ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ, ಬಿಎಸ್ ಯಡಿಯೂರಪ್ಪನವರೇ ನಮ್ಮ ನಾಯಕರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ರಾಜ್ಯದಲ್ಲಿ ಮೂರು ಪಕ್ಷಗಳ ಸರ್ಕಾರ ಇದೆ ಎಂಬ ಸಚಿವ ಸಿ.ಪಿ ಯೋಗೀಶ್ವರ್ ಹೇಳಿಕೆಯ ಬಗ್ಗೆ ಅವರಿಂದ ವಿವರಣೆ ಪಡೆದುಕೊಳ್ಳುತ್ತೇನೆ ಎಂದರು. ರಾಜ್ಯದಲ್ಲಿ ಸದ್ಯ ಕೋವಿಡ್ ಪರಿಸ್ಥಿತಿ ಇದೆ. ಜನರ ಪ್ರಾಣ ರಕ್ಷಣೆ ನಮ್ಮ ಮೊದಲ ಜವಾಬ್ದಾರಿ. ಬೇರೆ ಯಾವುದೇ ಚಟುವಟಿಕೆಯನ್ನು ಯಾವುದೇ ಶಾಸಕ ಮಾಡಬಾರದು.ಕೋವಿಡ್ ನಿಯಂತ್ರಣಕ್ಕೆ ಹಾಗೂ ಪರಿಹಾರ ಹೊರತಾಗಿ ಬೇರೆ ಯಾವುದೇ ವಿಚಾರಕ್ಕೆ ಕೈ ಹಾಕಬಾರದು ಎಂದು ತಾಕೀತು ಮಾಡಿದರು. ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಸಿಪಿ ಯೋಗೀಶ್ವರ್ ನೀಡಿರುವ ಹೇಳಿಕೆಯ ಕುರಿತಾಗಿ ಅವರ ಜೊತೆಗೆ ವಿವರಣೆ ಕೇಳುತ್ತೇನೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ಬಿಎಸ್ ಯಡಿಯೂರಪ್ಪ ಸರ್ವ ಸಮ್ಮತಿಯ ನಾಯಕರು. ಪಕ್ಷದ ಒಳಗೆಯೂ, ಹೊರಗೆ ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು. ಈಗಾಗಲೇ ಎರಡು ವರ್ಷ ಪೂರ್ತಿ ಮಾಡಿದ್ದಾರೆ. ಉಳಿದ ಅವಧಿಯನ್ನು ಮುಖ್ಯಮಂತ್ರಿಯಾಗಿ ಬಿಎಸ್ವೈ ಪೂರ್ತಿ ಮಾಡುತ್ತಾರೆ.ಇವಾಗ ಕೋವಿಡ್ ನಿರ್ವಹಣೆ ಮಾತ್ರ ನಮ್ಮ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಬೆನ್ನಲ್ಲೇ ಸಚಿವ ಸಿ.ಪಿ ಯೋಗೀಶ್ವರ್ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಮೂರು ಪಕ್ಷಗಳ ಸರ್ಕಾರ ಇದೆ ಎಂದು ಸಿಪಿವೈ ಆರೋಪ ಮಾಡಿದ್ದರು.
from India & World News in Kannada | VK Polls https://ift.tt/3fLdkVW