ಜಿಂದಾಲ್‌ಗೆ ಭೂಮಿ ಮಾರಾಟ ನಿರ್ಧಾರಕ್ಕೆ ತಡೆ: ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

: ಸಂಸ್ಥೆಗೆ 3,667 ಎಕರೆ ನೀಡುವ ಕುರಿತಾಗಿ ಹಿಂದಿನ ಸಂಪುಟದಲ್ಲಿ ತೆಗೆದುಕೊಂಡಿರುವ ತೀರ್ಮಾನಕ್ಕೆ ಗುರುವಾರ ನಡೆದ ಸಭೆಯಲ್ಲಿ ಒಪ್ಪಿಗೆ ನೀಡಿಲ್ಲ. ಜಿಂದಾಲ್ ಗೆ ಭೂಮಿ ನೀಡಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಸ್ವತಃ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಭೂಮಿ ನೀಡುವ ನಿರ್ಧಾರಕ್ಕೆ ತಡೆ ಹಿಡಿಯಲಾಗಿದೆ. ಈ ಕುರಿತಾಗಿ ವಿಧಾನಸೌಧದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ಸಂಬಂಧ ಪಿಐಎಲ್ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಹಿಂದಿನ ಸಂಪುಟದ ನಿರ್ಧಾರವನ್ನು ತಡೆಹಿಡಿಯಲು ಸಂಪುಟ ನಿರ್ಧರಿಸಿದೆ. ಆದರೆ ಭವಿಷ್ಯದಲ್ಲಿ ಈ ಬಗ್ಗೆ ಏನಾಗಲಿದೆ ಎಂಬುವುದು ತಿಳಿದಿಲ್ಲ ಎಂದು ಬೊಮ್ಮಾಯಿ ಹೇಳಿದರು. ಮೇಕೆದಾಟು ಎನ್ ಜಿಟಿ ಆದೇಶ ಪ್ರಶ್ನಿಸಲು ಸೂಚನೆ: ಮೇಕೆದಾಟು ಯೋಜನೆ ಸಂಬಂಧ ಎನ್‌ಜಿಟಿ ಸಮಿತಿ ರಚಿಸಿರುವ ಆದೇಶವನ್ನು ಪ್ರಶ್ನಿಸಿ ಎನ್ ಜಿಟಿಯಲ್ಲೇ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು. ಈ ಸಂಬಂಧ ಸಿಎಂ‌ ನೇತೃತ್ವದಲ್ಲಿ ಸಭೆ ನಡೆಸಿದ್ದೇವೆ. ಜಲಸಂಪನ್ಮೂಲ ಅಧಿಕಾರಿಗಳು, ಕಾನೂನು ತಜ್ಞರ ಜೊತೆ ಸಭೆ ನಡೆಸಲಾಗಿದೆ‌. ಈ ಅದೇಶ ಸಮಂಜಸ ಅಲ್ಲ. ಮಾಧ್ಯಮಗಳ ವರದಿ ಆಧಾರದಲ್ಲಿ ಎನ್ ಜಿಟಿ ಈ ಆದೇಶವನ್ನು ನೀಡಿದೆ. ಈ ಆದೇಶವನ್ನು ಪ್ರಶ್ನಿಸಲಿದ್ದು, ಅದನ್ನು ವಾಪಸು‌ ಪಡೆಯಲು ಕೋರಲಿದ್ದೇವೆ ಎಂದರು. ಸಂಪುಟ ಸಭೆಯ ಪ್ರಮುಖ ನಿರ್ಣಯಗಳು: - ಪಶು ಸಂಗೋಪನೆ ಇಲಾಖೆಯಿಂದ ಪಿಪಿಪಿ ಮಾದರಿಯಲ್ಲಿ 90 ಕೋಟಿ ರೂ. ವೆಚ್ಚದಲ್ಲಿ ಹಾವೇರಿಯಲ್ಲಿ ಅಲ್ಟ್ರಾ ಪ್ಯಾಕೇಜ್ ಮಿಲ್ಕ್ ಪ್ರೊಡಕ್ಟ್ ಯುನಿಟ್ ಸ್ಥಾಪನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ಕೊಡಲಾಗಿದೆ. - ಕರ್ನಾಟಕ ಎಲೆಕ್ಟ್ರಿಕ್ ಎನರ್ಜಿ ಸ್ಟೋರೇಜ್ ಪಾಲಿಸಿ 15% ಬಂಡವಾಳ ಸಬ್ಸಿಡಿಯನ್ನು ಐದು ಕಂತುಗಳಲ್ಲಿ ನೀಡುವುದು ಹಾಗೂ ಇದನ್ನು ಗರಿಷ್ಠ 50 ಎಕರೆ ಸ್ಥಿರಾಸ್ತಿಗೆ ನಿಗದಿಪಡಿಸಲು ತಿದ್ದುಪಡಿಗೆ ಅನುಮೋದನೆ ನೀಡಲಾಗಿದೆ. - ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ತನಿಖೆಗೆ ಸಂಪುಟ ಸಭೆಯಲ್ಲಿ ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ಅಸೆಂಬ್ಲಿಯಲ್ಲಿ ಚರ್ಚೆಯಾಗಿತ್ತು. ರಾಜ್ಯಪಾಲರೂ ಇದನ್ನು ತಿರಸ್ಕರಿಸಿದ್ದರು. ಸೆಕ್ರೆಟರಿ ಎಕ್ಸಾಮಿನೇಷನ್ ಅಥಾರಿಟಿ ಇರುತ್ತಾರೆ. ಅದಕ್ಕಾಗಿ ಈ ಪ್ರಸ್ತಾಪ ಕೈ ಬಿಡಲಾಗಿದೆ. - ಹಾಸನ ಮೆಡಿಕಲ್ ಕಾಲೇಜಿನಲ್ಲಿ 52 ಹೊಸ ಪಿಜಿ ಸೀಟ್ ಹೆಚ್ಚಳಕ್ಕೆ ಒಪ್ಪಿಗೆ - ಕಂದಾಯ ಇಲಾಖೆಯಲ್ಲಿ 18.07 ಎಕರೆ ಆದಿನಾರಾಯಣ ಹಳ್ಳಿ ದೊಡ್ಡಬಳ್ಳಾಪುರದಲ್ಲಿ ಹೋಂಡಾ ಆಕ್ಟಿವ್ ಕಂಪನಿಗೆ ಗೋಮಾಳ ಜಮೀನು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಆದಿ ಚುಂಚನಗಿರಿ ಮಠಕ್ಕೆ ಜಮೀನು ನೀಡಲು ಹಿಂದಿನ ಸಂಪುಟದಲ್ಲಿ ತೀರ್ಮಾನವಾಗಿತ್ತು. - ಬಸವನಗುಡಿ ಲ್ಯಾಂಡ್ 25 ವರ್ಷ ಲೀಸ್ ಮುಂದುವರಿಕೆ - ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಮಸ್ಕಿ, ಇಂಡಿ, ಚಡಚಣ, ಕೊಲ್ಹಾರ್ ಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ. - ಪಾಂಡವಪುರ, ನಾಗಮಂಗಲ, ಬಹುಗ್ರಾಮ ಕುಡಿಯುವ ನೀರು - ಹುಬ್ಬಳ್ಳಿ ಧಾರವಾಡ, ಉಡುಪಿ, ಬೈಂದೂರು ಕ್ಷೇತ್ರಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ - ಹೊಳಲ್ಕೆರೆ ತಾಲೂಕಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ - ಸಿಂಗಸಂದ್ರದಲ್ಲಿ 75 ಕೋಟಿ ವೆಚ್ಚದ ಕಮರ್ಷಿಯಲ್ ಕಾಂಪ್ಲೆಕ್ಸ್ - ಕಲಬುರ್ಗಿಯಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ - ಮೈಸೂರು ರೋಡ್ ನಿಂದ ಉತ್ತರ ಹಳ್ಳಿ ರೋಡ್ ಅಭಿವೃದ್ಧಿಗೆ 25.7 ಕೋಟಿ ರೂಪಾಯಿ - ಕನಕಪುರ ಸಿಟಿ ಮುನ್ಸಿಪಲ್ ಕೋರ್ಟ್ ಕಾಮಗಾರಿ 7 ರಿಂದ 10 ಕೋಟಿಗೆ ಹೆಚ್ಚಳ - ಕಲಬುರ್ಗಿ ನಗರದಲ್ಲಿ 50-50 ಮಾದರಿಯಲ್ಲಿ ಬಿಲ್ಡಿಂಗ್ - ಹಾಸನ ದಲ್ಲಿ ಐದು ಪಾರ್ಕ್ ಅಭಿವೃದ್ಧಿಗೆ ಒಪ್ಪಿಗೆ ನೀಡಲಾಗಿದೆ. - ಅಣ್ಣಿಗೆರೆ, ಸುರಪುರ, ಶಾಪುರ, ಶಿವಮೊಗ್ಗ, ಹೊನ್ನಾಳಿ ಟೌನ್ ಗಳ ಕುಡಿಯುವ ನೀರು ಯೋಜನೆ 770 ಕೋಟಿ ರೂ ನೀಡಲು ಅನುಮೋದನೆ ನೀಡಲಾಗಿದೆ. - ಕೊವಿಡ್ ಹಿನ್ನೆಲೆಯಲ್ಲಿ ಜಿಲ್ಲೆಗಳಲ್ಲಿ ಮಕ್ಕಳ ವಾರ್ಡ್ ಆರಂಭಿಸುವುದು. - ಆಕ್ಸಿಜನ್ ಪ್ರಮಾಣ ಹೆಚ್ಚಳ ಮಾಡಲು ಕ್ರಮ


from India & World News in Kannada | VK Polls https://ift.tt/34lEBsD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...