ಶಾಕಿಂಗ್‌: ನನ್ನನ್ನು ಕೊಂದು ಬಿಡಿ; ಕುಬ್ಜತೆಯಿಂದ ಬಳುತ್ತಿರುವ 9 ವರ್ಷದ ವಿದ್ಯಾರ್ಥಿ ಅಳಲು; ಸಹಪಾಠಿಗಳು ರೇಗಿಸಿದ ಪರಿಣಾಮ

ಬ್ರಿಸ್ಬೇನ್: ಶಾಲೆಗಳಲ್ಲಿ ನಡೆಯುವ ಕೆಲವು ಘಟನೆಗಳು ವಿದ್ಯಾರ್ಥಿಗಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ. ಮಗುವಿನ ದೈಹಿಕ ಲೋಪ ದೋಷಗಳನ್ನು ಎತ್ತಿ ತೋರಿದರೆ ಅಥವಾ ಅದರ ಬಗ್ಗೆ ಸದಾ ಪ್ರತಿಕ್ರಿಯೆ ನೀಡುತ್ತಿದ್ದರೆ, ಬೆದರಿಸುತ್ತಿದ್ದರೆ ಮಾನಸಿಕವಾಗಿ ಜರ್ಜರಿತರಾಗುತ್ತಾರೆ. ಇದು ಎಷ್ಟರ ಮಟ್ಟಿಗೆ ಸಾಯುವುದಕ್ಕೂ ಹಿಂದು ಮುಂದೆ ನೋಡುವುದಿಲ್ಲ. ಈಗ ಆಸ್ಟ್ರೇಲಿಯಾದ 9 ವರ್ಷದ ಬಾಲಕನ ಕಥೆಯೂ ಹೀಗಾಗಿದೆ. ಕುಬ್ಜತೆಯಿಂದ ಬಳಲುತ್ತಿದ್ದ ಈತನನ್ನು ಸಹಪಾಠಿಗಳು ರೇಗಿಸಿ, ತಮಾಷೆ ಮಾಡಿ, ಬೆದರಿಸುತ್ತಿದ್ದಾರೆ. ಇದರಿಂದ ನೊಂದ ಆತ ನಾನು ಸಾಯಬೇಕು, ಇಲ್ಲವೇ ನನ್ನನ್ನು ಸಾಯಿಸಿ ಬಿಡಿ ಎಂದು ಹೇಳಿಕೊಂಡಿದ್ದಾನೆ. ಆಸ್ಟ್ರೇಲಿಯಾದ ಮಹಿಳೆಯೊಬ್ಬರು ತಮ್ಮ 9 ವರ್ಷದ ಕಂದನ ವಿಡಿಯೋ ಶೇರ್‌ ಮಾಡಿದ್ದಾರೆ. ಇದರಿಲ್ಲಿ ಆತ ಅಳುತ್ತಾ, ನನ್ನನ್ನು ಯಾರಾದರೂ ಕೊಂದುಬಿಡಿ ಎಂದು ಹೇಳಿಕೊಂಡಿದ್ದಾನೆ. ಇಲ್ಲದಿದ್ದರೆ ನನಗೆ ಚಾಕು ಕೊಡಿ ನಾನು ಚುಚ್ಚಿಕೊಂಡು ಸಾಯುತ್ತೇನೆ ಎಂದು ಹೇಳಿದ್ದಾನೆ. ಈ ವಿಡಿಯೋ ಮಾಡಿರುವ ತಾಯಿ ಇಡೀ ಘಟನೆಯನ್ನು ವಿವರಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಶಿಕ್ಷಕರಿಗೆ, ಶಾಲೆಯ ಆಡಳಿತ ಮಂಡಳಿಗೆ ಸಂದೇಶ ನೀಡಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ರೇಗಿಸಿದರೆ, ಬೆದರಿಸಿದರೆ ಯಾವ ರೀತಿಯಲ್ಲಿ ಮಾನಸಿಕ ಪರಿಣಾಮ ಆಗುತ್ತದೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ ಎಂದು ಸುಮಾರು 6 ನಿಮಿಷಗಳ ವಿಡಿಯೋ ಮಾಡಿದ್ದಾರೆ. ಕ್ವಾಡನ್‌ ಎಂಬ 9 ವರ್ಷದ ಯಾತನಾಮಯ ವಿಡಿಯೋ ಇದಾಗಿದೆ. ಕ್ವಾಡನ್‌ ತಾಯಿ ಯಾರ್ಕಾ ಬೈಲ್ಸ್‌ ಈ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋದಲ್ಲಿ ಮಗು ತನಗಾಗಿರುವ ಅವಮಾನ, ಯಾತನೆಯನ್ನು ಹೇಳಿಕೊಂಡಿದೆ. ಎತ್ತರ, ಮುಖ ನೋಡಿ ಶಾಲೆಯಲ್ಲಿ ಹಲವಾರು ಮಂದಿ ರೇಗಿಸಿದ್ದಾರೆ. ಕೆಲವರು ಬೆದರಿಸಿದ್ದಾರೆ. ನಾನು ಎದೆಯಲ್ಲಿ ಏನಾದರಿಂದ ಚುಚ್ಚಿಕೊಳ್ಳಬೇಕು ಎನಿಸುತ್ತದೆ. ನನ್ನನ್ನು ಯಾರಾದರೂ ಕೊಲ್ಲಲಿ ಎನಿಸುತ್ತದೆ ಎಂದು ಕ್ವಾಡನ್‌ ಅಳುತ್ತಾ ಹೇಳಿದ್ದಾನೆ. ನಂತರ ಇದಕ್ಕೆ ವಾಯ್ಸ್‌ ಓವರ್ ನೀಡಿರುವ ತಾಯಿ, ವಿದ್ಯಾವಂತರೇ, ಶಿಕ್ಷಕರೇ, ಪೋಷಕರೇ, ಸ್ನೇಹಿತರೇ ಇವನನ್ನು ನೋಡಿ ರೇಗಿಸುವುದು, ರ‍್ಯಾಗಿಂಗ್‌ ಮಾಡುವುದು, ಬೆದರಿಸುವುದರಿಂದ ಮಕ್ಕಳ ಮೇಲೆ ಏನು ಪರಿಣಾಮ ಬೀರುತ್ತದೆ ನೋಡಿ. ಈ ರೀತಿ ನಡೆದರೆ ಮಗು ಆತ್ಮಹತ್ಯೆಗೂ ಪ್ರಯತ್ನಿಸುವ ಸಾಧ್ಯತೆ ಇದೆ ಎಂದು ಆಕೆ ಹೇಳಿದ್ದಾರೆ. ಶಾಲೆಯಲ್ಲಿ ಕ್ವಾಡನ್‌ ಸ್ನೇಹಿತನೊಬ್ಬ ತಲೆಗೆ ಹೊಡೆದು ಈತನನ್ನ ಛೇಡಿಸುತ್ತಿರುವುದು ಕಂಡೆ. ಕೂಡಲೇ ಆತ ಓಡಿಬಂದು ಕಾರು ಹತ್ತಿದ. ಇಡೀ ಘಟನೆಯನ್ನು ನಾನು ನೋಡಬಾರದು ಎಂಬುದು ಅವನ ಮನದಲ್ಲಿತ್ತು. ಆದರೆ ನಾನು ಪೋಷಕಳಾಗಿ, ಪಾಲಕಳಾಗಿ ಸೋತಿದ್ದೇನೆ ಎನಿಸುತ್ತದೆ. ನಮ್ಮ ಸಮಾಜ ಯಾವ ದಿಕ್ಕಿಗೆ ಹೋಗುತ್ತಿದೆ. ಶಿಕ್ಷಣ ವ್ಯವಸ್ಥೆ ಹೇಗಿದೆ. ಈ ರೀತಿಯ ಧೋರಣೆ ನಿಲ್ಲದಿದ್ದರೆ ಪರಿಣಾಮ ಭೀಕರವಾಗಿರುತ್ತದೆ ಎಂದು ಕ್ವಾಡನ್ ತಾಯಿ ಯಾರ್ಕಾ ಬೈಲ್ಸ್‌ ಎಚ್ಚರಿಸಿದ್ದಾರೆ.


from India & World News in Kannada | VK Polls https://ift.tt/2Vf793B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...