ಸರ್ಕಾರದ ವಿರುದ್ಧ ಆಕ್ರೋಶದ ನಡುವೆ ಚುನಾವಣೆಗೆ ಸಿದ್ಧತೆ!: ಯೋಗಿ ನಿವಾಸದಲ್ಲಿ ಬಿಜೆಪಿ ಮುಖಂಡರ ಗೋಪ್ಯ ಸಭೆ

ಲಕ್ನೋ: ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶದಲ್ಲಿ, ಮುಖ್ಯಮಂತ್ರಿ ಅವರ ಅಧಿಕೃತ ನಿವಾಸದಲ್ಲಿ ನಿರಂತರ ಗೋಪ್ಯ ಸಭೆಗಳು ನಡೆಯುತ್ತಿವೆ. ಪಕ್ಷದ ರಾಷ್ಟ್ರೋಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಮತ್ತು ಉಪಾಧ್ಯಕ್ಷ ರಾಧಾ ಮೋಹನ್ ಸಿಂಗ್ ಅವರು ಉತ್ತರ ಪ್ರದೇಶದ ಸಚಿವರೊಂದಿಗೆ ಸೋಮವಾರದಿಂದ ಎರಡು ದಿನಗಳ ಪರಾಮರ್ಶನಾ ಸಭೆಗಳನ್ನು ನಡೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರವು ಸಾಂಕ್ರಾಮಿಕ ಸನ್ನಿವೇಶವನ್ನು ನಿಭಾಯಿಸಿದ ರೀತಿ ತೀವ್ರ ಟೀಕೆಗೊಳಗಾಗಿರುವ ಹಿನ್ನೆಲೆಯಲ್ಲಿ, ಇದು ಮುಂದಿನ ವರ್ಷದ ಚುನಾವಣೆಯ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂಬುದು ಬಿಜೆಪಿಗೆ ಚಿಂತೆ ಮೂಡಿಸಿದೆ. ಹೀಗಾಗಿ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ. ಆದರೆ ಬಿಜೆಪಿ ಇದು ಮಾಮೂಲಿ ಸಂಘಟನಾ ಪ್ರಕ್ರಿಯೆಯಷ್ಟೇ ಎಂದು ತಿಳಿಸಿದೆ. ತಳಮಟ್ಟದ ರಾಜಕೀಯ ಸ್ಥಿತಿ ಮತ್ತು ಸಾರ್ವಜನಿಕರಲ್ಲಿ ಪಕ್ಷದ ಬಗ್ಗೆ, ಮುಖ್ಯವಾಗಿ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾವ ರೀತಿಯಿದೆ ಎಂಬ ಬಗ್ಗೆ ಈ ಇಬ್ಬರೂ ನಾಯಕರು ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೋವಿಡ್ ಪರಿಸ್ಥಿತಿಯನ್ನು ಸರ್ಕಾರದ ನಿಭಾಯಿಸಿದ ಬಗೆ ವಿರುದ್ಧ ವಿರೋಧಪಕ್ಷಗಳು ತೀವ್ರ ಟೀಕಾಪ್ರಹಾರ ನಡೆಸಿದ ಬೆನ್ನಲ್ಲೇ, ರಾಜ್ಯದಲ್ಲಿ 'ಸೇವಾ ಹಿ ಸಂಘಟನ್' ಎಂಬ ಪರಿಹಾರ ಕಾರ್ಯಾಚರಣೆ ಆಂದೋಲನವನ್ನು ಬಿಜೆಪಿ ಆರಂಭಿಸಿತ್ತು. ಪಕ್ಷದ ಆರು ಪ್ರಾದೇಶಿಕ ನಾಯಕರಾದ ಶೇಷ್ ನಾರಾಯಣ್ ಮಿಶ್ರಾ, ಮನ್ವೇಂದ್ರ ಸಿಂಗ್, ಮೋಹಿತ್ ಬೆನಿವಾಲ್, ಮಹೇಶ್ ಚಂದ್ರ ಶ್ರೀವಾಸ್ತವ, ಧರ್ಮೇಂದ್ರ ಸಿಂಗ್ ಸೈಥ್ವಾರ್ ಮತ್ತು ರಜನಿಕಾಂತ್ ಮಹೇಶ್ವರಿ ಅವರೊಂದಿಗೆ ಕೂಡ ಬಿಎಲ್ ಸಂತೋಷ್ ಮತ್ತು ರಾಧಾ ಮಾಧವ್ ಸಿಂಗ್ ಪ್ರತ್ಯೇಕವಾಗಿ ಮಾಹಿತಿ ಪಡೆದಿದ್ದಾರೆ. ಸಾಂಕ್ರಾಮಿಕ ನಿರ್ವಹಣೆಯಲ್ಲಿ ಲೋಪಗಳು, ಮುಂದಿನ ರಾಜಕೀಯ ತಂತ್ರಗಳು ಸೇರಿದಂತೆ ಅನೇಕ ಸಂಗತಿಗಳ ಕುರಿತು ಸಹ ಚರ್ಚಿಸಲಾಯಿತು ಎನ್ನಲಾಗಿದೆ.


from India & World News in Kannada | VK Polls https://ift.tt/3i7KXEb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...