ಉತ್ತರ ಪ್ರದೇಶದಲ್ಲಿ ಬಿಸಿಯೂಟದ ಪಾತ್ರೆಯಲ್ಲಿ ಬಿದ್ದು ಮೂರು ವರ್ಷದ ಬಾಲಕಿ ಸಾವು

ಲಖನೌ: ಮೂರು ವರ್ಷದ ಬಾಲಕಿಯೊಬ್ಬಳು ಆಗತಾನೆ ಬೇಯಿಸಿಟ್ಟಿದ್ದ ಮಧ್ಯಾಹ್ನದ ಬಿಸಿಯೂಟದ ದೊಡ್ಡ ಪಾತ್ರೆಗೆ ಬಿದ್ದು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮಿರ್ಜಾಪುರದ ರಾಮ್‌ಪುರ ಅಟಾರಿ ಗ್ರಾಮದಲ್ಲಿ ಜರುಗಿದೆ. ಮೃತಳನ್ನು ಆಂಛಲ್‌ ಎಂದು ಗುರುತಿಸಲಾಗಿದೆ. ಸೋಮವಾರ ಎಂದಿನಂತೆ ತನ್ನ ಸಹೋದರರಾದ ಗಣೇಶ್‌ , ಹಿಮಾಂಶು ಜತೆಗೆ ಬಾಲಕಿ ಸರಕಾರಿ ಪ್ರಾಥಮಿಕ ಶಾಲೆಗೆ ತೆರಳಿದ್ದಳು. ಮಧ್ಯಾಹ್ನ 12 ಗಂಟೆಗೆ ಸಿದ್ಧಪಡಿಸಿ ತಯಾರಕರು ಕೋಣೆಯಿಂದ ಆಚೆಗೆ ತೆರಳಿದ್ದರು. ಆ ಸಂದರ್ಭದಲ್ಲಿ ಊಟಕ್ಕಾಗಿ ವಿದ್ಯಾರ್ಥಿಗಳು ಜಮಾವಣೆಗೊಂಡು ನೂಕುನುಗ್ಗಲು ಉಂಟಾದ ಕಾರಣ ಆಂಛಲ್‌ ಆಯತಪ್ಪಿ ಊಟ ತಯಾರಿಸಿದ್ದ ಪಾತ್ರೆಗೆ ಬಿದ್ದಳು. ವಿದ್ಯಾರ್ಥಿಗಳ ಕಿರುಚಾಟ ಕೇಳಿ ಶಿಕ್ಷಕ ನರೇಂದ್ರ ಕುಮಾರ್‌ ವರ್ಮಾ ಕೆಲವೇ ನಿಮಿಷಗಳಲ್ಲಿ ಅಡುಗೆ ಕೋಣೆಗೆ ಆಗಮಿಸಿ ಬಾಲಕಿಯನ್ನು ಹೊರೆತೆಗೆದರಾದರೂ ಆಕೆಗೆ ಮೈಯೆಲ್ಲ ವಿಪರೀತವಾಗಿ ಸುಟ್ಟು ಹೋಗಿತ್ತು. ನಂತರ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಆಂಛಲ್‌ ಮೃತಪಟ್ಟಳು ಎಂದು ಜಿಲ್ಲಾ ಮ್ಯಾಜಿಸ್ಪ್ರೇಟ್‌ ಸುಶೀಲ್‌ ಕುಮಾರ ಪಟೇಲ್‌ ಅವರು ತಿಳಿಸಿದ್ದಾರೆ. ದುರಂತ ಹಿನ್ನೆಲೆಯಲ್ಲಿ ಶಾಲೆಯ ಪ್ರಾಂಶುಪಾಲ ಸಂತೋಷ್‌ ಕುಮಾರ್‌ ಯಾದವ್‌ ಅವರನ್ನು ವಜಾಗೊಳಿಸಲಾಗಿದೆ.


from India & World News in Kannada | VK Polls https://ift.tt/2Sep3k4

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...