ಟೆಸ್ಟ್ ಕ್ರಿಕೆಟ್‌ನಲ್ಲಿ ಚಾರಿತ್ರಿಕ 100ನೇ ಗೆಲುವು ಬಾರಿಸಿದ ನ್ಯೂಜಿಲೆಂಡ್

ವೆಲ್ಲಿಂಗ್ಟನ್: ಪ್ರವಾಸಿ ಭಾರತ ವಿರುದ್ದ ವೆಲ್ಲಿಂಗ್ಟನ್‌ನ ಬಾಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಮೊದಲ ಟೆಸ್ ಪಂದ್ಯದಲ್ಲಿ ನ್ಯೂಜಿಲೆಂಡ್ 10 ವಿಕೆಟ್ ಅಂತರದ ನೋಲಾಸ್ ಗೆಲುವು ದಾಖಲಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ದಾಖಲಿಸಿದೆ. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಚಾರಿತ್ರಿಕ 100ನೇ ಗೆಲುವಿನ ಸಾಧನೆ ಮಾಡಿದೆ. ಅಷ್ಟೇ ಯಾಕೆ 100ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಟೆಸ್ಟ್ ಅನ್ನು ಸ್ಮರಣೀಯವಾಗಿಸಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ 100ನೇ ಗೆಲುವು ಬಾರಿಸಿರುವ ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ಇಂಡೀಸ್ ತಂಡಗಳ ಎಲೈಟ್ ಸಾಲಿಗೆ ಸೇರಿದೆ. 441ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಈ ಸಾಧನೆ ಮಾಡಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಗೆಲುವು ಬಾರಿಸಿದ ತಂಡಗಳು:ಆಸ್ಟ್ರೇಲಿಯಾ: 393 (830 ಪಂದ್ಯ) ಇಂಗ್ಲೆಂಡ್: 371 (1022 ಪಂದ್ಯ) ವೆಸ್ಟ್‌ಇಂಡೀಸ್: 174 (545 ಪಂದ್ಯ) ದ.ಆಫ್ರಿಕಾ: 165 (439 ಪಂದ್ಯ) ಭಾರತ: 157 (541 ಪಂದ್ಯ) ಪಾಕಿಸ್ತಾನ: 138 (428 ಪಂದ್ಯ) ನ್ಯೂಜಿಲೆಂಡ್: 100 (441 ಪಂದ್ಯ) ಇನ್ನೊಂದೆಡೆ ಕಿವೀಸ್ ನೆಲದಲ್ಲಿ ಸೋಲಿನ ಮುಖಭಂಗ ಅನುಭವಿಸಿರುವ ವಿರಾಟ್ ಕೊಹ್ಲಿ ಪಡೆ, ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಸೋಲಿಗೆ ಶರಣಾಗಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ವಿದೇಶ ನೆಲದಲ್ಲಿ ಭಾರತ ಕಣಕ್ಕಿಳಿದಿತ್ತು ಎಂಬುದು ಗಮನಾರ್ಹವೆನಿಸುತ್ತದೆ. ನಾಲ್ಕನೇ ದಿನದಾಟದಲ್ಲಿ ಒಂಬತ್ತು ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ ವಿಜಯೋತ್ಸವ ಆಚರಿಸಿತ್ತು. ಭಾರತದ ಪರ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿರುವುದು ಹಿನ್ನೆಡೆಗೆ ಕಾರಣವಾಯಿತು. 144/4 ಎಂಬಲ್ಲಿದ್ದ ದ್ವಿತೀಯ ಇನ್ನಿಂಗ್ಸ್ ಮುಂದುವರಿಸಿದ ಭಾರತ ಕೇವಲ 191 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38Rupcc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...