ಎಎಪಿಗೆ ಅರವತ್ತು, ಬಿಜೆಪಿಗೆ ಬರೀ ಹತ್ತು, ದಿಲ್ಲಿ ಚುನಾವಣಾ ಪೂರ್ಣ ಸಮೀಕ್ಷೆ ಹೀಗಿತ್ತು!

ಹೊಸದಿಲ್ಲಿ: ಅಖಾಡದಲ್ಲಿ ಆರೋಪ ಪ್ರತ್ಯಾಪರೋಪಗಳ ಸಮರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ್ದು, 54 ರಿಂದ 60 ಸೀಟುಗಳಲ್ಲಿ ಜಯ ಗಳಿಸಲಿದೆ ಎಂದು ಭವಿಷ್ಯ ನುಡಿದಿದೆ. ಬಿಜೆಪಿಗೆ ಕೇವಲ 10 ರಿಂದ 14 ಸೀಟುಗಳು ಮಾತ್ರ ಒಲಿಯಲಿದ್ದು, ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಳ್ಳಬೇಕಾ­ಗುತ್ತದೆ. ಕಾಂಗ್ರೆಸ್ 0-2 ಸ್ಥಾನ ಗಳಿಸಲಿದೆ ಎಂದು ಸಮೀಕ್ಷೆ ಸಾರಿದೆ. 2015ರ ಸೀಟು ಗಳಿಕೆ ಹೋಲಿಕೆಯಲ್ಲಿ ಬಿಜೆಪಿಗೆ ಲಾಭವಾದರೂ ನಿರೀಕ್ಷಿತ ಮಟ್ಟದ ಗೆಲುವು ಸಿಗುವುದಿಲ್ಲ ಎನ್ನಲಾಗಿದೆ. ಆಪ್‌ ಕೂಡ 7 ಕ್ಷೇತ್ರಗಳನ್ನು ಈ ಬಾರಿ ಬಿಜೆಪಿಗೆ ಬಿಟ್ಟು ಕೊಡಬೇಕಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ. ಮತಗಳಿಕೆ ಪ್ರಮಾಣದಲ್ಲೂಆಪ್‌ ಮೊದಲು: ಚುನಾವಣೆ ಯಲ್ಲಿ ಮತಗಳಿಕೆ ಪ್ರಮಾಣವನ್ನು ಅಂದಾ­ಜಿಸಿರುವ ಸಮೀಕ್ಷೆ ಆಪ್‌ ಪಕ್ಷಕ್ಕೆ ಶೇ. 52ರಷ್ಟು, ಬಿಜೆಪಿಗೆ ಶೇ. 34ರಷ್ಟು , ಕಾಂಗ್ರೆಸ್‌ಗೆ ಶೇ. 4ರಷ್ಟು ಮತ್ತು ಇತರ ಅಥವಾ ಪಕ್ಷೇತರರಿಗೆ ಶೇ. 10ರಷ್ಟು ಲಭಿಸಲಿದೆ ಎಂದಿದೆ. 2015ರ ಹೋಲಿಕೆಯಲ್ಲಿ ಆಪ್‌ಗೆ 17% ಮತಗಳ ನಷ್ಟವಾದರೆ, ಬಿಜೆಪಿಗೆ 23% ಹಾಗೂ ಕಾಂಗ್ರೆಸ್‌ಗೆ 60% ನಷ್ಟವಾಗಲಿದೆ. ಕಾಂಗ್ರೆಸ್‌ ಕಳೆದುಕೊಳ್ಳುವ ಬೃಹತ್‌ ಪ್ರಮಾಣದ ಮತಗಳು ಮತ್ತು ಆಪ್‌ ನಡುವೆ ಯಾರಿಗೆ ಹೆಚ್ಚು ಲಾಭ ತಂದುಕೊಡಲಿದೆ ಎನ್ನುವುದನ್ನು ಕುತೂಹಲದಿಂದ ಕಾದು ನೋಡಬೇಕಿದೆ. ದಿಲ್ಲಿ ವಿಧಾನಸಭೆಗೆ ಫೆ.8ರಂದು ಚುನಾವಣೆ ನಡೆಯಲಿದ್ದು, 11ರಂದು ಫಲಿತಾಂಶ ಪ್ರಕಟವಾಗಲಿದೆ.


from India & World News in Kannada | VK Polls https://ift.tt/36R3knr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...