ಲಖನೌ (ಉತ್ತರ ಪ್ರದೇಶ): ಸುಮಾರು 4 ಸಾವಿರ ವರ್ಷಗಳ ಹಿಂದೆ ಇದ್ದಂಥಹ ವೈಭವೋಪೇತ ಕರಕುಶಲ ತಯಾರಿಕೆ ಮತ್ತು ಮಾರಾಟಕ್ಕೆ ಹೆಸರುವಾಸಿಯಾಗಿದ್ದ ಗ್ರಾಮವೊಂದರ ಅವಶೇಷಗಳನ್ನು ಮಾಡಿ ಪತ್ತೆ ಹಚ್ಚಲಾಗಿದೆ. ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು)ಸಂಶೋಧಕರ ತಂಡವೊಂದು ವಾರಾಣಸಿಯಿಂದ 13 ಕಿ.ಮೀ ದೂರದ ಬಭನಿಯಾವ್ ಗ್ರಾಮದಲ್ಲಿ ಸಮೀಕ್ಷೆ ನಡೆಸಿ ಪ್ರಾಥಮಿಕ ಹಂತದ ಉತ್ಖನನ ಕಾರ್ಯದಲ್ಲಿ ಈ ಪತ್ತೆ ಮಾಡಿದೆ. ವಾರಾಣಸಿಯ ಸುತ್ತಲಿನ ಪ್ರದೇಶಗಳ ಬಗ್ಗೆ ಹಲವು ಗ್ರಂಥಗಳಲ್ಲಿ ಉಲ್ಲೇಖಿಸಿಲಾಗಿರುವ ಗ್ರಾಮವಿದು. ಸದ್ಯಕ್ಕೆ ಮಂದಿರವೊಂದರ ಅವಶೇಷಗಳು ಸಿಕ್ಕಿವೆ. ಇದು 5ನೇ ಶತಮಾನದಿಂದ 8ನೇ ಶತಮಾನದ ನಡುವಿನದ್ದು. ಇಲ್ಲಿ ಮಡಕೆ ಮಾಡುವ ನುರಿತ ಕರಕುಶಲ ಕಾರ್ಮಿಕರು ಇದ್ದರು. ಕೆಲವು ಮಡಕೆಗಳು ಕೂಡ ಸಿಕ್ಕಿವೆ. ಅದರೊಂದಿಗೆ 2000 ವರ್ಷದಷ್ಟು ಹಳೆಯ ಗೋಡೆಯೊಂದು ಕೂಡ ಸಿಕ್ಕಿದೆ ಎಂದು ಬಿಎಚ್‌ಯು ಪುರಾತನ ಭಾರತೀಯ ಇತಿಹಾಸ, ಸಂಶ್ಕೃತಿ ಮತ್ತು ಪುರಾತತ್ವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎ.ಕೆ. ದುಬೆ ತಿಳಿಸಿದ್ದಾರೆ. ಸಾರಾನಾಥ್, ತಿಲಂಪುರ್, ರಾಮ್‌ನಗರದಲ್ಲಿ ಇದೇ ಮಾದರಿ ಕರಕುಶಲ ತಯಾರಿಕೆ ಗ್ರಾಮಗಳ ಅವಶೇಷಗಳು ಈ ಹಿಂದೆ ಸಿಕ್ಕಿವೆ. ವಾರಾಣಸಿ-ಸಾರಾನಾಥ್ ಪ್ರಾಂತ್ಯಕ್ಕೆ ಇಲ್ಲಿಂದ ಹಲವು ವಸ್ತುಗಳ ಸಾಗಾಟ ನಡೆಯುತ್ತಿದ್ದಿರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
from India & World News in Kannada | VK Polls https://ift.tt/2uruNz6