ನ್ಯೂಯಾರ್ಕ್: ಭಾರತದಲ್ಲಿನ ಈಗಿನ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ರಾಜಕೀಯ ಪ್ರಯತ್ನಗಳು ನಡೆಯುತ್ತಿವೆ ಎಂದು ಎಸ್. ಜೈಶಂಕರ್ ಆರೋಪಿಸಿದ್ದಾರೆ. ಪ್ರವಾಸದಲ್ಲಿರುವ , ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜನರಲ್ ಎಚ್ ಆರ್ ಮೆಕ್ಮಾಸ್ಟರ್ ಅವರೊಂದಿಗೆ ನಡೆದ ': ಕಾರ್ಯತಂತ್ರ ಸಹಭಾಗಿತ್ವಕ್ಕೆ ಅವಕಾಶಗಳು ಮತ್ತು ಸವಾಲುಗಳು' ಎಂಬ ವಿಷಯದ ಕುರಿತಾದ ಚರ್ಚೆ ವೇಳೆ ಈ ಹೇಳಿಕೆ ನೀಡಿದ್ದಾರೆ. 'ಭಾರತವು ಈಗಿನ ಸಾಂಕ್ರಾಮಿಕದ ಕಾರಣದಿಂದಾಗಿ ಬಹಳ ಒತ್ತಡದ ಸ್ಥಿತಿಯಲ್ಲಿದೆ. ನಾವು ಸುಮಾರು 800 ಮಿಲಿಯನ್ ಜನರಿಗೆ ಉಚಿತ ಆಹಾರ ನೀಡುತ್ತಿದ್ದೇವೆ. 400 ಮಿಲಿಯನ್ ಜನರ ಬ್ಯಾಂಕ್ ಖಾತೆಗಳಿಗೆ ಹಣ ಹಾಕಿದ್ದೇವೆ. ಈ ಸರ್ಕಾರ ಇದನ್ನೆಲ್ಲ ಮಾಡಿದೆ' ಎಂದು ಹೇಳಿದ್ದಾರೆ. 'ಈಗ ಅಮೆರಿಕದ ಜನಸಂಖ್ಯೆಗಿಂತ ಎರಡೂವರೆ ಪಟ್ಟಿಗಿಂತಲೂ ಅಧಿಕ ಜನಸಂಖ್ಯೆಗೆ ಆಹಾರ ನೀಡುವ ಹಾಗೂ ಅಮೆರಿಕ ಜನಸಂಖ್ಯೆಗಿಂತ ಅಧಿಕ ಜನರಿಗೆ ಅನುದಾನ ನೀಡುವ ಕೆಲಸವನ್ನು ಸದ್ದಿಲ್ಲದೆ ಮಾಡಲಾಗುತ್ತಿದೆ. ಇದಕ್ಕಿಂತ ನಾವು ಹೆಚ್ಚೇನೂ ಕೇಳಲಾಗದು. ಇಲ್ಲಿ ತಾರತಮ್ಯಕ್ಕೆ ಅವಕಾಶವೇ ಇಲ್ಲ' ಎಂದು ತಿಳಿಸಿದ್ದಾರೆ. 'ನೈಜ ಆಡಳಿತ ನಿರ್ಣಯಗಳಿಗೆ ಬಂದರೆ, ನೀವು ಸರ್ಕಾರದ ಬಗ್ಗೆ ಬಿಂಬಿಸುತ್ತಿರುವ ರಾಜಕೀಯ ಚಿತ್ರಣಕ್ಕೂ ಮತ್ತು ಅಲ್ಲಿನ ವಾಸ್ತವ ಆಡಳಿತಾತ್ಮಕ ದಾಖಲೆಗಳಿಗೂ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಬಹುದು. ವಾಸ್ತವ ರಾಜಕೀಯದ ವಿಚಾರವನ್ನು ನೀವು ಪರಿಗಣಿಸಬೇಕು. ನಮ್ಮ ಹಾಲಿ ಸರ್ಕಾರವನ್ನು ನಿರ್ದಿಷ್ಟ ರೀತಿಯಲ್ಲಿ ಬಿಂಬಿಸುವ ರಾಜಕೀಯ ಪ್ರಯತ್ನಗಳು ನಡೆಯುತ್ತಿವೆ' ಎಂದು ಆರೋಪಿಸಿವೆ. ಡೆಮಾಕ್ರಟಿಕ್ ಮತ್ತು ರಿಪಬ್ಲಿಕನ್ ಪಕ್ಷದ ಪ್ರಭಾವಶಾಲಿ ಸಂಸದರನ್ನು ಗುರುವಾರ ಭೇಟಿ ಮಾಡಿದ ಜೈಶಂಕರ್, ಕ್ವಾಡ್ ಒಕ್ಕೂಟಕ್ಕೆ ಸಂಬಂಧಿಸಿದ ಬೆಳವಣಿಗೆಗಳು ಹಾಗೂ ಲಸಿಕೆಗಳ ಸಹಕಾರದ ಕುರಿತಾಗಿ ಚರ್ಚಿಸಿದರು. ಭಾರತವು ಕೋವಿಡ್ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅಮೆರಿಕದ ಕಾಂಗ್ರೆಸ್ ಅಮೋಘ ಬೆಂಬಲದ ಸ್ಥಂಭವಾಗಿ ನಿಂತಿದೆ ಎಂದು ಜೈಶಂಕರ್ ಅವರು ಸಂಸದರಾದ ಬ್ರಾಡ್ ಶರ್ಮನ್ ಮತ್ತು ಸ್ಟೀವ್ ಚಾಬೋಟ್ ಅವರ ಭೇಟಿ ಬಳಿಕ ಟ್ವೀಟ್ ಮಾಡಿದ್ದಾರೆ. 'ಭಾರತದ ಸಚಿವ ಜೈಶಂಕರ್ ಅವರನ್ನು ಇಂದು ನಾನು ಭೇಟಿ ಮಾಡಿದ್ದೇನೆ. ನಮ್ಮ ಜನರಿಂದ ಜನರ ಒಪ್ಪಂದಗಳು ಮತ್ತು ನಮ್ಮ ಮೌಲ್ಯಗಳು ಅಮೆರಿಕ-ಭಾರತ ಪಾಲುದಾರಿಕೆಯ ಬುನಾದಿಯಾಗಿವೆ ಮತ್ತು ಸಾಂಕ್ರಾಮಿಕವನ್ನು ಅಂತ್ಯಗೊಳಿಸಲು, ಹವಾಮಾನದಲ್ಲಿ ಮುಂದಾಳತ್ವ ವಹಿಸಲು ಹಾಗೂ ಮುಕ್ತ ಮತ್ತು ತೆರೆದ ಇಂಡೋ-ಪೆಸಿಫಿಕ್ ಬೆಂಬಲಿಸಲು ನೆರವಾಗಲಿದೆ' ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ತಿಳಿಸಿದ್ದಾರೆ. ಭಾರತಕ್ಕೆ ಅಮೆರಿಕವು ಇದುವರೆಗೂ 500 ಮಿಲಿಯನ್ ಡಾಲರ್ಗೂ ಅಧಿಕ ಮೊತ್ತದ ಪರಿಹಾರಗಳನ್ನು ಒದಗಿಸಿದೆ ಎಂದು ಅವರು ಹೇಳಿದ್ದಾರೆ.
from India & World News in Kannada | VK Polls https://ift.tt/3oZ4uI8