ಯಾವ ಲಸಿಕೆಯೂ ಕೋವಿಡ್‌ನಿಂದ ಶೇ 100ರಷ್ಟು ರಕ್ಷಣೆ ನೀಡಲಾರದು: ಕೇಂದ್ರ ಸರ್ಕಾರ

ಹೊಸದಿಲ್ಲಿ: ಕೊರೊನಾ ವೈರಸ್‌ನಿಂದ ಶೇ 100ರಷ್ಟು ರಕ್ಷಣೆ ಒದಗಿಸುವ ಸಾಮರ್ಥ್ಯ ಯಾವ ಲಸಿಕೆಗೂ ಇಲ್ಲ ಎಂದು ಗುರುವಾರ ತಿಳಿಸಿದೆ. ವೈರಸ್‌ನಿಂದ ರಕ್ಷಣೆ ಸಾಮರ್ಥ್ಯ ಹೆಚ್ಚಿಸಲು ಬೂಸ್ಟರ್ ಡೋಸ್ ನೀಡುವ ಅಗತ್ಯದ ಬಗ್ಗೆ ಮೌಲ್ಯಮಾಪನ ಮಾಡುವ ಅಧ್ಯಯನಗಳು ನಡೆಯುತ್ತಿವೆ ಎಂದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ. ತಿಳಿಸಿದ್ದಾರೆ. ಜನರಿಗೆ ಕೊರೊನಾ ವೈರಸ್‌ ವಿರುದ್ಧ ರಕ್ಷಣೆ ಪಡೆಯಲು ಬೂಸ್ಟರ್ ಲಸಿಕೆಯ ಡೋಸ್ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಅಗತ್ಯ ಎನಿಸಿದರೆ ಜನರಿಗೆ ಮಾಹಿತಿ ನೀಡಲಾಗುವುದು ಎಂದು ಹೇಳಿದ್ದಾರೆ. ವಿರುದ್ಧದ ಆಂದೋಲನದ ಭಾಗವಾಗಿ ಪ್ರತಿಯೊಬ್ಬರಲ್ಲಿಯೂ ಪ್ರತಿರಕ್ಷಣೆ ಮೂಡಿಸಲು ಸರ್ಕಾರ ಬಯಸಿದೆ. ಬೂಸ್ಟರ್ ಡೋಸ್ ಅಗತ್ಯಬಿದ್ದರೆ ಅದರ ಬಗ್ಗೆ ತಿಳಿಸಲಾಗುವುದು. ಅದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಆರು ತಿಂಗಳ ಬಳಿಕ ಮತ್ತೊಂದು ಬೂಸ್ಟರ್ ಡೋಸ್ ತೆಗೆದುಕೊಳ್ಳಬಹುದೇ ಎಂಬ ಬಗ್ಗೆ ಕೋವ್ಯಾಕ್ಸಿನ್ ಪ್ರಯೋಗ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 'ಈಗ ಮಾರ್ಗಸೂಚಿಗಳನ್ನು ಪಾಲಿಸಿ. ಎರಡು ಡೋಸ್ ಪಡೆದುಕೊಳ್ಳಿ ಮತ್ತು ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುವುದನ್ನು ಮುಂದುವರಿಸಿ. ನೀವು ಗಂಭೀರ ಕಾಯಿಲೆಯಿಂದ ಸುರಕ್ಷಿತರಾಗಿದ್ದೀರಿ. ಆದರೆ ಎಚ್ಚರಿಕೆಯಿಂದಿರಿ. ರಕ್ಷಣೆ ಶೇ 100ರಷ್ಟು ಸಂಪೂರ್ಣ ಸಿಗಲಾರದು. ಬೂಸ್ಟರ್ ಅಗತ್ಯಬಿದ್ದರೆ, ಅದರ ಸಮಯವನ್ನು ತಿಳಿಸಲಾಗುವುದು. ಅದರ ಮಾರ್ಗಸೂಚಿ ಹಾಗೂ ನಿಯಮಗಳ ಮಾಹಿತಿ ನೀಡಲಾಗುತ್ತದೆ' ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/3hXJv7l

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...