ಅಯೋಧ್ಯೆ ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರ ಪರ ವಾದ ಮಂಡಿಸಿದ್ದ ವಕೀಲ ರಾಜೀವ್ ಧವನ್ ವಜಾ

ಹೊಸದಿಲ್ಲಿ: - ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರ ಪರವಾಗಿ ವಾದ ಮಂಡಿಸಿದ್ದ ವಕೀಲ ಅವರನ್ನು ವಜಾಗೊಳಿಸಲಾಗಿದೆ. ಬಾಬರಿ ಪ್ರಕರಣದಲ್ಲಿ ಜಮೀಯತ್ ಪರ ವಕೀಲರಾಗಿರುವ ಇಜಾಝ್ ಮಕ್ಬೂಲ್ ಅವರು ನನ್ನನ್ನು ಕೈಬಿಟ್ಟಿದ್ದಾರೆ. ಈ ನಿರ್ಧಾರವನ್ನು ಒಪ್ಪಿ ಔಪಚಾರಿಕ ಪತ್ರ ಕಳುಹಿಸಿದ್ದೇನೆ. ನಾನು ಅಸೌಖ್ಯದಿಂದಿದ್ದೇನೆಂಬ ಕಾರಣಕ್ಕೆ ನನ್ನನ್ನು ಕೈಬಿಡಲಾಗಿದೆ ಎಂದು ಮದನಿ ಅವರಿಗೆ ತಿಳಿಸಲಾಗಿದೆ ಇದು ತಪ್ಪು ಮತ್ತು ಅಸಂಬದ್ಧ'' ಆದರೆ ಇದಕ್ಕೆ ನನ್ನ ಆಕ್ಷೇಪವಿಲ್ಲ. ಈ ಪ್ರಕರಣದಲ್ಲಿ ಇನ್ನು ಮುಂದೆ ನಾನು ಭಾಗಿಯಾಗಲ್ಲ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಧವನ್ ಬರೆದುಕೊಂಡಿದ್ದಾರೆ. ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿ ಅ.16ರಂದು ಸುಪ್ರೀಂಕೋರ್ಟ್ ನಲ್ಲಿ ನಡೆದ ಅಂತಿಮ ವಿಚಾರಣೆ ವೇಳೆ ರಾಮಜನ್ಮಭೂಮಿಯ ನಕ್ಷೆಯನ್ನು ರಾಜೀವ್ ಅವರು ಹರಿದಿದ್ದರು ಅಕ್ಟೋಬರ್ ತಿಂಗಳಿನಲ್ಲಿ ನಡೆದ ಅಯೋಧ್ಯೆ ವಿವಾದ ಸಂಬಂಧ ಸಿವಿಪ್ ಪ್ರಕರಣದಲ್ಲಿ ಪ್ರತಿದಿನದ ವಿಚಾರಣೆಯಲ್ಲಿ 40 ದಿನಗಳ ಪೈಕಿ ಎರಡು ವಾರಕ್ಕೂ ಹೆಚ್ಚು ಕಾಲ ಧವನ್ ಅವರು ಮುಸ್ಲಿಮರ ಪರವಾಗಿ ವಾದಿಸಿದ್ದರು.


from India & World News in Kannada | VK Polls https://ift.tt/385hHXp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...