2020ರ ಗಣರಾಜ್ಯೋತ್ಸವಕ್ಕೂ 'ಕಲ್ಯಾಣ ಕರ್ನಾಟಕ' ಸ್ತಬ್ಧಚಿತ್ರ: ಶ್ರೀ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ: ಜ.26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕರ್ನಾಟಕದ ಸ್ತಬ್ದ ಚಿತ್ರವಾಗಿ ‘ಕಲ್ಯಾಣ ದಲ್ಲಿ ರೂಪಿಸಿದ ಶರಣರನ್ನು ಪರಿಚಯಿಸುವ ಸ್ತಬ್ಧಚಿತ್ರ ಪಾಲ್ಗೊಳ್ಳಲಿದೆ ಎಂದು ಸಾಣೇಹಳ್ಳಿ ಹೇಳಿದರು. ಸಹಮತ ವೇದಿಕೆಯಿಂದ ನಗರದ ಕುವೆಂಪು ಕನ್ನಡ ಭವನದಲ್ಲಿಬುಧವಾರ ಆಯೋಜಿಸಿದ್ದ ಸಾಣೇಹಳ್ಳಿ ಪಟ್ಟಾಧ್ಯಕ್ಷ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೂರನೇ ಕೃತಿ ‘ಕಲ್ಯಾಣದೆಡೆಗೆ’ ಲೋಕಾರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ‘ಇದು ನಮಗೆ ಸಂತೋಷದ ಸಂಗತಿ. ಇದೇ ಮಾದರಿಯ ವಾಹನದ ಜತೆಗೆ ರಂಗ ನಿರ್ದೇಶಕ ಶಶಿಧರ ಉಡುಪ ಅವರ ನಿರ್ದೇಶನದಲ್ಲಿ ನಮ್ಮ ಸಾಣೇಹಳ್ಳಿಯ 26 ಕಲಾವಿದರ ತಂಡ ದಿಲ್ಲಿಯಲ್ಲಿ ನಡೆಯುವ ಗಣ ರಾಜ್ಯೋತ್ಸವ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು. ಮತ್ತೆ ಕಲ್ಯಾಣ ಅಭಿಯಾನದ ನಂತರ ಹೈದರಾಬಾದ್‌ ಕರ್ನಾಟಕವನ್ನು ‘’ ಎಂದು ರಾಜ್ಯ ಸರಕಾರ ಮರು ನಾಮಕರಣ ಮಾಡಿದೆ. ಅನುಭವ ಮಂಟಪ ನಿರ್ಮಾಣಕ್ಕೆ ಸರಕಾರ 50 ಕೋಟಿ ರೂ. ಅನುದಾನ ನೀಡಿದೆ. ಇದು ಮತ್ತೆ ಕಲ್ಯಾಣದ ಸಾಧನೆ ಎಂದು ಶ್ರೀಗಳು ಹೇಳಿದರು. ತರಬೇತಿ: ಅಭಿಯಾನದಲ್ಲಿ ಪ್ರಕಟಿಸಿದಂತೆ ಸಾಣೇಹಳ್ಳಿಯಲ್ಲಿಏ.20ರಿಂದ ಮೇ 10ರ ವರೆಗೆ ಶರಣರ ಬದುಕು-ಬರಹ ಹಿನ್ನೆಲೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ನಡೆಯಲಿದೆ. ಯುವಜನರು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ಇಲ್ಲಿನೆರೆದಿರುವವರು ತಮಗೆ ಗೊತ್ತಿರುವ ಯುವಕರನ್ನು ಶಿಬಿರಕ್ಕೆ ಕಳುಹಿಸಬೇಕು. ವಸತಿ ಸಹಿತ ತರಬೇತಿ ಇದಾಗಿರುತ್ತದೆ ಎಂದರು.


from India & World News in Kannada | VK Polls https://ift.tt/2Zm3pxq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...