(ಉತ್ತರ ಪ್ರದೇಶ ): ನಗರದ ಜಾಮೀಯಾ ಮಸೀದಿ ಬಳಿ ನಡೆಯುತ್ತಿದ್ದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆಗೆ ಕಾರಣವಾಗಿದೆ. ಕೆಲ ಪ್ರತಿಭಟನಾಕಾರರು ಪೊಲೀಸರ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದರಿಂದ ಗಲಾಟೆ ಶುರುವಾಗಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಟಿಯರ್ ಗ್ಯಾಸ್ ಹಾರಿಸಿದ್ದಾರೆ. ಘರ್ಷಣೆಯಲ್ಲಿ ಒಂದು ಪೊಲೀಸ್ ವಾಹನ ಜಖಂ ಆಗಿದ್ದು, ಕೆಲ ಮಂದಿ ಪೊಲೀಸ್ ಸಿಬ್ಬಂದಿ ಗಾಯಾಳುಗಳಾಗಿದ್ದು, ಹಲವು ಸಾರ್ವಜನಿಕರಿಗೂ ಗಾಯಗಳಾಗಿವೆ. ಸ್ಥಳದಲ್ಲಿ ರ‍್ಯಾಪಿಡ್ ಆಕ್ಷನ್ ಫೋರ್ಸ್ ಠಿಕಾಣಿ ಹೂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ನಡೆದ ಸ್ಥಳ ಅಲಿಘರ್‌ನ ಉಪರ್‌ಕೋಟ್ ಕೊಟ್ವಾಲಿ ಪ್ರದೇಶದಿಂದ ಎರಡು ಕಿ.ಮೀ. ಅಂತರದಲ್ಲಿದೆ. ಪೊಲೀಸರು ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಮರುದಿನವೇ ಘರ್ಷಣೆಯಾಗಿದೆ. ಅಲಿಘರ್‌ನಲ್ಲಿ ಶುಕ್ರವಾರ ಮಳೆ ಸುರಿದಿದ್ದರಿಂದ ವಾತಾವರಣ ದೃಷ್ಟಿಯಿಂದ ಪ್ರತಿಭಟನಾ ಟೆಂಟ್‌ಗಳನ್ನು ಬಿಟ್ಟ ಹೋಗುವಂತೆ ಪ್ರತಿಭಟನಾಕಾರರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು. ಇನ್ನು, ಘರ್ಷಣೆಯ ಬಗ್ಗೆ ಅಲಿಘರ್ ಜಿಲ್ಲಾ ಮ್ಯಾಜಿಸ್ಟ್ರೆಟ್ ಚಂದ್ರಭೂಷಣ್ ಸಿಂಗ್ ಮಾಹಿತಿ ನೀಡಿದ್ದು, ಜಾಮಿಯಾ ಮಸೀದಿ ಬಳಿ ಪ್ರತಿಭಟನಾಕಾರರು ಪೊಲೀಸ್ ವಾಹನದ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದು, ಅವರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದರು. ಘಟನೆಯ ಹಿಂದೆ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಕೆಲ ಮಹಿಳಾ ವಿದ್ಯಾರ್ಥಿಗಳ ಕೈವಾಡ ಇದೆ. ಅವರನ್ನು ಪತ್ತೆಹಚ್ಚುವ ಕಾರ್ಯ ಮಾಡುತ್ತಿದ್ದೇವೆ. ಘರ್ಷಣೆಯಲ್ಲಾದ ನಷ್ಟವನ್ನು ಅವರಿಂದಲೇ ಭರಿಸುತ್ತೇವೆ ಎಂದು ಚಂದ್ರಭೂಷಣ್ ಸಿಂಗ್ ಹೇಳಿದರು.
from India & World News in Kannada | VK Polls https://ift.tt/38S30a7