ಟೀಮ್‌ ಇಂಡಿಯಾದ ಆಪತ್ಬಾಂಧವ ಇವನೇ ಎಂದ ಕಿವೀಸ್‌ ದಿಗ್ಗಜ!

ವೆಲ್ಲಿಂಗ್ಟನ್: ಆತಿಥೇಯ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದ ಮೂರನೇ ದಿನದಾಟದಲ್ಲಿ ಚಹಾ ವಿರಾಮದ ನಂತರ ಮಯಾಂಕ್‌ ಅಗರ್ವಾಲ್ ಮತ್ತು ವಿರಾಟ್‌ ಕೊಹ್ಲಿ ವಿಕೆಟ್‌ ಕಳೆದುಕೊಂಡ ಭಾರತ ತಂಡ ಸೋಲಿನ ದವಡೆಗೆ ಸಿಲುಕಿದೆ. ಪಂದ್ಯದಲ್ಲಿ ಸೋಲು ತಪ್ಪಿಸಿಕೊಳ್ಳಬೇಕಾದರೆ ಭಾರತ ತಂಡ ತನ್ನ ಉಳಿದ 6 ವಿಕೆಟ್‌ಗಳಿಂದ ನಾಲ್ಕನೇ ದಿನದಾಟದಲ್ಲಿ ಕನಿಷ್ಠ 200+ ರನ್‌ಗಳನ್ನು ಗಳಿಸಲೇ ಬೇಕಿದೆ. ಅದೃಷ್ಟವಶಾತ್‌ ಟೀಮ್‌ ಇಂಡಿಯಾದ ಭರವಸೆ ಎಂಬಂತೆ ಅನುಭವಿಗಳಾದ (25*) ಮತ್ತು ಹನುಮ ವಿಹಾರಿ (15*) ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಕ್ರೀಸ್‌ಗೆ ಬಂದ ಕೆಲವೇ ಹೊತ್ತಿನಲ್ಲಿ ಹೆಲ್ಮೆಟ್‌ಗೆ ಬೌನ್ಸರ್‌ ಪೆಟ್ಟು ತಿಂದಿದ್ದ ರಹಾನೆ, ಬಳಿಕ ಹೆಚ್ಚು ಏಕಾಗ್ರತೆಯೊಂದಿಗೆ ಬ್ಯಾಟ್‌ಮಾಡಿದರು. ಅಷ್ಟೇ ಅಲ್ಲದೆ 5ನೇ ವಿಕೆಟ್‌ಗೆ ಹನುಮ ವಿಹಾರಿ ಜೊತೆಗೂಡಿ 118 ಎಸೆತಗಳಲ್ಲಿ 31 ರನ್‌ಗಳ ಸೊಗಸಾದ ಜೊತೆಯಾಟವಾಡಿದರು. ಇದರೊಂದಿಗೆ ಭಾನುವಾರದ ಆಟದ ಅಂತ್ಯಕ್ಕೆ ಭಾರತ 65 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ಗೆ 144 ರನ್‌ ಗಳಿಸಿದೆ. ಆದರೂ ಇನ್ನೂ 39 ರನ್‌ಗಳ ಅಂತರದ ಹಿನ್ನಡೆಯಲ್ಲಿದೆ. ಈ ವೇಳೆ ಪಂದ್ಯದಲ್ಲಿ ಭಾರತ ತಂಡವನ್ನು ಅಪಾಯದಿಂದ ಪಾರುಮಾಡಬಲ್ಲ ಆಪತ್ಬಾಂಧವ ಬ್ಯಾಟ್ಸ್‌ಮನ್‌ ಯಾರಾದರು ಇದ್ದರೆ ಅದು ಅಜಿಂಕ್ಯ ರಹಾನೆ ಎಂದು ಕಿವೀಸ್‌ನ ಮಾಜಿ ಆಲ್‌ರೌಂಡರ್‌ ಹೇಳಿದ್ದಾರೆ. ಅಷ್ಟೇ ಅಲ್ಲದೆ ರಹಾನೆ ಬ್ಯಾಟಿಂಗ್‌ ತಂತ್ರಗಾರಿಕೆಯನ್ನು ನ್ಯೂಜಿಲೆಂಡ್‌ನ ನಾಯಕ ಕೇನ್‌ ವಿಲಿಯಮ್ಸನ್‌ಗೆ ಹೋಲಿಕೆ ಮಾಡಿದ್ದಾರೆ. "ರಹಾನೆ ಕೇಂದ್ರ ಬಿಂದುವಾಗಲಿದ್ದಾರೆ. ಏಕೆಂದರೆ ಕ್ರೀಸ್‌ನ ಮತ್ತೊಂದು ಬದಿಯಲ್ಲಿ ಜೊತೆಗಾರನನ್ನು ಕಳೆದುಕೊಳ್ಳಲು ಅವರು ಬಯಸುವುದಿಲ್ಲ. ಅವರಲ್ಲಿ ಕೇನ್‌ ವಿಲಿಯಮ್ಸನ್ ರೀತಿಯ ಬ್ಯಾಟಿಂಗ್‌ ತಂತ್ರಗಾರಿಕೆ ಇದೆ ಎಂಬುದನ್ನು ನ್ಯೂಜಿಲೆಂಡ್‌ ತಿಳಿದಿದೆ. ಕಾದು ಆಡುವ ತಂತ್ರದೊಂದಿಗೆ ಚೆಂಡನ್ನು ಅತ್ಯುತ್ತಮವಾಗಿ ಕಟ್‌ ಮಾಡಬಲ್ಲರು. ಹೀಗಾಗಿ ನಾಲ್ಕನೇ ದಿನದಾಟದಲ್ಲಿ ಭಾರತ ತಂಡಕ್ಕೆ ಆಪತ್ಬಾಂಧವನಾದರೆ ಅದು ರಹಾನೆ ಮಾತ್ರ. ನ್ಯೂಜಿಲೆಂಡ್‌ಗೂ ಇದು ತಿಳಿದಿದೆ," ಎಂದು ಸ್ಟಾರ್‌ ಸ್ಪೋರ್ಟ್ಸ್‌ ಕಾರ್ಯಕ್ರಮದಲ್ಲಿ ಸ್ಟೈರಿಸ್‌ ವಿವರಿಸಿದ್ದಾರೆ. ಸಂಕ್ಷಿಪ್ತ ಸ್ಕೋರ್‌ಭಾರತ: ಮೊದಲ ಇನಿಂಗ್ಸ್‌ 165/10 ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್‌ 100.2 ಓವರ್‌ಗಳಲ್ಲಿ 348/10 (ಕೇನ್‌ ವಿಲಿಯಮ್ಸನ್‌ 89, ರಾಸ್‌ ಟೇಲರ್‌ 44, ಕಾಲಿನ್‌ ಡಿ'ಗ್ರ್ಯಾಂಡ್‌ ಹೋಮ್‌ 43, ಕೈಲ್‌ ಜೇಮಿಸನ್‌ 44, ಟ್ರೆಂಟ್‌ ಬೌಲ್ಟ್‌ 38; ಇಶಾಂತ್‌ ಶರ್ಮಾ 68ಕ್ಕೆ 5, ಆರ್‌. ಅಶ್ವಿನ್‌ 99ಕ್ಕೆ 3). ಭಾರತ: 2ನೇ ಇನಿಂಗ್ಸ್‌ 65 ಓವರ್‌ಗಳಲ್ಲಿ 144/4 (ಮಯಾಂಕ್‌ ಅಗರ್ವಾಲ್‌ 58, ಅಜಿಂಕ್ಯ ರಹಾನೆ 25*, ಹನುಮ ವಿಹಾರಿ 15*; ಟ್ರೆಂಟ್‌ ಬೌಲ್ಟ್‌ 27ಕ್ಕೆ 3, ಟಿಮ್‌ ಸೌಥೀ 41ಕ್ಕೆ 1).


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2T6LlER

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...