ಮುಂಬಯಿ: ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್, ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಡಿಸೆಂಬರ್ 02 ಸೋಮವಾರದಂದು ನಟಿ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ಜೀವನದ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಮನೀಶ್ ಪಾಂಡೆ ಮತ್ತು ಮಂಗಳೂರು ಮೂಲದ ಬೆಡಗಿ ಆಶ್ರಿತಾ ಜೋಡಿಗೆ ಕ್ರಿಕೆಟ್ ಹಾಗೂ ಚಿತ್ರರಂಗ, ಅಭಿಮಾನಿಗಳ ವಲಯದಿಂದ ಅಪಾರ ಶುಭಾಶಯಗಳು ಹರಿದು ಬಂದಿವೆ. ಈ ಸಂಬಂಧ ತಾಜಾ ವಿಡಿಯೋಗಳು ಹರಿದುಬಂದಿದೆ. ಮದುವೆ ಪಾರ್ಟಿಯಲ್ಲಿ ಭಾರತದ ವಿಶ್ವಕಪ್ ಹೀರೊ ಮಾಜಿ ಆಲ್‌ರೌಂಡರ್ ಡ್ಯಾನ್ಸ್ ಮಾಡುವ ಮೂಲಕ ಧೂಳೆಬ್ಬಿಸಿದ್ದಾರೆ. ಯುವರಾಜ್ ಸಿಂಗ್ ಬಾಂಗ್ರಾ ಡ್ಯಾನ್ಸ್ ಮಾಡುವ ಮೂಲಕ ಗಮನ ಸೆಳೆದರು. ಯುವರಾಜ್ ಸಿಂಗ್ ಬಹುತೇಕ ಎಲ್ಲ ಕ್ರಿಕೆಟಿಗರೊಂದಿಗೆ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದಾರೆ. ಹಾಗೆಯೇ ತಮ್ಮ ಸ್ನೇಹಿತ ಮನೀಶ್ ಪಾಂಡೆ ವಿವಾಹ ಸಮಾರಂಭದಲ್ಲಿ ಹಾಜರಿರುವ ಮೂಲಕ ಸಂತೋಷದಲ್ಲಿ ಭಾಗಿಯಾಗಿದ್ದಾರೆ. ನವ ವರ ಮನೀಶ್ ಪಾಂಡೆ ಜತೆಗೂ ಯುವಿ ಸ್ಟೆಪ್ ಹಾಕಿದರು. ಯುವಿ ನವದಂಪತಿಗೆ ನೀಡಿರುವ ಸಂದೇಶದಲ್ಲಿ ಜೀವಮಾನದ ಸಂತೋಷವನ್ನು ಹಾರೈಸಿದ್ದಾರೆ. ಪ್ರಸ್ತುತ ಯುವಿ ಡ್ಯಾನ್ಸ್ ವಿಡಿಯೋಗಳು ವೈರಲ್ ಆಗಿ ಹರಡುತ್ತಿದೆ. ಮದುವೆಗೂ ಹಿಂದಿನ ದಿನ ಭಾನುವಾರ ಸೂರತ್‌ನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ 20 ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಿದ್ದ ಪಾಂಡೆ, ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಒಂದು ರನ್‌ನಿಂದ ಸೋಲಿಸಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಮನೀಶ್ ಜತೆ ಯುವಿ ಡ್ಯಾನ್ಸ್ ಮಸ್ತಿ
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2qmXlrv