ಕೊರೊನಾ ಹಾವಳಿಗೆ 'ಇಟಲಿ' ಸ್ಥಬ್ದ: ದ.ಕೊರಿಯಾ, ಇರಾನ್‌, ಸಿಂಗಾಪುರದಲ್ಲಿ ಉಲ್ಬಣ!

ರೋಮ್‌: ವಿಶ್ವವ್ಯಾಪಿ ಮಹಾಮಾರಿಯಂತೆ ಹಬ್ಬುತ್ತಿರುವ ಸೋಂಕಿಗೆ ಉತ್ತರ ಇಟಲಿಯ 10ಕ್ಕೂ ಹೆಚ್ಚು ನಗರಗಳು ಅಕ್ಷರಶಃ ಸ್ಥಬ್ಧಗೊಂಡಿವೆ. ಕೊರೊನಾ ವೈರಸ್‌ಗೆ ಇಟಲಿಯಲ್ಲಿ ಮೊದಲ ಬಲಿಯಾಗಿರುವುದು ವರದಿಯಾಗುತ್ತಿದ್ದಂತೆಯೇ ರಾಷ್ಟ್ರಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಇಟಲಿಯ ಲೊಂಬಾರ್ಡಿ ಮತ್ತು ವೆನೆಟೋ ನಗರಗಳಲ್ಲಿ ಹೋಟೆಲ್‌ಗಳು, ಅಂಗಡಿ ಮಳಿಗೆಗಳು ಹಾಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜತಗೆ ಕ್ರೀಡಾಕೂಟಗಳನ್ನೂ ಸಹ ರದ್ದುಗೊಳಿಸಲಾಗಿದೆ. ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲೋದಿ, ಮಿಲಾನ್‌ ನಗರದ ಸುತ್ತಲಿನ ಸುಮಾರು 10 ಪಟ್ಟಣಗಳನ್ನು ಸ್ತಬ್ಧಗೊಳಿಸುವಂತೆ ಅಲ್ಲಿನ ಆರೊಗ್ಯ ಸಚಿವರು ಆಜ್ಞೆ ಹೊರಡಿಸಿದ್ದಾರೆ. ಇಟಲಿಯ ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯು ಕೊರೊನಾ ಸೋಂಕಿಗೆ 78ವರ್ಷದ ವ್ಯಕ್ತಿ ಬಲಿಯಾಗಿರುವ ಕುರಿತು ವರದಿ ಮಾಡಿತ್ತು. ಇಟಲಿಯ ಸುದ್ದಿ ಏಜನ್ಸಿ ಎಎನ್‌ಎಸ್ಎ ಕೂಡ ಈ ಕುರಿತು ವರದಿ ಮಾಡಿದ್ದು, ಮತ್ತಿಬ್ಬರು ವ್ಯಕ್ತಿಗಳಿಗೂ ಸೋಂಕು ಹರಡಿರುವ ಕುರಿತು ತಿಳಿಸಿವೆ. ಚೀನಾದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 76,288ಕ್ಕೆ ಏರಿಕೆಯಾಗಿದ್ದು, ಇದುವರೆಗೂ 2,345 ಜನ ಬಲಿಯಾಗಿದ್ದಾರೆ. ಹೊರತುಪಡಿಸಿ ಇತರೆ 26 ರಾಷ್ಟ್ರಗಳು ಹಾಗೂ ಪ್ರಾಂತ್ಯಗಳಿಗೂ ಕೊರೊನಾ ವೈರಸ್‌ ಹಬ್ಬಿದೆ. ಜಪಾನ್‌ನಲ್ಲಿ 14 ಮಂದಿ ಕೊರೊನಾ ಸೋಂಕಿರುವುದು ಖಾತರಿಯಾಗಿದೆ. ಉತ್ತರ ಕೊರಿಯಾ, ಇರಾನ್, ಸಿಂಗಾಪುರಕ್ಕೂ ಕೊರೊನಾ ಪ್ರವೇಶಿಸಿದೆ.


from India & World News in Kannada | VK Polls https://ift.tt/2HI3QKq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...