ಟ್ರಂಪ್‌ಗಾಗಿ ರೆಡಿಯಾಗಿದೆ ಪಕ್ಕಾ ಗುಜರಾತಿ ಶೈಲಿ ವೆಜ್‌ ಫುಡ್‌..! ಇವರೇ ನೋಡಿ ಬಾಣಸಿಗರು..!

ಅಹಮದಾಬಾದ್‌: ಭಾರತಕ್ಕೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೊದಲ ಮಹಿಳೆ ಮೆಲಾನಿಯಾ ಟ್ರಂಪ್‌ಗೆ ಪಕ್ಕಾ ದೇಶಿ ಶೈಲಿಯ ಗುಜರಾತಿ ಕೈ ಬೀಸಿ ಕರೆಯುತ್ತಿದೆ. ಫಾರ್ಚೂನ್ ಲ್ಯಾಂಡ್ ಮಾರ್ಕ್ ಹೊಟೇಲ್ ಬಾಣಸಿಗ ಸುರೇಶ್ ಖನ್ನಾ ಟ್ರಂಪ್‌ ಮತ್ತು ಮಿಲಾನಿಯಾ ಟ್ರಂಪ್‌ಗಾಗಿ ಆಹಾರವನ್ನು ಸಿದ್ಧಪಡಿಸಿದ್ದು, ಊಟದ ಮೆನು ರಿವೀಲ್‌ ಆಗಿದೆ. ಪ್ರಾದೇಶಿಕತೆಯ ಅನುಭವ ನೀಡುವುದಕ್ಕಾಗಿ ಸಂಪೂರ್ಣ ಗುಜರಾತಿ ಶೈಲಿಯ ಅಡುಗೆಯನ್ನು ತಯಾರಿಸಲಾಗುತ್ತಿದೆ. ಕೇವಲ ಸಸ್ಯಹಾರವನ್ನು ಮಾತ್ರ ರೆಡಿ ಮಾಡುತ್ತಿದ್ದೇವೆ ಖಮಾನ್, ಕೋಸುಗಡ್ಡೆ ಸಮೋಸಾ, ಜೇನು ಅದ್ದಿದ ಕುಕೀಸ್, ಬಹು-ಧಾನ್ಯಗಳ ರೋಟಿ ಮತ್ತು ಬೆಳೆಯಿಂದ ಮಾಡಿದ ಸ್ನ್ಯಾಕ್ಸ್ ತಯಾರು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ವಿಶೇಷವಾದ ಖಮಾನ್‌ ತಿಂಡಿಯನ್ನು ಯುಎಸ್‌ ಅಧ್ಯಕ್ಷ ಟ್ರಂಪ್‌ ಮತ್ತು ಮಿಲಾನಿಯಾ ಟ್ರಂಪ್‌ಗಾಗಿಯೆ ಸಿದ್ಧಪಡಿಸಲಾಗಿದೆ. ಅವರು ಅದನ್ನು ಬಹಳ ಇಷ್ಟಪಡುತ್ತಾರೆ ಎಂದಿದ್ದು, ಆಹಾರದ ಮೆನು ಕೇವಲ ಸಸ್ಯಹಾರ ಒಳಗೊಂಡಿದೆ. ಗುಜರಾತಿ ಶೈಲಿಯಲ್ಲಿ ತಯಾರಾಗಲಿದೆ. ಆಹಾರವನ್ನು ಮೊದಲು ಫುಡ್‌ ಇನ್ಸಪೆಕ್ಟರ್‌ಗಳು ಪರೀಕ್ಷಿಸಲಿದ್ದು, ನಂತರ ಅತಿಥಿಗಳಿಗೆ ಬಡಿಸಲಾಗುತ್ತದೆ ಎಂದು ಬಾಣಸಿಗ ಸುರೇಶ್‌ ಖನ್ನಾ ಹೇಳಿದ್ದಾರೆ. ಆಹಾರ ತಯಾರಿಕೆಗಾಗಿ ಪ್ರಸಿದ್ಧಿಯಾಗಿರುವ ಸುರೇಶ್ ಖನ್ನಾ ಈ ಹಿಂದೆ ಭಾರತಕ್ಕೆ ಭೇಟಿ ನೀಡಿರುವ ಅನೇಕ ವಿದೇಶಿ ಗಣ್ಯರಿಗೆ ಆಹಾರ ಸಿದ್ದಪಡಿಸಿದ್ದರು. ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಆಂಧ್ರ ಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಶಿಲ್ಪಾಶೆಟ್ಟಿ ಸೇರಿ ಅನೇಕ ಮಂದಿ ಸುರೇಶ್ ಖನ್ನಾ ಕೈ ರುಚಿ ಸವಿದಿದ್ದಾರೆ. 1990ರಲ್ಲಿ ಸುರೇಶ್‌ ಖನ್ನಾ ರಾಷ್ಟ್ರೀಯ ಪಾಕಶಾಲೆಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಹಾಗೂ ನರೇಂದ್ರ ಮೋದಿ ಅವರಿಗೆ ಆಹಾರ ಸಿದ್ಧಪಡಿಸುವುದು ಬಹಳ ಸಂತೋಷದಾಯಕ ವಿಚಾರವಾಗಿದೆ. ಸರ್ಕಾರದಿಂದ ಸೂಚಿಸಲಾಗಿರುವ ಮೆನು ಸಿದ್ಧಪಡಿಸುವಲ್ಲಿ ನಮ್ಮ ತಂಡ ನಿರತವಾಗಿದೆ ಎಂದು ಸುರೇಶ್‌ ಖನ್ನಾ ಸಂತಸ ವ್ಯಕ್ತಪಡಿಸಿದರು.


from India & World News in Kannada | VK Polls https://ift.tt/2SQtTW9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...