ನವದೆಹಲಿ: ನರೇಂದ್ರ ಮೋದಿ ಇಂದಿನ ಕಾರ್ಯಕ್ರಮದಲ್ಲಿ ಕೇರಳದ ಕೊಲ್ಲಂನ ಭಾಗಿರತಿ ಅವರ ಪ್ರೇರಣಾದಾಯಕ ಕಥೆ ಹೇಳಿದ್ದು ವಿಶೇಷವಾಗಿತ್ತು. 58ನೇ ಮನ್ ಕಿ ಬಾತ್‌ನಲ್ಲಿ ಮಾತನಾಡಿದ ಮೋದಿ ಕೇರಳದ ಕೊಲ್ಲಂನ ಭಾಗಿರತಿ ಅಮ್ಮನವರನ್ನು ಉದಾಹರಣೆಯಾಗಿ ತೆಗೆದುಕೊಂಡು ದೇಶದ ಜನರಿಗೆ ಸ್ಪೂರ್ತಿ ತುಂಬಿದರು. 10ನೇ ವರ್ಷಕ್ಕೆ ಶಾಲೆ ಬಿಟ್ಟ ತಮ್ಮ 105ನೇ ವಯಸ್ಸಿನಲ್ಲಿ ವಿದ್ಯಾಭ್ಯಾಸವನ್ನು ಪುನಃ ಪ್ರಾರಂಭಿಸಿ, ಶೇ.75ರಷ್ಟು ಅಂಕಗಳೊಂದಿಗೆ ಲೆವೆಲ್ 4 ಪರೀಕ್ಷೆಯನ್ನು ಉತ್ತೀರ್ಣರಾಗಿದ್ದಾರೆ. ಅವರು ನಮಗೆಲ್ಲಾ ಸ್ಪೂರ್ತಿ. ಅವರಿಗೆ ನನ್ನ ಗೌರವ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದರು. ಭಾಗಿರತಿ ಅವರ ಜೊತೆಗೆ ದೇಶದ ವಿಜ್ಞಾನಿಗಳನ್ನು ಸ್ಮರಿಸಿದ ಮೋದಿ, ಯುವಕರಿಗೆ ವಿಜ್ಞಾನಿಗಳು ಸ್ಪೂರ್ತಿಯಾಗಿದ್ದಾರೆ. ಮಕ್ಕಳು ಮತ್ತು ಯುವಕರಲ್ಲಿ ವೈಜ್ಞಾನಿಕ ಪ್ರಜ್ಞೆ ಬೆಳೆಸಲು ಮತ್ತೊಂದು ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಶ್ರೀಹರಿಕೋಟಾದಲ್ಲಿ ನೀವೀಗ ರಾಕೆಟ್ ಉಡಾವಣೆಯನ್ನು ನೋಡಬಹುದು. ಅದಕ್ಕಾಗಿಯೇ 10 ಸಾವಿರ ಆಸನ ಸಾಮರ್ಥ್ಯವುಳ್ಳ ಗ್ಯಾಲರಿಯನ್ನು ಶ್ರೀಹರಿಕೋಟಾದಲ್ಲಿ ನಿರ್ಮಿಸಲಾಗಿದೆ ಎಂದರು. ನಮ್ಮ ದೇಶದ ಪ್ರಕೃತಿ ವೈವಿಧ್ಯತೆ ಇಡೀ ಮಾನವ ಕುಲಕ್ಕೆ ಅಮೂಲ್ಯವಾದ ಸಂಪತ್ತು ಎಂದ ಪ್ರಧಾನಿ ಮೋದಿ, ಅದನ್ನು ಸಂರಕ್ಷಿಸುವುದು ನಮ್ಮ ಕರ್ತವ್ಯ ಎಂದು ದೇಶವಾಸಿಗಳಲ್ಲಿ ಪರಿಸರ ಕಾಳಜಿಯ ಬಗ್ಗೆ ತಿಳುವಳಿಕೆ ಮೂಡಿಸಿದರು.
from India & World News in Kannada | VK Polls https://ift.tt/2PiMkAD