್ನೂ ನೀಡಿದ ಪಾಕಿಸ್ತಾನ!

ಹೊಸದಿಲ್ಲಿ: ಟಿ20 ಟೂರ್ನಿಯಲ್ಲಿ ಪೇಶಾವರ್‌ ಝಾಲ್ಮಿ ತಂಡವನ್ನು ಮುನ್ನಡೆಸುತ್ತಿರುವ ವೆಸ್ಟ್‌ ಇಂಡೀಸ್‌ನ ಆಲ್‌ರೌಂಡರ್‌ , ಇದೀಗ ಪಾಕಿಸ್ತಾನವನ್ನು ತಮ್ಮ ಎರಡನೇ ಮನೆಯನ್ನಾಗಿಸಿಕೊಂಡಿದ್ದಾರೆ. ಪಿಎಸ್‌ಎಲ್‌ ಆರಂಭದಿಂದಲೂ ಟೂರ್ನಿಯ ಭಾಗವಾಗಿರುವ 36 ವರ್ಷದ ಕ್ರಿಕೆಟರ್‌, ಪಾಕಿಸ್ತಾನ ಕ್ರಿಕೆಟ್‌ ಆಡಲು ಈಗ ಸುರಕ್ಷಿತ ತಾಣ ಎಂದು ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಪಾಕ್‌ ಪ್ರವಾಸ ಕೈಗೊಂಡ ವಿಶ್ವ ಇಲೆವೆನ್‌ ತಂಡದಲ್ಲೂ ಸಾಮಿ ಮುಂದಿದ್ದರು. ಇದೀಗ, ಪಾಕ್‌ನಲ್ಲಿ ಕ್ರಿಕೆಟ್ ಮರುಜೀವ ಪಡೆಯುವಂತೆ ಮಾಡುವ ಕಡೆಗೆ ಗಣನೀಯ ಕೊಡುಗೆ ನೀಡಿದ ಕೆರಿಬಿಯನ್‌ ಆಟಗಾರನಿಗೆ ಪಾಕಿಸ್ತಾನ ಸರಕಾರ ಅಲ್ಲಿನ ಗೌರವ ಪೌರತ್ವ ನೀಡುವ ಜೊತೆಗೆ ಅಲ್ಲಿನ ಅತ್ಯುನ್ನತ ನಾಗರೀಯ ಪ್ರಶಸ್ತಿಯನ್ನೂ ಕೊಟ್ಟು ಗೌರವಿಸಿದೆ. ಒಬ್ಬ ವಿದೇಶಿ ಆಟಗಾರನಾಗಿ ಟೂರ್ನಿಯಲ್ಲಿ ಪಾಲ್ಗೊಂಡು ಈಗ ನಮ್ಮವರಾಗಿ ಹೊರಹೊಮ್ಮಿದ್ದಾರೆ. ಆದ ಕಾರಣ ಇಲ್ಲಿನ ಪೌರತ್ವ ಪಡೆಯಲು ಅವರು ಅರ್ಜಿ ಸಲ್ಲಿಸಿದ್ದರು ಎಂದು ಪೇಶಾವರ್‌ ಝಾಲ್ಮಿ ತಂಡದ ಮಾಲೀಕ ಜಾವೆದ್‌ ಅಫ್ರಿದಿ ಹೇಳಿದ್ದರು. "ಡರೆನ್‌ ಸಾಮಿ ಅವರಿಗೆ ಗೌರವ ಪಾಕಿಸ್ತಾನ ಪೌರತ್ವ ನೀಡುವಂತೆ ಮನವಿ ಮಾಡಿದ್ದೇವೆ. ಅವರ ಅರ್ಜಿ ರಾಷ್ಟ್ರಪತಿಗಳ ಟೇಬಲ್‌ ಮೇಲಿದೆ," ಎಂದಿದ್ದರು. ಭಾವನಾತ್ಮಕ ಮಾತುಗಳನ್ನಾಡಿದ ಸಾಮಿ ಟೂರ್ನಿಯ ಬಳಿಕ ಮಾರ್ಚ್‌ 23ರಂದು ಪಾಕಿಸ್ತಾನದ ಅತ್ಯುತ್ತಮ ನಾಗರೀಕ ಪ್ರಶಸ್ತಿ ಆಗಿರುವ 'ನಿಶಾನ್‌-ಎ-ಹೈದರ್‌' ನೀಡಿ ಡರೆನ್‌ ಸಾಮಿಗೆ ಗೌರವಿಸಲು ನಿರ್ಧರಿಸಲಾಗಿದೆ. ಪಾಕ್ ರಾಷ್ಟ್ರಪತಿ ಆರಿಫ್‌ ಅಲ್ವಿ ಈ ಪ್ರಶಸ್ತಿ ನೀಡಲಿದ್ದಾರೆ. ಈ ಬಗ್ಗೆ ಸಾಮಿ ತಮ್ಮ ಭಾವನೆಯನ್ನು ಟ್ವಿಟರ್‌ ಮೂಲಕ ಹಂಚಿಕೊಂಡಿದ್ದಾರೆ. "ನಾಗರೀಕ ಪ್ರಶಸ್ತಿ ಸ್ವೀಕರಿಸುತ್ತಿರುವುದು ನಿಜಕ್ಕೂ ಗೌರವದ ಸಂಗತಿ. 2017ರಲ್ಲಿ ಒಂದೊಳ್ಳೆ ಕೆಲಸದ ಕಡೆಗೆ ಸಣ್ಣ ಹೆಜ್ಜೆಯನ್ನಿಟ್ಟಿದ್ದೆವು, ಅದು ನಮ್ಮನ್ನು ಈಗ ಇಲ್ಲಿಗೆ ಕರೆತಂದಿದೆ. ಈ ಯಶಸ್ಸಿನ ಹಿಂದೆ ಎಲ್ಲಾ ವಿದೇಶಿ ಕ್ರಿಕೆಟಿಗರ ಕೊಡುಗೆ ಇದೆ. ನಮ್ಮ ಮೇಲೆ ಇಷ್ಟು ಪ್ರೀತಿ ತೋರಿಸಿದ ಪಾಕಿಸ್ತಾನಕ್ಕೆ ಧನ್ಯವಾದಗಳು. ನೀವು ಮನೆಯಂಗಣದಲ್ಲಿ ಕ್ರಿಕೆಟ್‌ ಆನಂದಿಸುವಂತೆ ಮಾಡಬೇಕು ಎಂಬುದಷ್ಟೇ ನಮ್ಮ ಉದ್ದೇಶ," ಎಂದು ಸಾಮಿ ಭಾನುವಾರ ಟ್ವೀಟ್‌ ಮಾಡಿದ್ದಾರೆ. ವೆಸ್ಟ್ ಇಂಡೀಸ್‌ ತಂಡದ ಸ್ಟಾರ್‌ ಕ್ರಿಕೆಟರ್‌ಗಳಲ್ಲಿ ಒಬ್ಬರಾದ ಸಾಮಿ, 2012 ಮತ್ತು 2016ರಲ್ಲಿ ವಿಂಡೀಸ್‌ ಪಡೆಗೆ ತಮ್ಮ ನಾಯಕತ್ವದಲ್ಲಿ ಎರಡು ಟಿ20 ವಿಶ್ವಕಪ್‌ಗಳನ್ನು ಗೆದ್ದುಕೊಟ್ಟಿದ್ದಾರೆ. ಕೆರಿಬಿಯನ್‌ ತಂಡದ ಪರ ಅವರು 38 ಟೆಸ್ಟ್‌, 126 ಒಡಿಐ ಹಾಗೂ 68 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನೂ ಆಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2HPJrTI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...