WTC ಫೈನಲ್‌ಗೂ ಮೊದಲೇ ಕಿವೀಸ್‌ ಮೇಲುಗೈಗೆ ಕಾರಣ ತಿಳಿಸಿದ ವೆಂಗ್ಸರ್ಕರ್‌!

ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್‌ ನಡುವೆ ನಡೆಯಬೇಕಿರುವ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದಲ್ಲಿ ಯಾವ ತಂಡಕ್ಕೆ ಮೇಲುಗೈ ಇದೆ ಎಂಬುದನ್ನು ಭಾರತ ತಂಡದ ಮಾಜಿ ನಾಯಕ ವಿವರಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನ ವಿಶ್ವಕಪ್ ಟೂರ್ನಿ ಎಂದೇ ಮಹತ್ವ ಪಡೆದುಕೊಂಡಿರುವ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯವು ಜೂನ್‌ 18-22ರವರೆಗೆ ಸೌತ್‌ಹ್ಯಾಂಪ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ತಂಡ ಜೂನ್‌ 2ರಂದು ಚೆನ್ನೈನಿಂದ ಲಂಡನ್‌ಗೆ ಚಾರ್ಟರ್‌ ವಿಮಾನದ ಮೂಲಕ ಪ್ರಯಾಣ ಬೆಳೆಸಲಿದೆ. ಬಳಿಕ 3 ದಿನಗಳ ಕಟ್ಟು ನಿಟ್ಟಿನ ಕ್ವಾರಂಟೈನ್‌ ನಂತರ ಅಭ್ಯಾಸ ಆರಂಭಿಸಲಿದೆ. ಅದೇ ನ್ಯೂಜಿಲೆಂಡ್‌ ತಂಡ ಈಗಾಗಲೇ ಇಂಗ್ಲೆಂಡ್‌ನಲ್ಲಿ ಬೀಡುಬಿಟ್ಟಿದ್ದು, ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮುನ್ನ ಆತಿಥೇಯ ಇಂಗ್ಲೆಂಡ್‌ ಎದುರು 2 ಪಂದ್ಯಗಳ ಟೆಸ್ಟ್‌ ಸರಣಿ ಆಡಲಿದ್ದು, ಈ ಸರಣಿ ಜೂನ್ 2ರಂದು ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ. ಈ ಬಗ್ಗೆ ಮಾತನಾಡಿರುವ ದಿಲೀಪ್‌ ವೆಂಗ್ಸರ್ಕರ್‌, ಕೇನ್‌ ವಿಲಿಯಮ್ಸನ್‌ ಸಾರಥ್ಯದ ನ್ಯೂಜಿಲೆಂಡ್‌ ತಂಡಕ್ಕೆ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮೊದಲೇ ಮೇಲುಗೈ ಲಭ್ಯವಾಗಿದೆ ಎಂದು ಹೇಳಿದ್ದಾರೆ. ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೂ ಮುನ್ನ ಇಂಗ್ಲೆಂಡ್‌ ವಿರುದ್ಧ ನಡೆಯಲಿರುವ 2 ಪಂದ್ಯಗಳ ಟೆಸ್ಟ್‌ ಸರಣಿ ನ್ಯೂಜಿಲೆಂಡ್‌ ತಂಡಕ್ಕೆ ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ನೆರವಾಗಲಿದೆ. ಈ ಮೂಲಕ ಸತತ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವನ್ನು ಎದುರಿಸುವಾಗ ಸಂಪೂರ್ಣ ಸಜ್ಜಾಗಿ ಕಣಕ್ಕಿಳಿಯಲಿದೆ. ಇನ್ನು ಜೂನ್‌ನಲ್ಲಿ ಇಂಗ್ಲೆಂಡ್‌ನ ಹವಾಗುಣ ಮೋಡ ಮುಚ್ಚಿದ ವಾತಾವರಣದಿಂದ ಕೂಡಿರಲಿದೆ. ಇದು ಕಿವೀಸ್‌ ಪಡೆಗೆ ತಾಯ್ನಾಡಿನ ಸ್ಥಿತಿಗತಿಗಳನ್ನು ತಂದುಕೊಡಲಿದ್ದು, ನ್ಯೂಜಿಲೆಂಡ್‌ ತಂಡದ ವೇಗಿಗಳು ಇದರ ಸಂಪೂರ್ಣ ಲಾಭ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಈಗಾಗಲೇ ಹಲವು ಕ್ರಿಕೆಟ್‌ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಮತ್ತೊಂದೆಡೆ ಒಟ್ಟು 520 ಅಂಕಗಳನ್ನು ಗಳಿಸಿದ ಟೀಮ್‌ ಇಂಡಿಯಾ ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಕಾಲಿಟ್ಟಿದೆ. ತನ್ನ ಕಳೆದ ಎರಡು ಟೆಸ್ಟ್‌ ಸರಣಿಗಳಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳನ್ನು ಬಗ್ಗುಬಡಿದಿರುವ ಭಾರತ ತಂಡ ಆತ್ಮವಿಶ್ವಾಸದ ಅಲೆಯಲ್ಲಿದೆ ಆದರೂ, ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮುನ್ನ ಅಲ್ಲಿನ ಪರಿಸ್ಥಿತಿಗೆ ಬಹುಬೇಗ ಹೊಂದಿಕೊಳ್ಳುವುದರಲ್ಲಿ ತಂಡದ ಪ್ರದರ್ಶನ ಮಟ್ಟ ನಿರ್ಧಾರವಾಗಲಿದೆ. ಇನ್ನು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ನ್ಯೂಜಿಲೆಂಡ್‌ ತಂಡ ಸತತ ಸೋಲುಂಡರೆ ಅಥವಾ ಗಾಯದ ಸಮಸ್ಯೆಗಳನ್ನು ಏನಾದರೂ ಎದುರಿಸಿದರೆ ಭಾರತ ವಿರುದ್ಧ ಫೈನಲ್ ಪಂದ್ಯದಲ್ಲಿ ಒತ್ತಡಕ್ಕೆ ಒಳಗಾಗುವ ಸಾಧ್ಯತೆಯೂ ಇದೆ. ಭಾರತಕ್ಕೆ ಹೊಂದಿಕೊಳ್ಳುವುದೇ ಸವಾಲು: ವೆಂಗ್ಸರ್ಕರ್‌ಕಿವೀಸ್‌ ಸವಾಲು ಮೆಟ್ಟಿನಿಂತು ಟೆಸ್ಟ್‌ ಕ್ರಿಕೆಟ್‌ನ ವಿಶ್ವಕಪ್‌ ಟ್ರೋಫಿಯನ್ನು ಭಾರತ ತಂಡ ಮುಡಿಗೇರಿಸಿಕೊಳ್ಳಬೇಕಾದರೆ ಮೊದಲಿಗೆ ಇಂಗ್ಲೆಂಡ್‌ನ ಹವಾಗುಣಕ್ಕೆ ಹೊಂದಿಕೊಳ್ಳುವ ಅಗತ್ಯವಿದೆ ಎಂದು 65 ವರ್ಷದ ಮಾಜಿ ಕ್ರಿಕೆಟಿಗ ವೆಂಗ್ಸರ್ಕರ್‌ ಅಭಿಪ್ರಾಯ ಪಟ್ಟಿದ್ದಾರೆ. "ಖಂಡಿತಾ ನ್ಯೂಜಿಲೆಂಡ್‌ ತಂಡಕ್ಕೆ ಮೇಲುಗೈ ಇದೆ. ಏಕೆಂದರೆ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮೊದಲು ಇಂಗ್ಲೆಂಡ್‌ ಎದುರು 2 ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಇದು ಖಂಡಿತಾ ಕಿವೀಸ್‌ ಪಡೆಗೆ ನೆರವಾಗಲಿದೆ. ಆದರೆ, ಭಾರತ ತಂಡ ಎಷ್ಟು ಬೇಗ ಅಲ್ಲಿನ ಸ್ಥಿತಿಗತಿಗಳಿಗೆ ಹೊಂದಿಕೊಳ್ಳುತ್ತದೆ ಎಂಬುದು ಇಲ್ಲಿ ಮುಖ್ಯ. ಆದರೂ ಎರಡು ಪಂದ್ಯಗಳನ್ನು ಆಡಿ ಮೂರನೇ ಪಂದ್ಯಕ್ಕೆ ಮುಂದಾಗುವ ನ್ಯೂಜಿಲೆಂಡ್‌ಗೆ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಉತ್ತಮ ಅರಿವಿರುತ್ತದೆ. ಅದೇ ವಿರಾಟ್‌ ಕೊಹ್ಲಿ ಬಳಗ ಮೊದಲ ಪಂದ್ಯವನ್ನಾಡಲು ಅಣಿಯಾಗಲಿದೆ," ಎಂದು ವೆಂಗ್ಸರ್ಕರ್‌ ನ್ಯೂಸ್‌ 18ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fyo1MH

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...