ಹೊಸದಿಲ್ಲಿ: ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದ ಅಪರಾಧಿ ಸದ್ಯ ಗಲ್ಲು ಶಿಕ್ಷೆ ತಪ್ಪಿಸಿಕೊಳ್ಳಲು ಮಾಡಿದ ನಾಟಕ ಈಗ ಬಯಲಾಗಿದೆ. ಮಾನಸಿಕ ಅಸ್ವಸ್ಥನಾಗಿ ಹೀಗಾಗಿ ಚಿಕಿತ್ಸೆ ಬೇಕೆಂದು ಕೋರಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಅರ್ಜಿ ವಿಚಾರಣೆ ನಡೆಸಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ವಾದ-ಪ್ರತಿವಾದ ಆಲಿಸಿ ಅರ್ಜಿಯನ್ನು ತಿರಸ್ಕರಿಸಿದರು. ನಿರ್ಭಯಾ ಪ್ರಕರಣದ ಅಪರಾಧಿ ಮಾನಸಿಕ ಅಸ್ವಸ್ಥನಂತೆ ಆಡುತ್ತಿದ್ದಾನೆ ಎಂಬುದು ಕೇವಲ ಕಟ್ಟುಕಥೆ ಎಂದು ತಿಹಾರ್ ಜೈಲು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈತ ಮಾನಸಿಕ ಅಸ್ವಸ್ಥ ಅಲ್ಲ ಎಂಬುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಇದನ್ನು ಸಾಕ್ಷ್ಯವನ್ನಾಗಿ ಪರಿಗಣಿಸಬೇಕೆಂದು ವಕೀಲರು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು. ನ್ಯಾಯಾಧೀಶರದ ಮುಂದೆ ಹಾಜರಾದ ತಿಹಾರ್ ಜೈಲಧಿಕಾರಿಗಳು ವಿನಯ್ ಶರ್ಮಾ ತಾನೇ ದೇಹದ ಮೇಲೆ ಗಾಯಗಳನ್ನು ಮಾಡಿಕೊಂಡಿದ್ದಾನೆ. ಯಾವುದೇ ಮಾನಸಿಕ ಅಸ್ವಸ್ಥತೆ ಇಲ್ಲ. ಸಿಸಿಟಿವಿ ದೃಶ್ಯಗಳಿಂದ ಇದು ದೃಢಪಟ್ಟಿದೆ ಎಂದು ಮಾಹಿತಿ ನೀಡಿದರು. ನಾನು ಮಾನಸಿಕ ಅಸ್ವಸ್ಥನಾಗಿದ್ದಾನೆ. ನನಗೆ ಚಿಕಿತ್ಸೆ ಕೊಡಿಸಬೇಕು ಎಂದು ವಿನಯ್ ಶರ್ಮಾ ಅರ್ಜಿ ಸಲ್ಲಿಸಿದ್ದ. ಈ ಕುರಿತು ಶನಿವಾರದೊಳಗೆ ವರದಿ ಸಲ್ಲಿಸುವಂತೆ ತಿಹಾರ್ ಜೈಲಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಇದೆಲ್ಲವೂ ವಿಕೃತ ಮನಸ್ಸಿನ ಕಟ್ಟುಕಥೆ. ಅವನ ದೇಹಕ್ಕೆ ಗಾಯ ಮಾಡಿಕೊಂಡಿದ್ದಾನೆ. ವೈದ್ಯರು ಕೂಡ ಪರೀಕ್ಷೆ ನಡೆಸಿದ್ದಾರೆ. ಆತ ಶಿಕ್ಷೆಯಿಂದ ಪಾರಾಗಲು ಈ ರೀತಿಯ ಕಥೆ ಕಟ್ಟಿದ್ದಾನೆ ಎಂದು ವಕೀಲರು ವಾದಿಸಿದರು. ವೈದ್ಯರು ಮತ್ತು ಮನಶಾಸ್ತ್ರಜ್ಞರು ಪ್ರತಿದಿನವೂ ನಾಲ್ವರು ಅಪರಾಧಿಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಯಾವುದೇ ರೀತಿಯ ಚಿಕಿತ್ಸೆ ಅಗತ್ಯವಿಲ್ಲ ಎಂದು ವರದಿಯನ್ನೂ ನೀಡಿದ್ದಾರೆ ಎಂದು ವಕೀಲರು ಮಾಹಿತಿ ನೀಡಿದರು. ನಿರ್ಭಯಾ ಹಂತಕರಿಗೆ ಮಾರ್ಚ್ 3 ರಂದು ಬೆಳಿಗ್ಗೆ 6 ಗಂಟೆಗೆ ಮರಣದಂಡನೆ ವಿಧಿಸಲು ನ್ಯಾಯಾಲಯ ಫೆ.17 ರಂದು ಡೆತ್ ವಾರಂಟ್ ಹೊರಡಿಸಿತ್ತು. ನಾಲ್ವರು ಅಪರಾಧಿಗಳು ಗಲ್ಲಿಗೇರಿಸಲು ಕೋರ್ಟ್ ತೀರ್ಪು ನೀಡಿದೆ.
from India & World News in Kannada | VK Polls https://ift.tt/2v5nWLS