ಹೊಸದಿಲ್ಲಿ: ಅಮೆರಿಕದ ರಾಯಭಾರ ಕಚೇರಿಗೆ ರಾಯಭಾರಿ ಡೇನಿಯಲ್ ಸ್ಮಿತ್ ನೇಮಕ

ಹೊಸದಿಲ್ಲಿ: ನಗರದಲ್ಲಿರುವ ಅಮೆರಿಕದ ಕಚೇರಿಗೆ ಚಾರ್ಜ್ ಡಿ ಅಫೈರ್ಸ್ ಆಗಿ ರಾಯಭಾರಿ ನೇಮಕಗೊಂಡಿದ್ದಾರೆ. ಇತ್ತೀಚಿನವರೆಗೆ ಪ್ರಭಾರ ಸೆಕ್ರೆಟರಿ ಆಫ್‌ ಸ್ಟೇಟ್‌ ಮತ್ತು ಹಂಗಾಮಿ ಡೆಪ್ಯುಟಿ ಸೆಕ್ರೆಟರಿ ಆಫ್‌ ಸ್ಟೇಟ್‌ ಆಗಿ ಕಾರ್ಯನಿರ್ವಹಿಸಿದ ಫಾರಿನ್ ಸರ್ವೀಸಸ್ ಇನ್ಸ್ಟಿಟ್ಯೂಟ್ ನಿರ್ದೇಶಕರಾದ ಅಂಬಾಸಿಡರ್ ಡೇನಿಯಲ್ ಸ್ಮಿತ್ ಅವರು ಮಧ್ಯಂತರ ಚಾರ್ಜ್ ಡಿ ಅಫೇರ್ಸ್ ಆಗಿ ಕಾರ್ಯ ನಿರ್ವಹಿಸಲು ನವದೆಹಲಿಗೆ ತೆರಳಲಿದ್ದಾರೆ. ರಾಯಭಾರಿ ಸ್ಮಿತ್ ಅವರು ಅಂಬಾಸಡರ್ ವೃತ್ತಿಜೀವನದ ಅತ್ಯುನ್ನತ ವಿದೇಶಾಂಗ ಸೇವಾ ಶ್ರೇಣಿ ಹೊಂದಿದ್ದಾರೆ. ರಾಯಭಾರಿ ಸ್ಮಿತ್ ಅವರ ನೇಮಕವು ಭಾರತ ಸರ್ಕಾರ ಮತ್ತು ಭಾರತೀಯರಡೆಗೆ ಅಮೆರಿಕದ ಸಹಭಾಗಿತ್ವ ಮತ್ತು ಬಲವಾದ ಬದ್ಧತೆಯನ್ನು ಪ್ರತಿಪಾದಿಸುತ್ತದೆ. ಜಾಗತಿಕ ಸಾಂಕ್ರಾಮಿಕ ಪಿಡುಗಿನ ನಿವಾರಣೆಯೂ ಸೇರಿದಂತೆ ಉಭಯ ದೇಶಗಳ ಸಮಾನ ಆದ್ಯತೆಗಳ ಮುಂದುವರಿಕೆಯನ್ನು ಖಚಿತ ಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗೆ ಸಹಕಾರವನ್ನು ಮುಂಚೂಣಿಯಲ್ಲಿ ನಿಂತು ನಿಭಾಯಿಸಲಿದ್ದಾರೆ. ಭಾರತದೊಂದಿಗೆ ಕೈ ಜೋಡಿಸಿ ನಿಂತಿದೆ, ಮತ್ತು ರಾಯಭಾರಿ ಸ್ಮಿತ್ ಭಾರತದೊಂದಿಗೆ ಜತೆಗೂಡಿ ಕೆಲಸ ಮಾಡಲು ಬದ್ಧರಾಗಿದ್ದಾರೆ. ಭಾರತದಲ್ಲಿನ ಮಾರಕ ಕೋವಿಡ್ ಎರಡನೆಯ ಅಲೆ ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಸೂಚನೆ ಕಾಣಿಸುತ್ತಿಲ್ಲ. ಹೀಗಾಗಿ ಸೋಂಕು ಹರಡುವುದನ್ನು ತಡೆಯಲು ತಕ್ಷಣದಿಂದಲೇ ಕೆಲವು ವಾರಗಳ ಮಟ್ಟಿಗೆ ಲಾಕ್‌ಡೌನ್ ಜಾರಿಗೊಳಿಸಬೇಕು ಎಂದು ಅಮೆರಿಕದ ಸಾಂಕ್ರಾಮಿಕ ರೋಗ ತಜ್ಞ ಆಂಟೋನಿ ಫೌಸಿ ಸಲಹೆ ನೀಡಿದ್ದಾರೆ.


from India & World News in Kannada | VK Polls https://ift.tt/3e5oghw

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...