ಹೊಸದಿಲ್ಲಿ: ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ಗೆ ತನ್ನ ದೀರ್ಘ ಕಾಲದ ಅತ್ಯಂತ ಬದ್ಧ ಎದುರಾಳಿ ತಂಡದ ಕಠಿಣ ಸವಾಲು ಎದುರಾಗಿದೆ. ಮಹತ್ವದ ಟಾಸ್ ಗೆದ್ದ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಎದುರಾಳಿ ತಂಡವನ್ನು ಮೊದಲು ಬ್ಯಾಟ್ ಮಾಡುವಂತೆ ಹೇಳಿದ್ದಾರೆ. ದಿಲ್ಲಿ ಪಿಚ್ನಲ್ಲಿ ಈ ಹಿಂದೆ ನಡೆದ ಎರಡೂ ಪಂದ್ಯಗಳಲ್ಲಿ ರನ್ಚೇಸ್ ಮಾಡಿದ ತಂಡಗಳು ಗೆದ್ದು ಬೀಗಿವೆ. ಇದೇ ಕಾರಣಕ್ಕೆ ಮುಂಬೈ ಕೂಡ ಚೇಸಿಂಗ್ ಆಯ್ಕೆ ಮಾಡಿದೆ. ತಾಂತ್ರಿಕ ಬದಲಾವಣೆ ತಂದ ಮುಂಬೈಟಾಸ್ ವೇಳೆ ಮಾತನಾಡಿದ ನಾಯಕ ರೋಹಿತ್ ಶರ್ಮಾ ಆಡುವ ಹನ್ನೊಂದರ ಬಳಗದಲ್ಲಿ ಕೆಲ ತಾಂತ್ರಿಕ ಬದಲಾವಣೆ ಮಾಡಿರುವುದಾಗಿ ಹೇಳಿದ್ದಾರೆ. ನೇಥನ್ ಕೌಲ್ಟರ್ ನೈಲ್ ಸ್ಥಾನದಲ್ಲಿ ಜೇಮ್ಸ್ ನೀಶಮ್ ಮತ್ತು ಆಫ್ ಸ್ಪಿನ್ನರ್ ಜಯಂತ್ ಯಾದವ್ ಸ್ಥಾನದಲ್ಲಿ ಮಧ್ಯಮ ವೇಗಿ ಧವಳ್ ಕುಲಕರ್ಣಿ ಆಡುವ ಹನ್ನೊಂದರ ಬಳಗ ಸೇರಿದ್ದಾರೆ. ಮತ್ತೊಂದೆಡೆ ಸಿಎಸ್ಕೆ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ. ಸಿಎಸ್ಕೆ ಪ್ಲೇಯಿಂಗ್ ಇಲೆವೆನ್ಋತುರಾಜ್ ಗಾಯಕ್ವಾಡ್, ಫಾಫ್ ಡು'ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್ ಧೋನಿ (ವಿಕೆಟ್ಕೀಪರ್ / ನಾಯಕ), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ಲುಂಗಿ ಎನ್ಗಿಡಿ, ದೀಪಕ್ ಚಹರ್. ಎಂಐ ಪ್ಲೇಯಿಂಗ್ ಇಲೆವೆನ್ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ'ಕಾಕ್ (ವಿಕೆಟ್ಕೀಪರ್), ಸೂರ್ಯಕುಮಾರ್ ಯಾದವ್, ಕೈರೊನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಜೇಮ್ಸ್ ನೀಶಮ್, ರಾಹುಲ್ ಚಹರ್, ಧವಳ್ ಕುಲಕರ್ಣಿ, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gPRbYJ