ಗುಜರಾತ್‌ ನೆಲಕ್ಕೆ ಬಂದಿಳಿದ ಟ್ರಂಪ್‌, ಶಿಷ್ಟಾಚಾರ ಬದಿಗೊತ್ತಿ ಸ್ವಾಗತಿಸಿದ ಮೋದಿ

ಅಹಮದಾಬಾದ್: ಭಾರತಕ್ಕೆ ಅಮೆರಿಕಾದ ಅಧ್ಯಕ್ಷ ಆಗಮಿಸಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ಟ್ರಂಪ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಶಿಷ್ಟಾಚಾರವನ್ನು ಬದಿಗೊತ್ತಿ ಸ್ವಾಗತಿಸಿದರು. 11.40 ಕ್ಕೆ ಏರ್‌ಪೋರ್ಟ್‌ ತಲುಪಿದ ಟ್ರಂಪ್‌ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗವಾಗಿ ಮೊಟೆರಾ ಕ್ರೀಡಾಂಗಣಕ್ಕೆ ತೆರಳಲಿದ್ದಾರೆ. ರಸ್ತೆಯುದ್ದಕ್ಕೂ ಸಾವಿರಾರು ಜನರು ಟ್ರಂಪ್‌ಗೆ ಸ್ವಾಗತ ಕೋರಲಿದ್ದಾರೆ. ಟ್ರಂಪ್ ಭಾರತ ಭೇಟಿ ಟ್ವಿಟ್ಟರ್‌ನಲ್ಲೂ ಸದ್ದು ಮಾಡುತ್ತಿದ್ದು ನಮಸ್ತೆ ಟ್ರಂಪ್ ಹ್ಯಾಶ್ ಟ್ಯಾಗ್‌ ಕ್ರಿಯೇಟ್‌ ಆಗಿದೆ. ಟ್ವಿಟ್ಟರ್‌ನಲ್ಲಿ ನಮಸ್ತೆ ಟ್ರಂಪ್ ನಂಬರ್‌ ಒನ್ ಟ್ರೆಂಡ್‌ ಆಗಿ ಗಮನಸೆಳೆಯುತ್ತಿದೆ. ಟ್ರಂಪ್‌ ಸ್ವಾಗತಕ್ಕೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು, ಮೊಟೆರಾ ಕ್ರೀಡಾಂಗಣದಲ್ಲಿ ಸಾವಿರಾರು ಜನರು ಸೇರಿದ್ದಾರೆ. ಟ್ರಂಪ್ ಆಗಮನದ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಕೈಗೊಳ್ಳಲಾಗಿದೆ. ಅಹಮದಾಬಾದ್‌ ನಗರದಲ್ಲಿ ಖಾಕಿ ಕೋಟೆಯನ್ನೇ ಸೃಷ್ಟಿ ಮಾಡಲಾಗಿದೆ. ಟ್ರಂಪ್‌ನ್ನು ಅಪ್ಪಿಕೊಂಡು ಸ್ವಾಗತಿಸಿದ ಮೋದಿ ಭಾರತಕ್ಕೆ ಬಂದಿಳಿದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಪ್ಪಿಕೊಂಡು ಸ್ವಾಗತಿಸಿದರು. ಅಹಮದಾಬಾದ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಮೋದಿ ಟ್ರಂಪ್‌ ಅವರಿಗೆ ಅದ್ಧೂರಿ ಸ್ವಾಗತವನ್ನು ಕೋರಿ ಭರಮಾಡಿಕೊಂಡರು. ಇದೀಗ ಟ್ರಂಪ್ ಹಾಗೂ ಮೋದಿ ಗುಜರಾತಿನ ಸಬರಮತಿ ಆಶ್ರಮದತ್ತ ತೆರಳಿದ್ದಾರೆ.


from India & World News in Kannada | VK Polls https://ift.tt/37XncFX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...