ಚೀನಾ ಜೈಲುಗಳಿಗೆ ಕೊರೊನಾ ಹಾವಳಿ, ಅಧಿಕಾರಿಗಳ ನಿರ್ಲಕ್ಷ್ಯ: ಮೃತರ ಸಂಖ್ಯೆ 2,360ಕ್ಕೆ ಏರಿಕೆ!

ಬೀಜಿಂಗ್‌: ಹುಬೀ ಪ್ರಾಂತ್ಯದಲ್ಲಿ ಕೊರೊನಾ ವೈರಾಣುವಿಗೆ ಬಲಿಯಾಗುತ್ತಿರುವವರ ಸಂಖ್ಯೆ ಇಳಿಮುಖವಾಗಿದೆ ಎಂದು ಸರಕಾರ ನಿಟ್ಟುಸಿರುಬಿಟ್ಟ ಬೆನ್ನಿಗೆ ಅಲ್ಲಿನ ಕಾರಾಗೃಹಗಳಲ್ಲಿ ಹೊಸದಾಗಿ 500ಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ಆತಂಕ ಮೂಡಿಸಿದೆ. ಹುಬೀ ಪ್ರಾಂತ್ಯವೊಂದರಲ್ಲಿಯೇ ಕಾರಾಗೃಹಗಳಲ್ಲಿ ಒಟ್ಟು 271 ಮಂದಿಗೆ ಕೊರೊನಾ ಸೋಂಕಿರುವುದು ಶುಕ್ರವಾರ ದೃಢಪಟ್ಟಿದೆ. ಈ ಪೈಕಿ 220 ಮಂದಿಗೆ ಈ ಮುನ್ನವೇ ಸೋಂಕು ತಗುಲಿದ್ದರೂ, ಜೈಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜೈಲುಗಳಲ್ಲಿ ಕೊರೊನಾ ಹಾವಳಿಯ ಸುದ್ದಿ ಸ್ಫೋಟಗೊಂಡ ಕೂಡಲೇ ವುಹಾನ್‌ನ ಮಹಿಳಾ ಕಾರಾಗೃಹದ ಮುಖ್ಯ ವಾರ್ಡನ್‌ರನ್ನು ಸ್ಥಳೀಯ ಆಡಳಿತ ಸೇವೆಯಿಂದ ವಜಾಗೊಳಿಸಿದೆ. ಆರೋಗ್ಯ ಅಧಿಕಾರಿಗಳು ಮತ್ತು ವೈದ್ಯರ ತಂಡವನ್ನು ನಗರದ ಕಾರಾಗೃಹಗಳಿಗೆ ಕಳುಹಿಸಿ ಸೋಂಕಿತರಿಗೆ ಚಿಕಿತ್ಸೆ ಆರಂಭಿಸಲಾಗಿದೆ. ಜೈಲಿನ 7 ಮಂದಿ ಭದ್ರತಾ ಸಿಬ್ಬಂದಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 77 ಸಾವಿರಕ್ಕೆ ಏರಿಕೆ! ಹುಬೀ ಪ್ರಾಂತ್ಯದ ವುಹಾನ್‌ ನಗರದಲ್ಲಿ ಹತೋಟಿಗೆ ಬರುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಈ ನಡುವೆ ಶನಿವಾರದ ವರದಿಯಂತೆ 109 ಮಂದಿ ಸಾವನ್ನಪ್ಪಿದ್ದು, ವಿಶ್ವದಾದ್ಯಂತ ಕೊರೊನಾ ಸೋಂಕಿಗೆ ಮೃತಪಟ್ಟವರ ಸಂಖ್ಯೆ 2,360ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ 77,816ಕ್ಕೆ ಏರಿಕೆಯಾಗಿದೆ. ವರದಿ ಪ್ರಕಾರ 21 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಹಡಗಿನಲ್ಲಿರುವ ಭಾರತೀಯರ ಚೇತರಿಕೆ: ಜಪಾನ್‌ನ ಯೊಕೊಹಾಮ ಬಂದರಿನಲ್ಲಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ನಿಗಾದಲ್ಲಿಇರಿಸಲಾಗಿರುವ ಡೈಮಂಡ್‌ ಪ್ರಿನ್ಸಸ್‌ ಹಡಗಿನಲ್ಲಿ ಕೊರೊನಾಗೆ ತುತ್ತಾಗಿರುವ 8 ಮಂದಿ ಭಾರತೀಯರ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಜಪಾನ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.


from India & World News in Kannada | VK Polls https://ift.tt/2ukSxop

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...