ಕೋಡಿ ನೀರಿನಲ್ಲಿ ಕೊಚ್ಚಿ ಹೋದ ಮೀನುಗಳು: ಕೋಲಾರದಲ್ಲಿ ಮೀನುಪ್ರಿಯರಿಗೆ ಹಬ್ಬ, ಸಾಕಣೆದಾರರಿಗೆ ಸಂಕಷ್ಟ!

ಮಂಜುನಾಥ್‌.ವಿ ಬೇತಮಂಗಲ ಕೋಲಾರ: ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾದ ಬೇತಮಂಗಲ ಪಾಲಾರ್‌ ನದಿ ಹಾಗೂ ರಾಮಸಾಗರ ಕೆರೆ ಸೇರಿದಂತೆ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿರುವುದು ಪ್ರಿಯರಿಗೆ ಅದೃಷ್ಟದ ಬಾಗಿಲು ತೆರೆದಂತಾಗಿದೆ. ಬೇತಮಂಗಲ ಪಾಲಾರ್‌ ನದಿ, ರಾಮಸಾಗರ ಕೆರೆ, ಕಳ್ಳಿಕುಪ್ಪ, ಗೋಸಿನ ಕೆರೆ, ಪರಸೇಪಲ್ಲಿ ಕೆರೆ ಸೇರಿದಂತೆ ಹತ್ತಾರು ಕೆರೆಗಳು ಇತ್ತೀಚಿಗೆ ಸುರಿದ ಮಳೆಯಿಂದ ತುಂಬಿ ಅಪಾಯ ಮಟ್ಟದಲ್ಲಿ ಕೋಡಿ ಹರಿದ ಹಿನ್ನೆಲೆಯಲ್ಲಿ ಕೆರೆಯ ಮೀನುಗಳೆಲ್ಲ ಕಾಲುವೆಗಳು ಸೇರಿದ್ದು, ಕಾಲುವೆಗಳ ಉದ್ದಕ್ಕೂ ಬಲೆಗಳು, ಗಾಲಗಳು ಹಾಗೂ ಇತರೆ ಬಟ್ಟೆಗಳನ್ನು ಹಾಕುವ ಮೂಲಕ ಮೀನು ಬೇಟೆಯಲ್ಲಿ ಮಗ್ನರಾಗಿದ್ದಾರೆ. ಬೇತಮಂಗಲ ಪಾಲಾರ ನದಿ ಮೀನುಗಾರಿಕೆ ಇಲಾಖೆ ಸೊಸೈಟಿ ಅಧೀನದಲ್ಲಿದ್ದು ಷೇರುದಾರರಿಗೆ ಹಾಗೂ ಇಲಾಖೆಗೆ ನಷ್ಟ ಅನುಭವಿಸಿದೆ. ಇನ್ನು ಜಿಲ್ಲೆಯ ದೊಡ್ಡ ಕೆರೆಯಾದ ರಾಮಸಾಗರ (ಬುಕ್ಕಸಾಗರ) ಕೆರೆಯೂ ಬೇತಮಂಗಲ ಮೂಲಕ ಪ್ರಭಾವಿ ಮುಖಂಡರು ಇಲಾಖೆಯಿಂದ ವರ್ಷಕ್ಕೆ 20 ಲಕ್ಷದಂತೆ ಗುತ್ತಿಗೆ ಪಡೆದು, 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಮೀನು ಮರಿಗಳನ್ನು ಸಾಕಣೆ ಮಾಡಿದವರು ಮಳೆರಾಯನ ಆರ್ಭಟಕ್ಕೆ ತತ್ತರಿಸಿದ್ದಾರೆ. ಗ್ರಾಪಂಯಿಂದ ಗುತ್ತಿಗೆಬೇತಮಂಗಲ, ಕಮ್ಮಸಂದ್ರ, ಸುಂದರಪಾಳ್ಯ, ಟಿ.ಗೊಲ್ಲಹಳ್ಳಿ, ಹುಲ್ಕೂರು, ರಾಮಸಾಗರ ಹಾಗೂ ಎನ್‌.ಜಿ.ಹುಲ್ಕೂರು ಗ್ರಾಪಂಗಳಿಂದ 2-3 ವರ್ಷಕ್ಕೆ ಹರಾಜಿನಲ್ಲಿ ಪೈಪೋಟಿಯಲ್ಲಿ ಗುತ್ತಿಗೆ ಪಡೆದು, ಮೀನು ಸಾಕಣೆ ಕಸುಬುನಲ್ಲಿ ತೊಡಗಿದವರಿಗೆ ಏಕಾಏಕಿ ಹೆಚ್ಚು ಮಳೆಯಿಂದ 6-10 ತಿಂಗಳಿಂದ ಸಾಕಣೆ ಮಾಡಿಕೊಂಡು ಹೆಚ್ಚು ಲಾಭ ಗಳಿಸುವ ನಿರೀಕ್ಷೆಯಲ್ಲಿದವರ ಲೆಕ್ಕಾಚಾರವೆ ಬದಲಾಗಿದೆ. ಕೋಡಿ ಕಾಲುವೆಯ ಮೀನು ಮಾರಾಟಕೆರೆಯ ಕೋಡಿ ಹರಿದ ಕಾಲುವೆಯಲ್ಲಿ ದಿನಪೂರ್ತಿ ಮೀನುಗಳನ್ನು ಹಿಡಿದು ಮಾರಾಟ ಮಾಡುವ ಮೂಲಕ ಕೆಲವರು ಆದಾಯ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಕೆಲವರಿಗೆ ಮಳೆಯೂ ನಷ್ಟವನ್ನು ಉಂಟು ಮಾಡಿದ್ದಾರೆ. ಇನ್ನು ಕೆಲವರಿಗೆ ಹಬ್ಬದಂತೆ ಸಂತಸ ನೀಡಿರುವುದರಿಂದ ಬೃಹತ್‌ ಕಾಲವೆಗಳಲ್ಲಿ ಮೀನು ಬೇಟೆಯಲ್ಲಿ ನಿತ್ಯ ನೂರಾರೂ ಮಂದಿ ತೊಡಗಿಸಿಕೊಂಡಿದ್ದಾರೆ. ಗ್ರಾಪಂಗಳು ಹಾಗೂ ಸಣ್ಣ ನೀರಾವರಿ ಇಲಾಖೆಗಳು ಮೀನು ಸಾಕಣೆದಾರರ ಸಂಕಷ್ಟಕ್ಕೆ ನೆರವಾಗಲಿದೆಯೇ ಎಂದು ಕಾದುನೋಡಬೇಕಿದೆ. ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದು ಕೆರೆಯ ಮೀನುಗಳೆಲ್ಲ ಕೋಡಿಯ ಮೂಲಕ ತಮಿಳುನಾಡು ಸೇರಿವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮೀನು ಸಾಕಾಣಿಕೆದಾರರ ನೆರವಿಗೆ ಬರಬೇಕು. ಅ.ಮು.ಲಕ್ಷ್ಮೀ ನಾರಾಯಣ. ಮೀನುಗಾರಿಗೆ ಇಲಾಖೆಯ ಸೊಸೈಟಿ ಅಧ್ಯಕ್ಷರು ಗ್ರಾಪಂಯಿಂದ 2 ವರ್ಷಕ್ಕೆ ಕೆರೆಯನ್ನು ಗುತ್ತಿಗೆ ಪಡೆದು 1 ಲಕ್ಷದ ಮೀನುಗಳನ್ನು ಸಾಕಣೆ ಮಾಡಲಾಗುತ್ತಿತ್ತು. ಏಕಾಏಕಿ ಮಳೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿದ್ದು ಸುಮಾರು 7-8 ಲಕ್ಷದಷ್ಟು ಲಾಭದ ನಿರೀಕ್ಷೆಯಲ್ಲಿದ್ದವರಿಗೆ ಬರಿಗೈಯಾಗಿದೆ. ಶ್ರೀನಿವಾಸ್‌, ಮೀನು ಸಾಕಣೆದಾರರು ಬೇತಮಂಗಲ


from India & World News in Kannada | VK Polls https://ift.tt/3xQB1om

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...